ಮಲಯಾಳಂ ಹಿರಿಯ ನಟ ಥಾಮಸ್ ಕುರಿಶಿಂಗಲ್ ನಿಧನ

Update: 2024-12-17 11:24 GMT

ಥಾಮಸ್ ಬರ್ಲೀ ಕುರಿಶಿಂಗಲ್ | PC : X  

ಕೇರಳ: ಮಲಯಾಳಂ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ಥಾಮಸ್ ಬರ್ಲೀ ಕುರಿಶಿಂಗಲ್ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಥಾಮಸ್ ಬರ್ಲೀ ಕುರಿಶಿಂಗಲ್ ಕೇರಳದ ಎರ್ನಾಕುಲಂನಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

1953ರಲ್ಲಿ ಸತ್ಯನ್ ಅಭಿನಯದ 'ತಿರಮಲ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಥಾಮಸ್ ನಂತರ ಹಾಲಿವುಡ್ ಚಿತ್ರಗಳಲ್ಲೂ ನಟಿಸಿದ್ದರು. ಅವರು ಅಮೆರಿಕಕ್ಕೆ ತೆರಳಿ ಫ್ರಾಂಕ್ ಸಿನಾತ್ರಾ ಅವರಂತಹ ತಾರೆಗಳೊಂದಿಗೆ ನಟಿಸಿದ್ದರು. ಅವರು ವಾಪಾಸ್ಸು ಕೇರಳಕ್ಕೆ ಬಂದು ಕೆಲ ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ.

ನಟನೆ ಮಾತ್ರವಲ್ಲದೆ ಥಾಮಸ್ ಬರ್ಲೀ ಅವರು ನಿರ್ದೇಶಕ, ಕಥೆ ಬರಹಗಾರ, ನಿರ್ಮಾಪಕ, ಸಂಭಾಷಣೆ ಬರಹಗಾರ ಮತ್ತು ಸಂಗೀತ ಸಂಯೋಜಕರಾಗಿಯೂ ಹೆಸರು ಗಳಿಸಿದ್ದರು. ಥಾಮಸ್ ಪತ್ನಿ ಸೋಫಿ ಮಕ್ಕಳಾದ ತಾನ್ಯಾ, ತರುಣ್ ಮತ್ತು ತಮಿನಾ ಅವರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News