ಬ್ರಿಜ್‌ ಭೂಷಣ್‌ ನಿವಾಸದಿಂದ ಕುಸ್ತಿ ಫೆಡರೇಷನ್‌ ಕಚೇರಿ ಸ್ಥಳಾಂತರ!

Update: 2023-12-29 11:59 GMT

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ | Photo: PTI 

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಕುಸ್ತಿ ಫೆಡರೇಷನ್‌ ತನ್ನ ಕಚೇರಿಯನ್ನು ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ನಿವಾಸದಿಂದ ಸ್ಥಳಾಂತರಿಸಿದೆ. ಫೆಡರೇಷನ್‌ ಕಚೇರಿಯು ಸಿಂಗ್‌ ಅವರ ನಿವಾಸದಲ್ಲಿರುವುದಕ್ಕೆ ಕ್ರೀಡಾ ಸಚಿವಾಲಯ ಆಕ್ಷೇಪಿಸಿದ ನಂತರದ ಬೆಳವಣಿಗೆ ಇದಾಗಿದೆ.

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್‌ ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ಇತ್ತೀಚೆಗೆ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ಫೆಡರೇಷನ್‌ನ ನೂತನ ಆಡಳಿತ ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತಿನಲ್ಲಿರಿಸಿ ಫೆಡರೇಷನ್‌ ಕಾರ್ಯನಿರ್ವಹಣೆಗೆ ತಾತ್ಕಾಲಿಕ ಸಮಿತಿ ರಚಿಸಿತ್ತು.

ಫೆಡರೇಷನ್‌ ತನ್ನ ಮಾಜಿ ಪದಾಧಿಕಾರಿಗಳ ಹಿಡಿತದಲ್ಲಿಯೇ ಇನ್ನೂ ಇದೆ ಎಂಬ ಆರೋಪಗಳ ಕುರಿತೂ ಕ್ರೀಡಾ ಸಚಿವಾಲಯ ಕಳವಳ ವ್ಯಕ್ತಪಡಿಸಿತ್ತು.

ಫೆಡರೇಷನ್‌ ಕಚೇರಿ ಇನ್ನೂ ಬ್ರಿಜ್‌ ಭೂಷಣ್‌ ನಿವಾಸದಲ್ಲಿಯೇ ಇರುವ ಕುರಿತು ಪ್ರತಿಕ್ರಿಯಿಸಿದ್ದ ಸಂಜಯ್‌ ಸಿಂಗ್‌ ತಮ್ಮ ತಂಡಕ್ಕೆ ಹೊಸ ಕಚೇರಿ ಹುಡುಕಲು ಸಮಯ ಬೇಕಾಗಿದೆ ಎಂದು ಹೇಳಿದ್ದರಲ್ಲದೆ ಆದಷ್ಟು ಬೇಗ ಸರ್ಕಾರ ಸೂಚಿಸಿದ ಯಾವುದೇ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಿದೆ ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News