ಭಾರತಕ್ಕೆ ಶೀಘ್ರವೇ ಪುಟಿನ್ ಭೇಟಿ: ರಶ್ಯ ವಿದೇಶ ಸಚಿವ ಘೋಷಣೆ
Update: 2025-03-27 20:58 IST

ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್ | PC : PTI
ಹೊಸದಿಲ್ಲಿ: ರಶ್ಯ ಮತ್ತು ಭಾರತ ತಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಸಾರ್ವಕಾಲಿಕ ಎತ್ತರಕ್ಕೆ ಒಯ್ಯುವ ಉದ್ದೇಶವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶೀಘ್ರವೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಆ ದೇಶದ ವಿದೇಶ ಸಚಿವ ಸರ್ಗಿ ಲವ್ರೊವ್ ಹೇಳಿದ್ದಾರೆ.
‘‘ಅಧ್ಯಕ್ಷರ ಭಾರತ ಭೇಟಿಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ’’ ಎಂದು ಗುರುವಾರ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಅವರು ಹೇಳಿದರು.
‘‘ಸತತ ಮೂರನೇ ಬಾರಿ ಆಯ್ಕೆಯಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ರಶ್ಯಕ್ಕೆ ತನ್ನ ಮೊದಲ ಭೇಟಿ ನೀಡಿದ್ದಾರೆ. ಈಗ ನಮ್ಮ ಸರದಿ’’ ಎಂದು ರಶ್ಯ ವಿದೇಶ ಸಚಿವರು ನುಡಿದರು.
ಆದರೆ, ಪುಟಿನ್ ಯಾವಾಗ ಭೇಟಿ ನೀಡುತ್ತಾರೆ ಎಂಬ ಮಾಹಿತಿಯನ್ನು ಅವರು ನೀಡಲಿಲ್ಲ.
ಕಳೆದ ವರ್ಷ ಪ್ರಧಾನಿ ಮೋದಿ ರಶ್ಯಕ್ಕೆ ಭೇಟಿ ನೀಡಿದ್ದಾರೆ. ಭಾರತಕ್ಕೆ ಭೇಟಿ ನೀಡುವಂತೆ ಅವರು ಈ ಸಂದರ್ಭದಲ್ಲಿ ಪುಟಿನ್ರನ್ನು ಆಹ್ವಾನಿಸಿದ್ದರು.