ಕೀಟನಾಶಕದಿಂದ ತೊಂದರೆ | ಗುರುವಾಯೂರು ದೇಗುಲದಲ್ಲಿ ಭಕ್ತಾದಿಗಳಿಂದ ತುಳಸಿ ಸಮರ್ಪಣೆಗೆ ನಿರ್ಬಂಧ

Update: 2024-10-27 16:55 GMT

PC : PTI

ತಿರುವನಂತಪುರ : ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ತುಳಸಿ ದಳಗಳನ್ನು ಸಮರ್ಪಿಸುವುದನ್ನು ನಿರ್ಬಂಧ ವಿಧಿಸಲಾಗಿದೆ. ಭಕ್ತಾದಿಗಳು ಸಮರ್ಪಿಸುತ್ತಿದ್ದ ತುಳಸಿಯಲ್ಲಿ ಅಧಿಕ ಮಟ್ಟದ ಕೀಟನಾಶಕ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆಯೆಂದು ದೇವಾಲಯದ ಮೂಲಗಳು ತಿಳಿಸಿವೆ.

ಭಕ್ತಾದಿಗಳು ಸಮರ್ಪಿಸುವ ತುಳಸಿಯ ದಳಗಳನ್ನು ನಿರ್ವಹಿಸುತ್ತಿದ್ದ ದೇವಾಲಯದ ಹಲವಾರು ಸಿಬ್ಬಂದಿಯಲ್ಲಿ ತುರಿಕೆ ಹಾಗೂ ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

‘‘ಬಹುತೇಕ ಯಾತ್ರಿಕರು ಅಂಗಡಿಗಳಿಂದ ತುಳಸಿಯನ್ನು ಖರೀದಿಸಿ ದೇವಾಲಯಕ್ಕೆ ಸಮರ್ಪಿಸುತ್ತಾರೆ. ವಾಣಿಜ್ಯ ಉದ್ದೇಶಕ್ಕಾಗಿ ಬೆಳಸಲಾಗುವ ಈ ತುಳಸಿಗಿಡದ ಎಲೆಗಳು ದೀರ್ಘಸಮಯದವರೆಗೆ ಬಾಡದಂತೆ ನೋಡಿಕೊಳ್ಳಲು ಅವುಗಳಿಗೆ ಅಧಿಕ ಪ್ರಮಾಣದಲ್ಲಿ ಕೀಟನಾಶಕಗಳನ್ನು ಸೇರಿಸಲಾಗುತ್ತದೆ. ಇಂತಹ ತುಳಸಿ ಎಲೆಗಳ ನಿರಂತರ ಸಂಪರ್ಕದಿಂದಾಗಿ ದೇವಾಲಯದ ಸಿಬ್ಬಂದಿಯಲ್ಲಿ ಅಲರ್ಜಿ ಹಾಗೂ ತುರಿಕೆಯ ಸಮಸ್ಯೆಗಳು ಕಾಣಿಸಿಕೊಂಡಿವೆ ’’ಎಂದು ದೇವಾಲಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಪೂಜಾ ಉದ್ದೇಶಗಳಿಗೆ ಕೀಟನಾಶಕ ಮುಕ್ತ ತುಳಸಿಯನ್ನು ಪಡೆಯಲು ದೇವಾಲಯವು ವಿಶೇಷ ವ್ಯವಸ್ಥೆಯನ್ನು ಮಾಡಿದೆಯೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News