ತೆಲಂಗಾಣ ಮತದಾನೋತ್ತರ ಸಮೀಕ್ಷೆ: ನೆಲೆ ಕಂಡುಕೊಂಡ ಕಾಂಗ್ರೆಸ್, ಕೆಸಿಆರ್ ಭವಿಷ್ಯಕ್ಕೆ ಅಪಾಯ

Update: 2023-11-30 13:49 GMT

ಹೊಸ ದಿಲ್ಲಿ: ತನ್ನ ಎದುರಾಳಿ ಭಾರತ್ ರಾಷ್ಟ್ರ ಸಮಿತಿ ಹಾಗೂ ಆ ಪಕ್ಷದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಕಾಂಗ್ರೆಸ್ ಪಕ್ಷವು ಸ್ಪಷ್ಟ ಮುನ್ನಡೆ ಸಾಧಿಸಿದೆ ಎಂಬ ಅಂಶವು ಮತದಾನೋತ್ತರ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದು ndtv.com ವರದಿ ಮಾಡಿದೆ.

ಇಂಡಿಯಾ ಟಿವಿ-ಸಿಎನ್ಎಕ್ಸ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ, 119 ಸಂಖ್ಯಾಬಲದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 63-79 ಸ್ಥಾನಗಳಲ್ಲಿ ಗೆಲ್ಲಲಿದ್ದು, ಆಡಳಿತಾರೂಢ ಬಿಆರ್ಎಸ್ 31-47 ಸ್ಥಾನಗಳಿಗೆ ತೃಪ್ತಿಪಡಲಿದೆ.

ಜನ್ ಕಿ ಬಾತ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 48-64 ಸ್ಥಾನ, ಬಿಆರ್ಎಸ್ 40-55 ಸ್ಥಾನ ಹಾಗೂ ಬಿಜೆಪಿ 7-13 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ಟಿವಿ9 ಭಾರತ್ ವರ್ಷ್-ಪೋಲ್ ಸ್ಟ್ರ್ಯಾಟ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಹಾಗೂ ಬಿಆರ್ಎಸ್ ಪಕ್ಷದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಕ್ರಮವಾಗಿ 49-59 ಸ್ಥಾನಗಳು ಹಾಗೂ 48-58 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ದಕ್ಷಿಣ ಭಾರತ ರಾಜ್ಯವಾದ ತೆಲಂಗಾಣದಲ್ಲಿ ಕಾಂಗ್ರೆಸ್, ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಹಾಗೂ ಬಿಜೆಪಿ ಪ್ರಮುಖ ಪ್ರತಿಸ್ಪರ್ಧಿ ಪಕ್ಷಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News