ಜಾತಿ ವ್ಯವಸ್ಥೆಯ ಮರುವರ್ಗೀಕರಣ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2023-07-04 16:29 GMT

ಸುಪ್ರೀಂ ಕೋರ್ಟ್ | Photo: PTI 

ಹೊಸದಿಲ್ಲಿ: ಜಾತಿ ವ್ಯವಸ್ಥೆಯ ಮರುವರ್ಗೀಕರಣಕ್ಕಾಗಿ ಕೇಂದ್ರಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

‘ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ. ಈ ರೀತಿಯ ಪಿಐಎಲ್ ಗಳು ಸಲ್ಲಿಕೆಯಾಗುವುದು ನಿಲ್ಲಲೇಬೇಕು’ ಎಂದು ಕಟುವಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಪಿ.ಎಸ್.ನರಸಿಂಹ ಅವರ ಪೀಠವು ಅರ್ಜಿಯನ್ನು ಸಲ್ಲಿಸಿದ್ದ ನ್ಯಾಯವಾದಿ ಸಚಿನ್ ಗುಪ್ತಾ ಅವರಿಗೆ 25,000 ರೂ.ದಂಡವನ್ನು ವಿಧಿಸಿತು.

ಜಾತಿ ವ್ಯವಸ್ಥೆಯ ಮರುವರ್ಗೀಕರಣಕ್ಕಾಗಿ ನೀತಿಯೊಂದನ್ನು ರೂಪಿಸಲು ಸಂವಿಧಾನದ ವಿಧಿ 32ರಡಿ ಕೇಂದ್ರಕ್ಕೆ ನಿರ್ದೇಶ ನೀಡುವಂತೆ ಕೋರಲಾಗಿದೆ. ಈ ಅರ್ಜಿಯು ನ್ಯಾಯಾಲಯದ ಪ್ರಕಿಯೆಯ ದುರುಪಯೋಗವಾಗಿದೆ. ಅರ್ಜಿಯನ್ನು ವಜಾಗೊಳಿಸಲಾಗಿದೆ ಮತ್ತು 25,000 ರೂ.ಗಳ ದಂಡವನ್ನು ಎರಡು ವಾರಗಳಲ್ಲಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಗೆ ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News