ಉಗ್ರರಿಂದ ವಿದ್ಯಾರ್ಥಿಗಳನ್ನು ರಕ್ಷಿಸುವ ಯತ್ನದಲ್ಲಿ ಜೀವತೆತ್ತ ಕೆಮೆಸ್ಟ್ರಿ ಪ್ರೊಫೆಸರ್
Update: 2016-01-20 18:11 GMT
ಪೇಶಾವರ, ಜ.20: ಪಾಕಿಸ್ತಾನದ ಬಚಾಖಾನ್ ವಿವಿಗೆ ಉಗ್ರರು ದಾಳಿ ನಡೆಸಿದಾಗ ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಪ್ರಾಧ್ಯಾಪಕರೊಬ್ಬರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ಕೆಮೆಸ್ಟ್ರಿ ಪ್ರೊಫೆಸರ್ ಸೈಯದ್ ಹಾಮಿದ್ ಹುಸೈನ್ ಈ ಘಟನೆಯಲ್ಲಿ ಬಲಿಯಾದವರು. ,ಉಗ್ರರು ವಿವಿಗೆ ನುಗ್ಗಿದಾಗ ವಿದ್ಯಾರ್ಥಿಗಳನ್ನು ರಕ್ಷಿಸಲು ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸಿದರೆನ್ನಲಾಗಿದೆ. ಆದರೆ ಉಗ್ರರು ಮನಸೋಇಚ್ಛೆ ಗುಂಡು ಹಾರಿಸಿ ಅವರನ್ನು ಸಾಯಿಸಿದರು. ಅವರು ಉಗ್ರರ ವಿರುದ್ಧ ಹೋರಾಡಿದ ಪರಿಣಾಮವಾಗಿ ಹಲವು ಮಂದಿ ವಿದ್ಯಾರ್ಥಿಗಳು ಉಗ್ರರ ಕೈಗೆ ಸಿಗದೆ ಬದುಕುಳಿದಿದ್ದಾರೆ.
ಉಗ್ರರು ನಡೆಸಿದ ಗುಂಡಿನ ದಾಳಿಯಿಂದಾಗಿ ಕನಿಷ್ಠ ಇಪ್ಪತ್ತೊಂದು ಮಂದಿ ಬಲಿಯಾಗಿದ್ದಾರೆ, ಎಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