ರಾಷ್ಟ್ರಪತಿಗಳು ಸುಸ್ತಾಗಿದ್ದರು : ಉಭಯ ಸದನವನ್ನುದ್ದೇಶಿಸಿ ರಾಷ್ಟ್ರಪತಿಯ ಭಾಷಣದ ಬಗ್ಗೆ ಸೋನಿಯಾ ಗಾಂಧಿ ಪ್ರತಿಕ್ರಿಯೆ
Update: 2025-01-31 16:10 IST

Photo credit: PTI
ಹೊಸದಿಲ್ಲಿ: ಬಜೆಟ್ ಅಧಿವೇಶನಕ್ಕೆ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಷ್ಟ್ರಪತಿಗಳು ಭಾಷಣ ಮುಕ್ತಾಯ ಮಾಡುವ ವೇಳೆಗೆ ಸುಸ್ತಾಗಿದ್ದರು. ಕಷ್ಟಪಟ್ಟು ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ ಸೋನಿಯಾ ಗಾಂಧಿ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾಷಣ ಮುಗಿಸುವ ವೇಳೆ ರಾಷ್ಟ್ರಪತಿಗಳು ಸುಸ್ತಾಗಿದ್ದರು. ಕಳಪೆ ವಿಷಯಗಳ ಬಗ್ಗೆ ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪಪ್ಪು ಯಾದವ್ ರಾಷ್ಟ್ರಪತಿಗಳನ್ನು 'ರಬ್ಬರ್ ಸ್ಟಾಂಪ್' ಎಂದು ಕರೆದರು. ರಾಷ್ಟ್ರಪತಿಗಳು ಒಂದು ಸ್ಟಾಂಪ್ ಇದ್ದಂತೆ. ಅವರು ಪ್ರೇಮ ಪತ್ರವನ್ನು ಓದಬೇಕು ಅಷ್ಟೇ ಎಂದು ಹೇಳಿದ್ದಾರೆ.