ರಾಹುಲ್ ಗಾಂಧಿ ಅವಿಶ್ವಾಸ ನಿರ್ಣಯದ ಚರ್ಚೆ ಮೊದಲು ಆರಂಭಿಸಿಲ್ಲವೇಕೆ: ಪ್ರಹ್ಲಾದ್ ಜೋಶಿ

Update: 2023-08-08 08:25 GMT

Photo: sansad tv

ಹೊಸದಿಲ್ಲಿ: ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸರಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಕೆ ಮೊದಲಿಗೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವರ ಭಾಷಣಕ್ಕಾಗಿ ಖಜಾನೆ ಪೀಠಗಳು "ತುಂಬಾ ಉತ್ಸಾಹದಿಂದ" ಕಾಯುತ್ತಿವೆ ಎಂದು ಹೇಳಿದರು.

ರಾಹುಲ್ ಗಾಂಧಿಯವರ ಸಂಸತ್ತಿನ ಸದಸ್ಯ ಸ್ಥಾನಮಾನವನ್ನು ಸೋಮವಾರ ಮರುಸ್ಥಾಪಿಸಲಾಯಿತು ರಾಹುಲ್ ಚರ್ಚೆಯಲ್ಲಿ ಭಾಗವಹಿಸಲು ಇದು ಬೇಗನೇ ಆಗಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು. ಇಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಜರಿದ್ದರು.

ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರನ್ನು ಮಧ್ಯಾಹ್ನದ ವೇಳೆಗೆ ಚರ್ಚೆಯನ್ನು ಆರಂಭಿಸಲು ಕರೆದಾಗ, ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಜೋಶಿ ಅವರು ಒಂದು ವಿಷಯವನ್ನು ಹೇಳಲು ಎದ್ದರು.

ತನಗೆ ಗೊತ್ತಿರುವ ಪ್ರಕಾರ, ಲೋಕಸಭೆಯ ಸೆಕ್ರೆಟರಿಯೇಟ್ ಗೆ ಬೆಳಿಗ್ಗೆ 11.55 ಕ್ಕೆ ಗೊಗೊಯ್ ಅವರ ಬದಲಿಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ ಎಂದು ಪತ್ರವೊಂದು ಬಂದಿತ್ತು ಎಂದು ಹೇಳಿದರು.

"ಐದು ನಿಮಿಷಗಳ ಅಂತರದಲ್ಲಿ ಏನಾಯಿತು, ಸರ್? ಏನು ಸಮಸ್ಯೆ, ಸರ್? ನಾವು ರಾಹುಲ್ ಗಾಂಧಿಯವರ ಮಾತುಗಳನ್ನು ಕೇಳಲು ತುಂಬಾ ಉತ್ಸುಕರಾಗಿದ್ದೇವೆ" ಎಂದು ಜೋಶಿ ಹೇಳಿದರು.

ಸಚಿವರ ಹೇಳಿಕೆಯು ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು

ಅವಿಶ್ವಾಸ ನಿರ್ಣಯವು ಪ್ರಾಯೋಗಿಕವಾಗಿ ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲು ಪ್ರತಿಪಕ್ಷಗಳ ಪ್ರಯತ್ನ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News