ಪೇಪರ್ ಕಪ್ ನಿಷೇಧ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2023-10-22 17:19 GMT

ಸುಪ್ರೀಂಕೋರ್ಟ್ | Photo: PTI

ಹೊಸದಿಲ್ಲಿ: ತಮಿಳುನಾಡಿನಲ್ಲಿ 2019ರಲ್ಲಿ ಪರಿಚಯಿಸಲಾದ ಬಲವರ್ಧಿತ (ರಿಇನ್ಫೋರ್ಸ್‌ಡ್) ಪೇಪರ್ ಕಪ್‌ಗಳ ಬಳಕೆಯನ್ನು ನಿಷೇಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ರಾಜ್ಯ ಸರಕಾರದ ನೀತಿ ಸಾರ್ವಜನಿಕ ಹಿತಾಸಕ್ತಿಯಾಗಿದೆ ಎಂದಿದೆ.

ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಹಾಗೂ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠ, ಬಲವರ್ಧಿತ ಪೇಪರ್ ಕಪ್‌ಗಳ ಬಳಕೆಗೆ ಹೆಚ್ಚು ಮರಗಳನ್ನು ಕಡಿಯಬೇಕಾಗಿರುವುದರಿಂದ ಪರಿಸರಕ್ಕೆ ಮಾರಕವಾಗಿದೆ. ಅಲ್ಲದೆ ಇದರ ಮರು ಸಂಸ್ಕರಣೆ ಹೆಚ್ಚು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಐಐಟಿ ಸಲ್ಲಿಸಿದ ವರದಿಯನ್ನು ಗಮನಕ್ಕೆ ತೆಗೆದುಕೊಂಡಿತು.

ಈ ನಿಷೇಧ ವಿಧಿಸಿರುವುದಕ್ಕೆ ವೈಜ್ಞಾನಿಕ ಆಧಾರಗಳಿವೆ. ಏಕ ಬಳಕೆಯ ಹಲವು ವರ್ಗಗಳ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ರಾಜ್ಯ ಸರಕಾರದ ನಿರ್ಧಾರ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದೆ. ಮದ್ರಾಸ್ ಉಚ್ಚ ನ್ಯಾಯಾಲಯ ತೀರ್ಪಿನ ಮಧ್ಯಪ್ರವೇಶಿಸಲು ಯಾವುದೇ ಕಾರಣ ಇಲ್ಲ ಎಂದು ಪೀಠ ಹೇಳಿದೆ.

ನಿಷೇಧವು ಮಿತಿ ಮೀರಿದೆ ಹಾಗೂ ಅಸಮಾನವಾಗಿದೆ ಎಂಬ ದೂರುದಾರರ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News