ಸಿಕ್ಕಿಂ | ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ ತಮಾಂಗ್

Update: 2024-06-03 16:15 GMT

PC : PTI 

ಗ್ಯಾಂಗ್ಟಕ್ : ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್ಕೆಎಂ)ದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಪ್ರೇಮ ಸಿಂಗ್ ತಮಾಂಗ್ ಅವರು ಸೋಮವಾರ ಇಲ್ಲಿಯ ರಾಜಭವನದಲ್ಲಿ ರಾಜ್ಯಪಾಲ ಲಕ್ಷಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿಯಾಗಿ ಮುಂದಿನ ಸರಕಾರ ರಚನೆಗೆ ಹಕ್ಕು ಮಂಡಿಸಿದರು.

ರಾಜ್ಯಪಾಲರ ಭೇಟಿ ಸಂದರ್ಭ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಎಸ್ಕೆಎಂ ಶಾಸಕರು ತಮಾಂಗ್ ಜೊತೆಯಲ್ಲಿದ್ದರು. ಆಚಾರ್ಯ ನೂತನ ಶಾಸಕರನ್ನು ಅಭಿನಂದಿಸಿ, ಶುಭ ಹಾರೈಸಿದರು.

ಎರಡನೇ ಬಾರಿ ಸಿಕ್ಕಿಂ ಮುಖ್ಯಮಂತ್ರಿಯಾಗುತ್ತಿರುವ ತಮಾಂಗ್ ಮತ್ತು ಅವರ ಸಚಿವ ಸಂಪುಟ ಯಾವಾಗ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದರು.

ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ತಮಾಂಗ್ ನೂತನ ಸರಕಾರ ರಚನೆಗೆ ರಂಗವನ್ನು ಸಜ್ಜುಗೊಳಿಸಲು ರವಿವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದರು. ಸದ್ಯಕ್ಕೆ ಹಂಗಾಮಿ ಮುಖ್ಯಮಂತ್ರಿಯಾಗಿ ಮಂದುವರಿಯುವಂತೆ ರಾಜ್ಯಪಾಲರು ಅವರಿಗೆ ಸೂಚಿಸಿದ್ದರು.

ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆಯ ಮತಎಣಿಕೆ ರವಿವಾರ ನಡೆದಿದ್ದು, 32 ಸ್ಥಾನಗಳ ಪೈಕಿ 31ನ್ನು ಎಸ್ಕೆಎಂ ಗೆದ್ದಿದ್ದರೆ ಪ್ರತಿಪಕ್ಷ ಎಸ್ಡಿಎಫ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News