ಲೋಕಸಭೆಯಿಂದ ಉಚ್ಛಾಟನೆ: ಸುಪ್ರೀಂ ಕೋರ್ಟ್ ಮೊರೆ ಹೋದ ಮಹುವಾ ಮೊಯಿತ್ರಾ

Update: 2023-12-11 07:57 GMT

ಮಹುವಾ ಮೊಯಿತ್ರಾ (PTI)

ಹೊಸದಿಲ್ಲಿ: 'ಪ್ರಶ್ನೆಗಾಗಿ ನಗದು ಪ್ರಕರಣ'ದಲ್ಲಿ ಲೋಕಸಭೆಯಿಂದ ಉಚ್ಛಾಟನೆಗೊಂಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ವ್ಯಾಪಕ ಕುತೂಹಲಕ್ಕೆ ಕಾರಣವಾಗಿದ್ದ ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದ ನೈತಿಕ ಸಮಿತಿಯ ಶಿಫಾರಸಿನ ಮೇರೆಗೆ ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

ಮಹುವಾ ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಅಂಶಗಳನ್ನು ಹೊಂದಿದ್ದ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ಉದ್ಯಮಿ ದರ್ಶನ್‌ ಹಿರಾನಂದಾನಿ ಅವರಿಂದ ರೂ 2 ಕೋಟಿ ನಗದು ಮತ್ತು ಇತರ ದುಬಾರಿ ಉಡುಗೊರೆಗಳನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.

ತಮ್ಮ ಲೋಕಸಭೆಯ ಲಾಗಿನ್‌ ಮಾಹಿತಿಯನ್ನೂ ಅವರು ಹಿರಾನಂದಾನಿಗೆ ನೀಡಿ ಅವರು ನೇರವಾಗಿ ಮಹುವಾ ಪರ ಪ್ರಶ್ನೆಗಳನ್ನು ಪೋಸ್ಟ್‌ ಮಾಡಲು ಅನುಮತಿಸಿದ್ದರೆಂಬ ಆರೋಪವನ್ನೂ ಮಹುವಾ ಎದುರಿಸುತ್ತಿದ್ದಾರೆ. ಪ್ರಧಾನಿಯ ಕಟು ಟೀಕಾಕಾರರಾಗಿರುವ ಮಹುವಾ ಅವರು ಲಂಚ ಆರೋಪ ನಿರಾಕರಿಸಿದ್ದರೂ ಲಾಗಿನ್‌ ವಿವರಗಳನ್ನು ಹಂಚಿಕೊಂಡಿದ್ದನ್ನು ಒಪ್ಪಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News