ಪೇಶಾವರದಲ್ಲಿ ಬಾಂಬ್ ಸ್ಫೋಟ: 6 ಸಾವು
Update: 2016-01-19 14:26 GMT
ಪೇಶಾವರ, ಜ. 19: ಪಾಕಿಸ್ತಾನದ ಪೇಶಾವರದ ಭದ್ರತಾ ತಪಾಸಣಾ ಠಾಣೆಯೊಂದರ ಸಮೀಪ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಆರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ‘ಡಾನ್’ ವರದಿ ಮಾಡಿದೆ.
ಪಾಕಿಸ್ತಾನದ ಕೇಂದ್ರ ಸರಕಾರದ ಆಡಳಿತ ಹೊಂದಿರುವ ಬುಡಕಟ್ಟು ಪ್ರದೇಶದಲ್ಲಿ ಶಂಕಿತ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿದೆ. ಇಲ್ಲಿ ಭದ್ರತಾ ಪಡೆಗಳು ಪಾಕಿಸ್ತಾನ್ ತಾಲಿಬಾನ್ ಮತ್ತು ಇತರ ಭಯೋತ್ಪಾದಕ ಗುಂಪುಗಳ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿವೆ.