ಅಫ್ಝಲ್ ಗುರು ಸಿನಿಕತನದ ರಾಜಕೀಯ
ದೇಶದ್ರೋಹ ಆರೋಪ ಹೊತ್ತಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಿರುದ್ಧ ಸರಕಾರ ತೆಗೆದುಕೊಳ್ಳುವ ಕ್ರಮ ವನ್ನು ಟೀಕಿಸಿದವರನ್ನು ಅಫ್ಝಲ್ ಪಾಳೆಯದವರು ಎಂದು ವಿಂಗಡಣೆ ಮಾಡುವ ಮೂಲಕ ಟಿವಿ ವಾಹಿನಿಗಳೂ ತಮ್ಮ ಪಾತ್ರವನ್ನು ನಿಭಾಯಿಸುತ್ತಿವೆ. ಆದರೆ ಈ ಅಭಿಪ್ರಾಯಕ್ಕೆ ಪಕ್ಷವೂ ತನ್ನ ಕಾಣಿಕೆ ನೀಡಿದೆ, ಕನಿಷ್ಠ ಪಕ್ಷ ಮಾಜಿ ಸಂಪುಟ ಸಚಿವ ಪಳನಿಯಪ್ಪನ್ ಚಿದಂಬರಂ ಅವರು ನೀಡಿದ ಧೈರ್ಯದ ಹೇಳಿಕೆಯನ್ನು ಗಮನಿಸಿದರೆ ಹಾಗೆಯೇ ಅನಿಸುತ್ತದೆ. ತಮ್ಮ ಹೊಸ ಪುಸ್ತಕ ಬಿಡುಗಡೆಯಾಗಲಿರುವ ಸಂದರ್ಭದಲ್ಲಿ ಇಕನಾಮಿಕ್ಸ್ ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ, 2001ರ ಸಂಸತ್ ಭವನದ ಮೇಲಿನ ದಾಳಿಯಲ್ಲಿ ಶಿಕ್ಷೆಗೊಳಪಟ್ಟ ಉಗ್ರ ಅಫ್ಝಲ್ ಗುರುವಿನ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಸಾಧ್ಯವಿತ್ತು ಎಂದು ಚಿದಂಬರಂ ಹೇಳಿಕೊಂಡಿದ್ದರು. ಸಂಸತ್ ಭವನದ ಮೇಲೆ ನಡೆದ ದಾಳಿಯ ಪಿತೂರಿನ ಹಿಂದೆ ಅಫ್ಝಲ್ ಗುರು ಭಾಗಿಯಾಗಿರುವುದರ ಬಗ್ಗೆ ಬಹಳ ಸಂಶಯವಿದೆ ಮತ್ತು ಆತ ಭಾಗಿಯಾಗಿದ್ದರೂ ಆತನ ಪಾತ್ರದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಆತನನ್ನು ಮುಂದಿನ ಜೀವನ ಜೈಲಿನಲ್ಲೇ ಕಳೆಯುವಂತೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆಯನ್ನು ನೀಡಬಹುದಿತ್ತು ಎಂದು ಮಾಜಿ ಮಂತ್ರಿ ಹೇಳಿದ್ದರು. ಆದರೆ ಸರಕಾರದಲ್ಲಿರುವಾಗ ನ್ಯಾಯಾಲಯವು ಪ್ರಕರಣದ ತೀರ್ಪನ್ನು ತಪ್ಪಾಗಿ ನೀಡಿತು ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ಆತನ ವಿರುದ್ಧ ಕಾನೂನು ಕ್ರಮ ಜರಗಿಸಿದ್ದು ಸರಕಾರವೇ ಎಂದವರು ಹೇಳಿದ್ದರು.
