ಭಾರತದಲ್ಲಿ ದ್ವೇಷಭಾಷಣ, ಅಲ್ಪಸಂಖ್ಯಾತರ ಮನೆಗಳ ಧ್ವಂಸ ಪ್ರಕರಣಗಳು ಆಂತಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ: ಅಮೆರಿಕ

Update: 2024-06-27 07:38 GMT

ಸಾಂದರ್ಭಿಕ ಚಿತ್ರ (PTI)

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಬುಧವಾರ, 200 ದೇಶಗಳಿಗೆ ಸಂಬಂಧಿಸಿದ ರಕ್ಷಣಾ ಇಲಾಖೆಯ ಧಾರ್ಮಿಕ ಸ್ವಾತಂತ್ರ್ಯ-2023 ವರದಿಯನ್ನು ಬಿಡುಗಡೆ ಮಾಡಿದರು. ಭಾರತದಲ್ಲಿ ದ್ವೇಷಭಾಷಣ, ಮತಾಂತರ ವಿರೋಧಿ ಕಾನೂನುಗಳು,  ಅಲ್ಪಸಂಖ್ಯಾತರಿಗೆ ಸೇರಿದ ಮನೆಗಳು, ಪ್ರಾರ್ಥನಾ ಸ್ಥಳಗಳನ್ನು ಧ್ವಂಸಗೊಳಿಸುವ ಪ್ರಕರಣಗಳು ಆಂತಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ವರದಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವಾದ್ಯಂತ ಇಂದಿಗೂ ಲಕ್ಷಾಂತರ ಮಂದಿಯ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಲಾಗುತ್ತಿಲ್ಲ. ಇದೇ ವೇಳೆ ಜನತೆ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಡಿಕೊಳ್ಳಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಬ್ಲಿಂಕೇನ್ ಅಭಿಪ್ರಾಯಪಟ್ಟರು.

ಕಳೆದ ಲೋಕಸಭಾ ಚುಣಾವಣೆಯ ವೇಳೆ ವಿರೋಧ ಪಕ್ಷಗಳು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದ್ವೇಷಭಾಷಣದ ಆರೋಪ ಮಾಡಿದ್ದರು.

ರಾಜಸ್ಥಾನದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಪ್ರಧಾನಿ, "ಜನರ ಕಠಿಣ ಪರಿಶ್ರಮದ ಹಣವನ್ನು ಕಾಂಗ್ರೆಸ್ ಪಕ್ಷ ನುಸುಳುಕೋರರಿಗೆ ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ನೀಡಲು ಮುಂದಾಗಿದೆ" ಎಂದು ಆಪಾದಿಸಿದ್ದರು. ಆದರೆ ಈ ಆರೋಪವನ್ನು ಬಿಜೆಪಿ ನಿರಾಕರಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು.

ರಕ್ಷಣಾ ಇಲಾಖೆಯ ಧಾರ್ಮಿಕ ಸ್ವಾತಂತ್ರ್ಯ ವರದಿಯ ಪ್ರಕಾರ, ಭಾರತದ ಧಾರ್ಮಿಕ ಸ್ವಾತಂತ್ರ್ಯದ ಸಮಸ್ಯೆಗಳ ಬಗ್ಗೆ ಆತಂಕವನ್ನು ಮುಂದುವರಿದಿದೆ. ಅಲ್ಪಸಂಖ್ಯಾತ ಗುಂಪುಗಳ ಮೇಲೆ ನಡೆಯುತ್ತಿರುವ ದಾಳಿ, ಹತ್ಯೆ ಮತ್ತು ಹಲ್ಲೆ ಪ್ರಕರಣಗಳು, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸಗೊಳಿಸುವಂಥ ಕ್ರಮಗಳ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News