ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನ; ದಿಲ್ಲಿ ಸುತ್ತಮುತ್ತ ಕಂಪನದ ಅನುಭವ

Update: 2023-11-06 11:46 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ : ನೇಪಾಳದಲ್ಲಿ 5.6 ತೀವೃತೆಯ ಭೂಕಂಪ ಸೋಮವಾರ ಮತ್ತೆ ಸಂಭವಿಸಿದ್ದರಿಂದ, ದಿಲ್ಲಿ ಮತ್ತು ಸುತ್ತಮುತ್ತ ಮಧ್ಯಾಹ್ನ ಭೂಕಂಪನದ ಅನುಭವಾಗಿದೆ ಎಂದು NDTV ವರದಿ ಮಾಡಿದೆ. ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಸಂಭವಿಸುತ್ತಿರುವ ಎರಡನೇ ಭೂಕಂಪನ ಇದು.

ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರಕ್ಕೆ 233 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ದಿಲ್ಲಿ ಮತ್ತು ಹೊಸದಿಲ್ಲಿಯಲ್ಲಿ ಭೂಮಿ ಕಂಪಿಸಿದ ಅನುಭವಕ್ಕೆ ಜನರು ವಸತಿ ಪ್ರದೇಶಗಳಿಂದ ಭೀತಿಯಿಂದ ಹೊರಬಂದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿನ ದೃಶ್ಯಾವಳಿಗಳು ಜನರು ವಸತಿ ಕಟ್ಟಡಗಳಿಂದ ಹೊರಬರುವುದನ್ನು ತೋರಿಸಿದೆ. ಕಳೆದ ಶುಕ್ರವಾರ, ನೇಪಾಳದಲ್ಲಿ 6.4 ತೀವೃತೆಯ ಪ್ರಬಲವಾದ ಭೂಕಂಪವು ಕನಿಷ್ಠ 157 ಜನರನ್ನು ಬಲಿ ತೆಗೆದುಕೊಂಡಿತು. ಇದು 2015 ರಿಂದ ನೇಪಾಳದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪವಾಗಿದೆ. ನೇಪಾಳವು ವಿಶ್ವದ ಟೆಕ್ಟೋನಿಕ್ ವಲಯಗಳಲ್ಲಿ ಒಂದಾಗಿದೆ, ಈ ವಲಯಗಳಲ್ಲಿ ಭೂಕಂಪಗಳು ಹೆಚ್ಚು ಸಂಭವಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News