ಸವಾಲುಗಳನ್ನು ಎದುರಿಸಲು RBI ಜಾಗೃತವಾಗಿರಲಿದೆ : ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ

Update: 2024-12-11 13:06 GMT

ಸಂಜಯ್ ಮಲ್ಹೋತ್ರಾ | PC : X

ಮುಂಬೈ: ನೀತಿ ನಿರೂಪಣೆ ವಿಚಾರದಲ್ಲಿ ಕೇಂದ್ರೀಯ ಬ್ಯಾಂಕ್ ನಿರಂತರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿರುವ ನೂತನ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ, ಹಾಲಿ ಜಾಗತಿಕ ಹಾಗೂ ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿ ಜಾಗೃತ ಹಾಗೂ ಚುರುಕಾಗಿರಬೇಕಾದ ಅಗತ್ಯವನ್ನೂ ಬುಧವಾರ ಒತ್ತಿ ಹೇಳಿದರು.

ಇದಕ್ಕೂ ಮುನ್ನ, ಇಂದು ಬೆಳಗ್ಗೆ ಆರು ವರ್ಷಗಳ ನಂತರ, ನಿನ್ನೆ ತಮ್ಮ ಹುದ್ದೆಯಿಂದ ನಿರ್ಗಮಿಸಿದ ಶಕ್ತಿಕಾಂತ್ ದಾಸ್ ಬದಲಿಗೆ ಸಂಜಯ್ ಮಲ್ಹೋತ್ರಾ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.

ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಸಂಜಯ್ ಮಲ್ಹೋತ್ರಾ, “ನಾವು ನೀತಿ ನಿರೂಪಣೆಯಲ್ಲಿ ನಿರಂತರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಾದ ವಾಸ್ತವದ ಬಗ್ಗೆ ಜಾಗರೂಕರಾಗಿರಬೇಕಾದರೂ, ನಾವದಕ್ಕೆ ಅಂಟಿಕೊಂಡು ಕೂರಬಾರದು. ಸವಾಲುಗಳನ್ನು ಎದುರಿಸಲು ನಾವು ಜಾಗೃತ ಮತ್ತು ಚುರುಕಾಗಿರಬೇಕಾದ ಅಗತ್ಯವಿದೆ” ಎಂದು ಅಭಿಪ್ರಾಯ ಪಟ್ಟರು.

ಭಾರತೀಯ ರಿಸರ್ವ್ ಬ್ಯಾಂಕ್ ನ ಪರಂಪರೆಯನ್ನು ಮುಂದುವರಿಸಲು ಹಣಕಾಸು ನಿಯಂತ್ರಕರು, ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರ ಸೇರಿದಂತೆ ಎಲ್ಲ ವಲಯಗಳೊಂದಿಗಿನ ಸಂವಾದವನ್ನು ಕೇಂದ್ರೀಯ ಬ್ಯಾಂಕ್ ಮುಂದುವರಿಸಲಿದೆ ಎಂದೂ ತಮ್ಮ ಕ್ಲುಪ್ತ ಪ್ರಕಟಣೆಯಲ್ಲಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News