‘ಆದಿಪುರುಷ್’ ಬಳಗಕ್ಕೆ ಸಮನ್ಸ್ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

Update: 2023-07-12 17:15 GMT

 ‘ಆದಿಪುರುಷ್’ | Photo: PTI 

ಹೊಸದಿಲ್ಲಿ : ಜುಲೈ 27ಕ್ಕಿಂತ ಮುಂಚಿತವಾಗಿ ತನ್ನ ಮುಂದೆ ಹಾಜರಾಗುವಂತೆ ವಿವಾದಾತ್ಮಕ ಚಿತ್ರ ‘ಆದಿಪುರುಷ್’ ಬಳಗಕ್ಕೆ ನಿರ್ದೇಶಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮಹಾಕಾವ್ಯ ರಾಮಾಯಣವನ್ನು ಮರು ನಿರೂಪಿಸುವ ‘ಆದಿ ಪುರುಷ್’ ಚಿತ್ರ ಸಂಭಾಷಣೆ ಹಾಗೂ ಆಡು ಮಾತಿನ ಭಾಷೆಯ ಕಾರಣಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ. ಈ ಪ್ರಕರಣವನ್ನು ಗುರುವಾರ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಚಿತ್ರ ಬಳಗದ ಪರವಾಗಿ ಹಾಜರಾಗಿದ್ದ ನ್ಯಾಯವಾದಿಗೆ ತಿಳಿಸಿತು.

ಜುಲೈ 27ರಂದು ತನ್ನ ಮುಂದೆ ಹಾಜರಾಗುವಂತೆ ಚಿತ್ರ ಬಳಗಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯ ಜೂನ್ 30ರಂದು ಸೂಚಿಸಿತ್ತು. ಅಲ್ಲದೆ, ಈ ಚಿತ್ರದ ಕುರಿತು ಅಭಿಪ್ರಾಯ ತಿಳಿಸಲು ಸಮಿತಿ ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News