ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ: ದಿಲ್ಲಿ, ಉತ್ತರ ಭಾರತದ ಹಲವೆಡೆಯೂ ಕಂಪಿಸಿದ ಭೂಮಿ

Update: 2024-01-11 10:22 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ರಾಜಧಾನಿ ದಿಲ್ಲಿ ಮತ್ತು ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ಪಾಕಿಸ್ತಾನದಲ್ಲೂ ಕಂಪನದ ಅನುಭವಗಳಾಗಿವೆ.

ಭೂಕಂಪದ ಕೇಂದ್ರಬಿಂದು ಕಾಬೂಲಿನ ಈಶಾನ್ಯದಲ್ಲಿ 241 ಕಿಮೀ ದೂರದಲ್ಲಿತ್ತು ಎಂದು ನ್ಯಾಷನಲ್‌ ಸೆಂಟರ್‌ ಫಾರ್‌ ಸೀಸ್ಮಾಲಜಿ ಮಾಹಿತಿ ನೀಡಿದೆ.

ರಾಜಧಾನಿ ದಿಲ್ಲಿಯಲ್ಲಿ ಭೂಮಿ ಕಂಪಿಸುತ್ತಿದ್ದಂತೆ ಜನರು ಭಯಭೀತರಾದರು.

ಅಫ್ಘಾನಿಸ್ತಾನದಲ್ಲಿ ಭೂಕಂಪದಿಂದ ಯಾವುದೇ ಹಾನಿ ಉಂಟಾಗಿರುವ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 1000ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News