ರಾಜಸ್ಥಾನ : ಅತ್ಯಾಚಾರಿಯ ಬಂಧನಕ್ಕೆ ಆಗ್ರಹಿಸಿ ನೀರಿನ ಟ್ಯಾಂಕ್ ಮೇಲೆ ಹತ್ತಿದ ದಲಿತ ಮಹಿಳೆ

Update: 2024-02-12 16:57 GMT

Photo : NDTV 

ಜೈಪುರ : ತನ್ನ ಮೇಲೆ ಅತ್ಯಾಚಾರವನ್ನು ಎಸಗಿದವನನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಮಹಿಳೆಯೊಬ್ಬಳು ಇಲ್ಲಿಯ ಓವರ್ಹೆಡ್ ನೀರಿನ ಟ್ಯಾಂಕ್ ನ ತುದಿಗೆ ಹತ್ತಿದ ಘಟನೆ ಸೋಮವಾರ ಬೆಳಿಗ್ಗೆ ಜೈಪುರ ನಗರದಲ್ಲಿ ನಡೆದಿದೆ.

ಪೋಲಿಸರು ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕವೇ ಮಹಿಳೆ ಟ್ಯಾಂಕಿನಿಂದ ಕೆಳಕ್ಕೆ ಇಳಿದಿದ್ದಾಳೆ. ಸಂತ್ರಸ್ತ ಮಹಿಳೆ ಜ.16ರಂದು ಪಪ್ಪು ಗುಜ್ಜರ್ ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಳು ಎನ್ನಲಾಗಿದೆ.

ಆರೋಪಿಯನ್ನು ತಕ್ಷಣ ಬಂಧಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬೇಡಿಕೆಯೊಂದಿಗೆ ಮಹಿಳೆ ನೀರಿನ ಟ್ಯಾಂಕ್ ಹತ್ತಿದ್ದಳು.

ಘಟನೆಯ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿರುವ ದಲಿತ ಸಮುದಾಯದ ಸದಸ್ಯರು ಪ್ರಕರಣದಲ್ಲಿ ಪೋಲೀಸರ ಉದಾಸೀನ ಧೋರಣೆಯನ್ನು ಆರೋಪಿಸಿದ್ದಾರೆ. ಆರೋಪಿಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವಲ್ಲಿ ಪೋಲಿಸರು ವಿಫಲಗೊಂಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಬೇರೊಂದು ಜಿಲ್ಲೆಗೆ ಸೇರಿರುವ ಮಹಿಳೆ ಪ್ರಸ್ತುತ ಪೋಲಿಸರ ವಶದಲ್ಲಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News