ಸಕಾರಣವಿಲ್ಲದೆ ಮುನ್ನೆಚ್ಚರಿಕೆಯ ಬಂಧನಕ್ಕೆ ಸುಪ್ರೀಂ ಆಕ್ಷೇಪ

Update: 2023-09-05 16:16 GMT

ಸುಪ್ರೀಂ | Photo: PTI 

ಹೊಸದಿಲ್ಲಿ: ಸಕಾರಣವಿಲ್ಲದೆ ತೆಲಂಗಾಣ ಸರಕಾರವು ರಾಜ್ಯ ಕಾನೂನಿನಡಿ ಮುನ್ನೆಚ್ಚರಿಕೆಯ ಬಂಧನ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ತೆಲಂಗಾಣ ಸರಕಾರಕ್ಕೆ ತಿಳಿಸಿದೆ. ತನ್ನ ಪತಿಯ ಬಂಧನವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ದೀಪಂಕರ ದತ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಬಂಧನ ಆದೇಶದಲ್ಲಿ ಮಧ್ಯಪ್ರವೇಶಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ ಬಳಿಕ ಮಹಿಳೆಯು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಳು. ಬಂಧಿತನು ಮಹಿಳೆಯರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ, ವಂಚನೆ, ಸುಲಿಗೆ, ಸಾರ್ವಜನಿಕ ನೌಕರರಿಗೆ ಕರ್ತವ್ಯ ನಿರ್ವಹಿಸಂತೆ ತಡೆದ್ದಾನೆ.

ತನ್ನ ಸಹಚರರೊಂದಿಗೆ ಸಂಘಟಿತವಾದ ರೀತಿಯಲ್ಲಿ ದರೋಡೆ ಹಾಗೂ ಕ್ರಿಮಿನಲ್ ಬೆದರಿಕೆಯಂತಹ ಕೃತ್ಯಗಳಲ್ಲಿಯೂ ಆತ ನಿರತನಾಗಿದ್ದ. ಈ ಆಧಾರದಲ್ಲಿ ಆತನನ್ನು 1986ರ ತೆಲಂಗಾಣದ ಅಪಾಯಕಾರಿ ಚಟುವಟಿಕೆಗಳ ಕಾಯ್ದೆಯಡಿ ಗೂಂಡಾ ಎಂಬುದಾಗಿ ವ್ಯಾಖ್ಯಾನಿಸಬಹುದಾಗಿದೆ ಎಂದು ಬಂಧನ ಆದೇಶದಲ್ಲಿ ತಿಳಿಸಲಾಗಿದೆ.

ಆದರೆ ಪೊಲೀಸರ ವಾದವನ್ನು ಅಲ್ಲಗಳೆದ ನ್ಯಾಯಾಲಯವು, ಆರೋಪಿಯು ಶಾಮೀಲಾಗಿರುವ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ಆನ ಜಾಮೀನು ಅರ್ಜಿಯನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರಕಾರವು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ.

ಆದುದರಿಂದ ಆತನ್ನು ಸಮರ್ಪಕವಾದ ಕಾರಣಗಳನ್ನು ಒದಗಿಸದೆಯೇ ತೆಲಂಗಾಣ ಅಪಾಯಕಾರಿ ಚಟುವಟಿಕೆಗಳ ಕಾಯ್ದೆಯಡಿ ಬಂಧನದಲ್ಲಿಡಲು ರಾಜ್ಯ ಸರಕಾರ ಮುಂದಾಗಬಾರದೆಂದು ಸುಪ್ರೀಂಕೋರ್ಟ್ ಹೇಳಿದೆ. ಹಲವಾರು ವರ್ಷಗಳಿಂದ ಮುನ್ನೆಚ್ಚರಿಕೆಯ ಬಂಧದ ಕಾನೂನುಗಳನ್ನು ಮನಬಂದಂತೆ ಬಳಸಿಕೊಳ್ಳುವುದದು ಸಾಮಾನ್ಯವಾಗಿಬಿಟ್ಟಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News