ದಿಲ್ಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಂವಾದ

Update: 2023-09-28 17:09 GMT

                                                                         ರಾಹುಲ್ ಗಾಂಧಿ| Photo: X \ @RahulGandhi

ಹೊಸದಿಲ್ಲಿ: ಇತ್ತೀಚಿಗಷ್ಟೇ ದಿಲ್ಲಿಯ ಆನಂದ ವಿಹಾರ ರೈಲು ನಿಲ್ದಾಣದಲ್ಲಿ ಪೋರ್ಟರ್‌ಗಳನ್ನು ಭೇಟಿಯಾಗಿ ಅವರಿಗೆ ಅಚ್ಚರಿಯನ್ನು ಮೂಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಇಲ್ಲಿಯ ಕೀರ್ತಿ ನಗರದ ಫರ್ನಿಚರ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡು ಬಡಗಿಗಳೊಂದಿಗೆ ಸಂವಾದ ನಡೆಸಿದರು.

‘ನಾನಿಂದು ಕೀರ್ತಿನಗರದಲ್ಲಿಯ ಏಶ್ಯಾದ ಅತ್ಯಂತ ದೊಡ್ಡ ಫರ್ನಿಚರ್ ಮಾರುಕಟ್ಟೆಗೆ ತೆರಳಿ ಬಡಗಿ ಸೋದರರನ್ನು ಭೇಟಿಯಾಗಿದ್ದೆ. ಅವರು ಕಠಿಣ ಪರಿಶ್ರಮಿಗಳಾಗಿರುವ ಜೊತೆಗೆ ಅದ್ಭುತ ಕಲಾವಿದರೂ ಆಗಿದ್ದಾರೆ. ನಾವು ತುಂಬ ಮಾತನಾಡಿದೆವು,ಅವರ ಕೌಶಲ್ಯಗಳ ಕುರಿತು ಕೊಂಚ ತಿಳಿದುಕೊಂಡೆ ಮತ್ತು ಕೊಂಚ ಕಲಿಯಲೂ ಪ್ರಯತ್ನಿಸಿದೆ ’ಎಂದು ರಾಹುಲ್ Xನಲ್ಲಿಯ ಪೋಸ್ಟ್‌ನಲ್ಲಿ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News