ತಿಹಾರ್ ಜೈಲು ವಾರ್ಡನ್ ನಡೆಸುತ್ತಿದ್ದ ʼಮೆಥ್ ಲ್ಯಾಬ್ʼ ಭೇದಿಸಿದ ಪೊಲೀಸರು : 95 ಕೆಜಿ ಡ್ರಗ್ಸ್ ವಶ

Update: 2024-10-29 10:54 GMT

PC : indiatoday.in

ಹೊಸದಿಲ್ಲಿ : ತಿಹಾರ್ ಜೈಲು ವಾರ್ಡನ್, ದಿಲ್ಲಿ ಮೂಲದ ಉದ್ಯಮಿ ಮತ್ತು ಮುಂಬೈ ಮೂಲದ ರಸಾಯನಶಾಸ್ತ್ರಜ್ಞ ನಡೆಸುತ್ತಿದ್ದ ಮೆಥ್ ಲ್ಯಾಬ್(meth lab) ನ್ನು ಗ್ರೇಟರ್ ನೋಯ್ಡಾ ಪೊಲೀಸರು ಭೇದಿಸಿದ್ದು, ಕಾರ್ಯಾಚರಣೆಯಲ್ಲಿ 95 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಸಿಂಥೆಟಿಕ್ ಔಷಧಗಳ ಉತ್ಪಾದನೆಯಲ್ಲಿ ತೊಡಗಿರುವ ಪ್ರಯೋಗಾಲಯದ ಬಗ್ಗೆ ಗುಪ್ತಚರ ಮಾಹಿತಿಯ ನಂತರ, NCB ಮತ್ತು ದಿಲ್ಲಿ ಪೊಲೀಸ್ ವಿಶೇಷ ಪಡೆ ಗ್ರೇಟರ್ ನೋಯ್ಡಾದಲ್ಲಿ ದಾಳಿ ನಡೆಸಿದೆ.

ಕಾರ್ಯಾಚರಣೆಯ ವೇಳೆ ಘನ ಮತ್ತು ದ್ರವ ರೂಪಗಳಲ್ಲಿನ ಸುಮಾರು 95 ಕೆಜಿ ಮೆಥಾಂಫೆಟಮೈನ್ ನ್ನು ಪತ್ತೆಹಚ್ಚಲಾಗಿದೆ ಎಂದು ವರದಿಯಾಗಿದೆ.

ಇದಲ್ಲದೆ ಕಾರ್ಯಚರಣೆ ವೇಳೆ ದಿಲ್ಲಿ ಮೂಲದ ಉದ್ಯಮಿಯೊಬ್ಬರು ಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಬಂಧಿತ ಉದ್ಯಮಿಯನ್ನು ಈ ಹಿಂದೆ ಮಾದಕವಸ್ತು ಪ್ರಕರಣದಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಅವರು ತಿಹಾರ್ ಜೈಲಿನ ವಾರ್ಡನ್ ಜೊತೆ ಸಂಪರ್ಕ ಹೊಂದಿದ್ದರು ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News