ವಿಶ್ವಸಂಸ್ಥೆಯ ನಿರಾಶ್ರಿತರ ಒಪ್ಪಂದಕ್ಕೆ ಭಾರತ ಸಹಿ ಮಾಡುವುದಿಲ್ಲ: ಅಮಿತ್ ಶಾ
Update: 2025-03-28 08:15 IST

ಅಮಿತ್ ಶಾ PC: PTI
ಹೊಸದಿಲ್ಲಿ: ವಿಶ್ವಸಂಸ್ಥೆಯ ನಿರಾಶ್ರಿತರ ಒಪ್ಪಂದ-1951ಕ್ಕೆ ಭಾರತ ಸಹಿ ಮಾಡುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಒಪ್ಪಂದದ ಅನ್ವಯ ಸರ್ಕಾರ ನಿರಾಶ್ರಿತರ ಕಾಳಜಿ ವಹಿಸಬೇಕಾದ ಮತ್ತು ಅವರ ಹಕ್ಕುಗಳನ್ನು ಗೌರವಿಸಬೇಕಾದ ಅಗತ್ಯವಿದ್ದು, ಹಾಗೆ ಮಾಡಲು ಭಾರತ ಧರ್ಮಶಾಲೆಯಲ್ಲ ಎಂದು ಶಾ ಹೇಳಿದರು.
"ಯಾರೇ ವ್ಯಕ್ತಿ ಯಾವುದೇ ಕಾರಣಕ್ಕೆ ಭಾರತಕ್ಕೆ ಬಂದು ನೆಲೆಸಲು ಭಾರತವೇನು ಧರ್ಮಶಾಲೆಯಲ್ಲ. ದೇಶದ ಭದ್ರತೆಗೆ ಅಪಾಯ ಎನಿಸಬಹುದಾದ ವ್ಯಕ್ತಿಗಳನ್ನು ತಡೆಯಲು ಸಂಸತ್ತಿಗೆ ಅಧಿಕಾರವಿದೆ" ಎಂದು ವಲಸೆ ಮತ್ತು ವಿದೇಶಿಯರ ಮಸೂದೆ-2025ರ ಕುರಿತ ಚರ್ಚೆಯ ವೇಳೆ ತಿಳಿಸಿದರು.
"ನಮ್ಮ ದೇಶದ ಭದ್ರತೆ ಮತ್ತು ಯಾರು ದೇಶದ ಗಡಿಯನ್ನು ಪ್ರವೇಶಿಸುತ್ತಾರೆ ಎನ್ನುವುದು ಅತ್ಯಂತ ಮುಖ್ಯವಾದದ್ದು" ಎಂದು ಹೇಳಿದರು.