ಹಾಥ್ರಸ್ ಕಾಲ್ತುಳಿತ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ ರಾಹುಲ್ ಗಾಂಧಿ
ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು, ಹಾಥ್ರಸ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಸಲುವಾಗಿ ಉತ್ತರ ಪ್ರದೇಶದ ಹಾಥ್ರಸ್ಗೆ ಸೋಮವಾರ ಬೆಳಿಗ್ಗೆ ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಘಟನಾ ಸ್ಥಳಕ್ಕೆ ಹಿರಿಯ ವಿರೋಧ ಪಕ್ಷದ ಮುಖಂಡರೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಮತ್ತು ವಕ್ತಾರರಾದ ಸುಪ್ರಿಯಾ ಶ್ರಿನೇತ್ ಮತ್ತು ಇತರ ಪದಾಧಿಕಾರಿಗಳು ರಾಹುಲ್ಗಾಂಧಿಯವರ ಜತೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ.
"ಪಕ್ಷದ ಮೂಲಕ ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಸತ್ಸಂಗ ಸ್ಥಳದ ನಿರ್ವಹಣೆ ಚೆನ್ನಾಗಿರಲಿಲ್ಲ. ಸೂಕ್ತ ವೈದ್ಯಕೀಯ ಸೌಲಭ್ಯ ಇದ್ದರೆ ನನ್ನ ಅತ್ತಿಗೆಯನ್ನು ಉಳಿಸಿಕೊಳ್ಳಬಹುದಿತ್ತು. ಸ್ಥಳದಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ" ಎಂದು ಸಂತ್ರಸ್ತರೊಬ್ಬರ ಕುಟುಂಬದ ಸದಸ್ಯರು ಹೇಳಿದರು.
ನಾರಾಯಣ ಸರ್ಕಾರ್ ಅಥವಾ ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮದ ಕೊನೆಯಲ್ಲಿ ಮಂಗಳವಾರ ಸಂಜೆ ಕಾಲ್ತುಳಿತ ಸಂಭವಿಸಿ 121 ಮಂದಿ ಮೃತಪಟ್ಟಿದ್ದರು. ಬಾಬಾ ಅವರ ಆಶೀರ್ವಾದ ಪಡೆಯಲು ಭಕ್ತರು ನುಗ್ಗಿದಾಗ ಕಾಲ್ತುಳಿತ ಸಂಭವಿಸಿತು ಎಂದು ಹೇಳಲಾಗಿದೆ.
आज नेता विपक्ष श्री @RahulGandhi ने हाथरस हादसे के पीड़ित परिवारों से मिलकर उन्हें ढाढस बंधाया और हिम्मत दी।
— Indian Youth Congress (@IYC) July 5, 2024
हाथरस में भगदड़ से 100 से ज्यादा लोगों की दर्दनाक मौत हो गई और कई लोग घायल हैं।
अलीगढ़, उत्तर प्रदेश pic.twitter.com/2Nrs9Hlqkk