ತಾಂತ್ರಿಕ ವೈಫಲ್ಯ: ತೀರ್ಥಯಾತ್ರಿಗಳಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

Update: 2024-05-24 10:49 GMT

PC : X \ @ShivAroor

ಕೇದಾರನಾಥ್: ಆರು ಮಂದಿ ತೀರ್ಥಯಾತ್ರಿಗಳು ಹಾಗೂ ಪೈಲಟ್‌ ಸೇರಿದಂತೆ ಏಳು ಜನರಿದ್ದ ಹೆಲಿಕಾಪ್ಟರ್‌ ಒಂದು ಇಂದು ಮುಂಜಾನೆ ತಾಂತ್ರಿಕ ವೈಫಲ್ಯದಿಂದಾಗಿ ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಕೇದಾರನಾಥದ ಹೆಲಿಪ್ಯಾಡ್‌ಗಿಂತ ಕೆಲ ಮೀಟರುಗಳಷ್ಟು ದೂರದಲ್ಲಿ ಈ ಹೆಲಿಕಾಪ್ಟರ್‌ ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೆಲಿಕಾಪ್ಟರ್‌ ಇಂದು ಸಿರ್ಸಿ ಹೆಲಿಪ್ಯಾಡ್‌ನಿಂದ ಹೊರಟಿತ್ತು. ಆದರೆ ಕೇದಾರನಾಥಕ್ಕೆ ಹತ್ತಿರವಾಗುತ್ತಿದ್ದಂತೆ ಅದರ ಹಿಂದಿನ ಮೋಟಾರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ರುದ್ರಪ್ರಯಾಗ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸೌರಭ್‌ ಗಹರ್ವಾರ್‌ ಹೇಳಿದ್ದಾರೆ.

ಹೆಲಿಕಾಪ್ಟರ್‌ ಪೈಲಟ್‌ನ ಪ್ರಸಂಗಾವಧಾನತೆಯಿಂದ ದುರಂತವೊಂದು ತಪ್ಪಿದೆ. ತೀರ್ಥಯಾತ್ರಿಗಳು ದೇವಳದಲ್ಲಿ ದರ್ಶನ ಪಡೆದು ವಾಪಸಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂಜಾನೆ ಸುಮಾರು ಏಳು ಗಂಟೆಗೆ ನಡೆದ ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News