ಮುಂದುವರೆದ ಬೆದರಿಕೆ ಕರೆ ಚಾಳಿ | ಕನಿಷ್ಠ 50 ವಿಮಾನಗಳಿಗೆ ಬಾಂಬ್ ಬೆದರಿಕೆ

Update: 2024-10-27 17:33 GMT

ಸಾಂದರ್ಭಿಕ ಚಿತ್ರ

 

ಹೊಸದಿಲ್ಲಿ : ವಿಮಾನಗಳಿಗೆ ಬೆದರಿಕೆ ಕರೆ ಚಾಳಿ ಮುಂದುವರೆದಿದ್ದು ಇಂಡಿಯನ್ ಏರ್ ಲೈನ್ಸ್‌ನ ಕನಿಷ್ಠ 50 ವಿಮಾನಗಳು ರವಿವಾರ ಬಾಂಬ್ ಬೆದರಿಕೆಯನ್ನು ಸ್ವೀಕರಿಸಿವೆ.

ಬಾಂಬ್ ಬೆದರಿಕೆಯನ್ನು ನಿಗ್ರಹಿಸಲು ಅಂತರ ರಾಷ್ಟ್ರೀಯ ಸಂಸ್ಥೆಗಳ ನೆರವನ್ನು ಕೂಡ ಪಡೆಯಲಾಗುವುದು ಎಂದು ಕೇಂದ್ರ ನಾಗರಿಕ ವಾಯು ಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಹೇಳಿದ ಬಳಿಕವೂ ವಿಮಾನಗಳು ಬಾಂಬ್ ಬೆದರಿಕೆ ಕರೆ ಸ್ವೀಕರಿಸಿವೆ.

ಇದರೊಂದಿಗೆ ಕಳೆದ 14 ದಿನಗಳಲ್ಲಿ ಬಾಂಬ್ ಬೆದರಿಕೆ ಸ್ವೀಕರಿಸಿದ ಇಂಡಿಯನ್ ಏರ್‌ಲೈನ್ಸ್‌ನ ವಿಮಾನಗಳ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಶನಿವಾರ ಕನಿಷ್ಠ 13 ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿವೆ. ಅನಂತರ ಅದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಲಾಯಿತು.

ತನ್ನ 15 ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿವೆ ಎಂದು ಆಕಾಶ ಏರ್ ರವಿವಾರ ಹೇಳಿದೆ. ಇಂಡಿಗೊದ 18 ವಿಮಾನಗಳು ಹಾಗೂ ವಿಸ್ತಾರದ 17 ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News