ದೆಹಲಿ ಮದ್ಯ ನೀತಿ ಪ್ರಕರಣ: ಆಮ್ ಆದ್ಮಿ ಪಕ್ಷವನ್ನೇ ಆರೋಪಿಯನ್ನಾಗಿ ಮಾಡಲು ಚಿಂತನೆ
ಹೊಸದಿಲ್ಲಿ: ದೆಹಲಿಯ ಅಬಕಾರಿ ಮದ್ಯ ನೀತಿ ಪ್ರಕರಣಗಳಲ್ಲಿ ಆಮ್ ಆದ್ಮಿ ಪಕ್ಷವನ್ನು (AAP) ಆರೋಪಿಯನ್ನಾಗಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿವೆ.
ದೇಶದ ಎರಡು ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠಕ್ಕೆ ಮನಿ ಲಾಂಡರಿಂಗ್ ತಡೆ ಕಾಯಿದೆಯ (PMLA) ಸೆಕ್ಷನ್ 70 ರ ಮೇಲೆ ಕಾನೂನು ನಿಬಂಧನೆಗಳನ್ನು ಅನ್ವಯಿಸಿ ಎಎಪಿಯನ್ನು ಆರೋಪಿಯನ್ನಾಗಿ ಮಾಡಲು ಯೋಚಿಸುತ್ತಿವೆ ಎಂದು ಕೇಳಿಕೊಂಡಿದ್ದಾರೆ.
ಆಪ್ ವಿರುದ್ಧ ಪ್ರತ್ಯೇಕ ಆರೋಪವಿದೆಯೇ ಎಂಬುದರ ಕುರಿತು ಮಂಗಳವಾರ ಸ್ಪಷ್ಟಪಡಿಸುವಂತೆ ಪೀಠವು ಎಸ್.ವಿ ರಾಜು ಅವರನ್ನು ಕೇಳಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಅಬಕಾರಿ ಮದ್ಯ ನೀತಿ ಪ್ರಕರಣಗಳಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಂಧಿತರಾಗಿದ್ದಾರೆ. ಅವರ ಜಮೀನು ಅರ್ಜಿ ವಿಚಾರಣೆ ಸಂದರ್ಭ ಸುಪ್ರೀಂ ಕೊರ್ಟ್ ಪೀಠಕ್ಕೆ ಎಸ್.ವಿ. ರಾಜು ಈ ಹೇಳಿಕೆ ನೀಡಿದ್ದಾರೆ