ವಾರಣಾಸಿ: ದೇವಾಲಯಗಳಿಂದ ಸಾಯಿಬಾಬಾ ಪ್ರತಿಮೆ ತೆಗೆದುಹಾಕಿದ ಹಿಂದುತ್ವ ಸಂಘಟನೆ

Update: 2024-10-02 12:11 GMT

pc : x \ @sarkarimas53468 

ವಾರಣಾಸಿ: 'ಸನಾತನ ರಕ್ಷಕ ದಳ' ಎಂಬ ಹಿಂದುತ್ವ ಸಂಘಟನೆ ಮಂಗಳವಾರ ವಾರಣಾಸಿಯ ಅನೇಕ ದೇವಾಲಯಗಳಿಂದ ಸಾಯಿಬಾಬಾ ಅವರ ಪ್ರತಿಮೆಗಳನ್ನು ತೆಗೆದು ಹಾಕಿದೆ.

ಬಡಾ ಗಣೇಶ ದೇವಸ್ಥಾನದಿಂದ ಸಾಯಿಬಾಬಾ ಪ್ರತಿಮೆಯನ್ನು ತೆಗೆದು ದೇವಸ್ಥಾನದ ಆವರಣದ ಹೊರಗೆ ಇರಿಸಲಾಗಿದೆ ಎಂದು Hindustan Times ವರದಿ ಮಾಡಿದೆ. ಬಡಾ ಗಣೇಶ ದೇವಸ್ಥಾನದ ಪ್ರಧಾನ ಅರ್ಚಕ ರಾಮು ಗುರು ಮಾತನಾಡಿ, "ಸರಿಯಾದ ಜ್ಞಾನವಿಲ್ಲದೆ ಸಾಯಿಬಾಬಾ ಪ್ರತಿಮೆಗೆ ಪೂಜಿಸಲಾಗುತ್ತಿತ್ತು, ಶಾಸ್ತ್ರಗಳ ಪ್ರಕಾರ ಇದು ಸರಿಯಲ್ಲ" ಎಂದು ಹೇಳಿದ್ದಾರೆ.

ಅನ್ನಪೂರ್ಣ ದೇಗುಲದ ಪ್ರಧಾನ ಅರ್ಚಕ ಶಂಕರ್ ಪುರಿ ಮಾತನಾಡಿ, ಧರ್ಮಗ್ರಂಥಗಳಲ್ಲಿ ಸಾಯಿಬಾಬಾ ಅವರನ್ನು ಪೂಜಿಸುವ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ.

ಅಯೋಧ್ಯೆಯ ಹನುಮಾನ್ಗರ್ಹಿ ದೇವಸ್ಥಾನದ ಮಹಂತ್ ರಾಜು ದಾಸ್ ಮಾತನಾಡುತ್ತಾ, ಸಾಯಿಬಾಬಾ ಅವರು ಧಾರ್ಮಿಕ ಬೋಧಕರು, ಮಹಾಪುರುಷ, ಆದರೆ ಅವರು ದೇವರಲ್ಲ. ವಾರಣಾಸಿಯಲ್ಲಿನ ಸಾಯಿಬಾಬಾರವರ ವಿಗ್ರಹವನ್ನು ತೆಗೆದುಹಾಕಿರುವ ಬಗ್ಗೆ ನಾನು ಕೃತಜ್ಞನಾಗಿದ್ದೇನೆ. ದೇಶದ ಎಲ್ಲಾ ಸನಾತನಿಗಳು ಸಾಯಿಬಾಬಾ ಅವರ ವಿಗ್ರಹವನ್ನು ದೇವಾಲಯಗಳಿಂದ ತೆಗೆದುಹಾಕಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಸನಾತನ ರಕ್ಷಕ ದಳದ ರಾಜ್ಯಾಧ್ಯಕ್ಷ ಅಜಯ್ ಶರ್ಮಾ ಮಾತನಾಡಿ, ವಾರಣಾಸಿಯಲ್ಲಿ ಶಿವ ಪರಮಾತ್ಮನ ಆರಾಧನೆ ಮಾತ್ರ ಮಾಡಬೇಕು. ಭಕ್ತರ ಭಾವನೆಗಳನ್ನು ಗೌರವಿಸಿ ಈಗಾಗಲೇ 10 ದೇವಸ್ಥಾನಗಳಿಂದ ಸಾಯಿಬಾಬಾ ಅವರ ಮೂರ್ತಿಗಳನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಅಗಸ್ತ್ಯಕುಂಡ ಮತ್ತು ಭೂತೇಶ್ವರ ದೇವಸ್ಥಾನದಿಂದಲೂ ಪ್ರತಿಮೆಗಳನ್ನು ತೆಗೆಯಲಾಗುವುದು ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News