ಮಾಜಿ ನೌಕಾದಳ ಅಧಿಕಾರಿಗಳ ಮರಣದಂಡನೆ ಶಿಕ್ಷೆ ವಿರುದ್ಧ ಭಾರತ ಸರ್ಕಾರದ ಅಪೀಲನ್ನು ಸ್ವೀಕರಿಸಿದ ಖತರ್ ನ್ಯಾಯಾಲಯ

Update: 2023-11-24 06:32 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಎಂಟು ಮಂದಿ ಮಾಜಿ ನೌಕಾದಳ ಅಧಿಕಾರಿಗಳ ಮರಣದಂಡನೆ ಶಿಕ್ಷೆ ವಿರುದ್ಧ ಭಾರತ ಸಲ್ಲಿಸಿದ ಮನವಿಯನ್ನು ಖತರ್‌ನ ನ್ಯಾಯಾಲಯ ಸ್ವೀಕರಿಸಿದೆ. ಗೂಢಚರ್ಯೆ ಆರೋಪದ ಮೇಲೆ ಈ ಎಂಟು ಮಂದಿಗೆ ಮರಣದಂಡನೆ ಶಿಕ್ಷೆಯನ್ನು ಕಳೆದ ತಿಂಗಳು ಘೋಷಿಸಲಾಗಿತ್ತು. ಭಾರತ ಸಲ್ಲಿಸಿರುವ ಅಪೀಲನ್ನು ಅವಲೋಕಿಸಿ ವಿಚಾರಣೆಯ ದಿನಾಂಕವನ್ನು ಖತರ್‌ ನ್ಯಾಯಾಲಯ ನಿಗದಿಪಡಿಸಲಿದೆ.

ಗೂಢಚರ್ಯೆ ಆರೋಪದ ಮೇಲೆ ಎಂಟು ಮಂದಿಯನ್ನು ಖತರ್‌ ಗುಪ್ತಚರ ಏಜನ್ಸಿ ಆಗಸ್ಟ್‌ 2022ರಲ್ಲಿ ಬಂಧಿಸಿತ್ತು. ಆದರೆ ಅವರ ವಿರುದ್ಧದ ಆರೋಪಗಳ ಕುರಿತು ಕತಾರ್‌ ಪ್ರಾಧಿಕಾರಗಳು ಇಲ್ಲಿಯ ತನಕ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಅವರ ಜಾಮೀನು ಅರ್ಜಿಗಳನ್ನು ಹಲವು ಬಾರಿ ತಿರಸ್ಕರಿಸಲಾಗಿತ್ತು.

ಅವರಿಗೆ ಕಾನ್ಸುಲಾರ್‌ ಆಕ್ಸೆಸ್‌ ಒದಗಿಸಲಾಗಿರುವುದರಿಂದ ಅವರ ಬಿಡುಗಡೆಗಾಗಿ ಭಾರತ ಸರ್ಕಾರ ಶ್ರಮಿಸುತ್ತಿದೆ.

ಕಮಾಂಡರ್‌ ಪೂರ್ಣೇಂದು ತಿವಾರಿ, ಕಮಾಂಡರ್‌ ಸುಗುಣಕರ್‌ ಪಕಲ, ಕಮಾಂಡರ್‌ ಅಮಿತ್‌ ನಾಗ್ಪಾಲ್‌, ಕಮಾಂಡರ್‌ ಸಂಜೀವ್‌ ಗುಪ್ತಾ, ಕ್ಯಾಪ್ಟನ್‌ ನವತೇಜ್‌ ಸಿಂಗ್‌ ಗಿಲ್‌, ಕ್ಯಾಪ್ಟನ್‌ ಬೀರೇಂದ್ರ ಕುಮಾರ್‌ ವರ್ಮ, ಕ್ಯಾಪ್ಟನ್‌ ಸೌರಭ್‌ ವಸಿಷ್ಠ್‌ ಮತ್ತು ಸೈಲರ್‌ ರಾಗೇಶ್‌ ಗೋಪಕುಮಾರ್‌ ಅವರು ಶಿಕ್ಷೆ ವಿಧಿಸಲ್ಪಟ್ಟವರಾಗಿದ್ದಾರೆ.

ಇವರೆಲ್ಲರೂ ಭಾರತದ ನೌಕಾದಳದಲ್ಲಿ ಸುಮಾರು 20 ವರ್ಷಗಳ ಕಾಲ ಮಹತ್ವದ ಹುದ್ದೆಗಳನ್ನು ನಿಭಾಯಿಸಿದವರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News