ಯುವಕರನ್ನು ಜೀವಂತ ಸುಟ್ಟ ಪ್ರಕರಣದ ಇತರ ಆರೋಪಿಗಳೊಂದಿಗೆ ಸ್ವಘೋಷಿತ ಗೋರಕ್ಷಕ ಮನೇಸರ್ ನಿರಂತರವಾಗಿ ಸಂಪರ್ಕದಲ್ಲಿದ್ದ; ಪೊಲೀಸರು

Update: 2023-09-15 18:02 GMT

ಮೋನು ಮನೇಸರ್

ಚಂಡೀಗಢ: ರಾಜಸ್ಥಾನದ ಸೋದರ ಸಂಬಂಧಿಗಳಾದ ನಾದಿರ್ ಹಾಗೂ ಜುನೈದ್ ಅವಳಿ ಕೊಲೆ ಪ್ರಕರಣದಲ್ಲಿ ಸ್ವಘೋಷಿತ ಗೋರಕ್ಷಕ ಮೋನು ಮನೇಸರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಎಂಬ ವರದಿಗಳಿದ್ದು, ಆತನು 20ಕ್ಕೂ ಹೆಚ್ಚು ಆರೋಪಿಗಳೊಂದಿಗೆ ವಾಟ್ಸ್ ಆ್ಯಪ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.

ವಿಚಾರಣೆಯ ಸಂದರ್ಭದಲ್ಲಿ ನಾಸಿರ್ ಹಾಗೂ ಜುನೈದ್ ಮೇಲಿನ ದಾಳಿಯು ಪೂರ್ವನಿಯೋಜಿತವಾಗಿದ್ದು, ವಾಟ್ಸ್ ಆ್ಯಪ್ ಗುಂಪಿನ ಮೂಲಕ ಆರೋಪಿಗಳು ಅವರ ಪ್ರಯಾಣ ಯೋಜನೆ ಹಾಗೂ ವಾಹನ ಸಂಖ್ಯೆಯನ್ನು ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಾಟ್ಸ್ ಆ್ಯಪ್ ಗುಂಪಿನಲ್ಲಿ ಮನೇಸರ್ ಸಕ್ರಿಯ ಸದಸ್ಯನಾಗಿದ್ದ ಎಂದು ಹೇಳಲಾಗಿದೆ.

ಈ ದಾಳಿಯ ಬಗ್ಗೆ ಮನೇಸರ್ ಗೆ ತಿಳಿದಿತ್ತು ಮಾತ್ರವಲ್ಲ; ಆ ಇಬ್ಬರು ಹತ್ಯೆಯಾದ ನಂತರ, ಆರೋಪಿಗಳನ್ನು ಆತ ಸಂಪರ್ಕಿಸಿರುವುದೂ ವಾಟ್ಸ್ ಆ್ಯಪ್ ಸಂವಾದಗಳಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆ ಇಬ್ಬರ ಹತ್ಯೆಯಾದ ನಂತರವೂ ಯಾವುದೇ ಭಯಪಡಬೇಡಿ ಎಂದು ಮನೇಸರ್ ಅಭಯ ನೀಡಿದ್ದಾಗಿ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಾದ ರಿಂಕು ಸೈನಿ ಪೊಲೀಸರಿಗೆ ತಿಳಿಸಿದ್ದಾನೆ. ನಾಸಿರ್ ಮತ್ತು ಜುನೈದ್ ಅವರ ಮೇಲಿನ ದಾಳಿಯನ್ನು ಅವರು ಹತ್ಯೆಯಾಗುವುದಕ್ಕೂ ಎಂಟು ದಿನಗಳ ಮುನ್ನ ಯೋಜಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮನೇಸರ್ ಬಂಧನದ ವಿರುದ್ಧ ಬಲಪಂಥೀಯ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವೋಟಿಗಾಗಿ ನಮಗೆ ವಿಶ್ವಾಸದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿವೆ. ತಮ್ಮನ್ನು ಗುರಿಯಾಗಿಸಿಕೊಂಡು ಬಲಿ ನೀಡಲಾಗುತ್ತಿದೆ ಎಂದು ಆರೋಪಿಸಿ ಗುರುಗ್ರಾಮ ಹಾಗೂ ನೂಹ್ ಜಿಲ್ಲೆಯ ಕೆಲವು ಬಜರಂಗ ದಳದ ಸದಸ್ಯರು ಸಂಘಟನೆಯನ್ನು ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News