ಮುಖಬೆಲೆಯನ್ನು ಪರಿಗಣಿಸುವುದಾದರೆ ಚಿದಂಬರಂ ಅವರು ಬಹಳ ಪ್ರಮುಖ ತರ್ಕಬದ್ಧ ಮಾತನ್ನು ಪ್ರಸ್ತಾಪಿ ಸಿದ್ದಾರೆ: ಭಯೋತ್ಪಾದಕ ದಾಳಿಯಲ್ಲಿ ಅಫ್ಝಲ್ ಗುರುವಿನ ಪಾತ್ರ ಮತ್ತು ಆತ ಮರಣ ದಂಡನೆಗೆ ಅರ್ಹನಾಗಿದ್ದನೇ ಎಂಬ ಎರಡು ಪ್ರಶ್ನೆಗಳನ್ನೂ ಕೇಳುವ ಅವಕಾಶವಿದೆ. ಆದರೆ ಕಾಂಗ್ರೆಸ್ ಮಾಡಿದ್ದನ್ನು ಗಮನಿಸಿ ದಾಗ ಅದು ಮುಖ ಬೆಲೆಯನ್ನು ಉಳಿಸಲೆಂದೇ ಮಾಡಿದಂತಿದೆ. ಕಾಂಗ್ರೆಸ್ ಸಿನಿಕತನ
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಒಮ್ಮೆಲೇ ಜೆಎನ್‌ಯುಗೆ ಭೇಟಿ ನೀಡುವ ಮತ್ತು ಅಲ್ಲಿ ಭಾವನೆಗಳನ್ನು ಕೆರಳಿಸುವ ಭಾಷಣವನ್ನು ಮಾಡುವ ನಿರ್ಧಾರವನ್ನು ಬೆಂಬಲಿಸುವ ಮೂಲಕ ಚಿದಂಬರಂ ಅವರ ಪಕ್ಷ ಸಿನಿಕತನದ ನೃತ್ಯ ಮಾಡಲು ಪ್ರಯತ್ನಿಸುತ್ತಿದೆ. ಆದರೆ ದೇಶವಿರೋಧಿ ಎಂಬ ಪಟ್ಟಿ ಅಂಟಿಕೊಳ್ಳುತ್ತದೆ ಎಂಬ ಭಯದಿಂದ ಪಕ್ಷವು ದೇಶದ್ರೋಹದ ಆರೋಪ ಹೊತ್ತಿರುವ ವಿದ್ಯಾರ್ಥಿಗಳಿಗೆ ತನ್ನ ಬೆಂಬಲವನ್ನು ನಿರಂತರವಾಗಿ ಸೀಮಿತಗೊಳಿಸುತ್ತಲೇ ಇದೆ ಮತ್ತು ವಾಕ್ ಸ್ವಾತಂತ್ರ್ಯದ ವಿಷಯವನ್ನು ಎತ್ತಲು ಎಳ್ಳಷ್ಟೂ ಪ್ರಯತ್ನಪಟ್ಟಿಲ್ಲ. ಶುಕ್ರವಾರ ನಡೆದ ಘಟನೆಗಳು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಪರ್ಯಾಯ ಹಿಂದೂ ಸಂಪ್ರದಾಯಗಳನ್ನು ತಿರಸ್ಕರಿಸಿದ ಅಂಶವನ್ನು ಹೊಂದಿದ್ದ ಮತ್ತು ಕೋಪ ಮತ್ತು ತಪ್ಪುಗಳಿಂದಲೇ ಕೂಡಿದ್ದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಯವರ ಭಾಷಣದ ನಂತರ ಕಾಂಗ್ರೆಸ್, ಭಾರತದ ಶ್ರೀಮಂತ ವೈವಿಧ್ಯಮಯ ಧಾರ್ಮಿಕ ಪರಂಪರೆಯ ಬಗ್ಗೆ ಪ್ರಸ್ತಾಪಿಸುವ ಬದಲು ಇರಾನಿಯ ಹೇಳಿಕೆಯು ಧರ್ಮವಿರೋಧಿಯಾಗಿದೆ ಎಂಬ ಅಂಶಕ್ಕೇ ಹೆಚ್ಚು ಅಂಟಿಕೊಂಡಿದೆ. ಚಿದಂಬರಂ ಅವರ ಹೇಳಿಕೆಯು ಅದಕ್ಕಿಂತಲೂ ಹೆಚ್ಚು ಕಪಟತನವನ್ನು ಹೊಂದಿದೆ. ಭಾರತಕ್ಕೆ ಸೆಕ್ಷನ್ 66ಎ ನೀಡಿದ ಪಕ್ಷದ ನಾಯಕರಿಂದ ಬಂದಂತಹ ಈ ಹೇಳಿಕೆ ವಾಕ್ ಸ್ವಾತಂತ್ರ್ಯದ ಪರವಾಗಿ ಇರುವಂತೆ ಕಾಣುತ್ತದೆ, ಆದರೆ ವಾಸ್ತವದ ಹಲವು ವರ್ಷಗಳ ನಂತರ ಅದು ಹೊರಬಂದಿದೆ. ಈಗ ಅಫ್ಝಲ್ ಗುರುವಿನ ಪಾತ್ರವನ್ನು ಪ್ರಶ್ನಿಸುವವರ ಜೊತೆ ಸೇರಿಕೊಳ್ಳುವುದರಿಂದ ರಾಜಕೀಯ ಲಾಭ ಪಡೆಯಬಹುದಾದ ಕಾರಣ ಚಿದಂಬರಂ ಅವರು ಈ ರೀತಿಯ ಹೇಳಿಕೆಯನ್ನು ಸಂತೋಷದಿಂದಲೇ ನೀಡಿದ್ದಾರೆ. ಇಶ್ರತ್ ಜಹಾನ್ ಹತ್ಯೆ
ಈ ವಾರ, ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ ಕಾಂಗ್ರೆಸ್ ಜನರ ಜೀವನ ಮತ್ತು ಭಾವನೆಗಳ ಜೊತೆ ಆಡುವ ಅತ್ಯಂತ ಅಪಾಯಕಾರಿ ಸಿನಿಕತನದ ವರ್ತನೆಯನ್ನು ಮತ್ತೊಂದು ಬಾರಿ ನಮಗೆ ಜ್ಞಾಪಿಸಿದರು. 2004ರಲ್ಲಿ ಗುಜರಾತ್ ಪೊಲೀಸರಿಂದ ಗುಂಡಿಕ್ಕಿ ಹತ್ಯೆ ಮಾಡಲ್ಪಟ್ಟ 19ರ ಹರೆಯದ ಇಶ್ರತ್ ಜಹಾನ್ ಬಗ್ಗೆ ಗುಜರಾತ್ ಹೈಕೋರ್ಟ್ ನಲ್ಲಿದ್ದ ಅಫಿದಾವಿತ್ ನಲ್ಲಿ 2009ರಲ್ಲಿ ಗೃಹ ಸಚಿವಾಲಯವು ಬದಲಾವಣೆಗಳನ್ನು ಮಾಡಿತ್ತು ಎಂದು ಪಿಳ್ಳೈ ಒಪ್ಪಿಕೊಂಡಿದ್ದರು. ಕಾಂಗ್ರೆಸ್, ಜಹಾನ್‌ಳ ನ್ಯಾಯಾಂಗೀಯ ಹತ್ಯೆಯನ್ನು ಅಂದು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸರಕಾರದ ಅಪಾಯಕಾರಿ ಅತಿರೇಕಗಳಿಗೆ ಸಾಕ್ಷಿಯಾಗಿ ಉಪಯೋಗಿಸಲು ಪ್ರಯತ್ನಿಸಿತ್ತು. ಆದರೆ ಹಾಗೆ ಮಾಡುವಾಗ ಜಹಾನ್ ಭಯೋತ್ಪಾದಕಿಯಾಗಿರಬಹುದು ಅಥವಾ ಉಗ್ರರ ಜೊತೆ ಸಂಪರ್ಕ ಹೊಂದಿರಬಹುದು ಎಂಬ ಅಂಶವನ್ನು ಅದು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಿತ್ತು. ಜಹಾನ್‌ಳ ನ್ಯಾಯಾಂಗೀಯ ಹತ್ಯೆಯ ವಿಧಾನದ ಮೇಲೆ ಗಮನಹರಿಸುವ ಬದಲು ಕಾಂಗ್ರೆಸ್ ಆಕೆಯನ್ನು ಮೋದಿಯ ಸಹಚರರಿಂದ ಹತ್ಯೆಗೈಯ್ಯಲ್ಪಟ್ಟ ಓರ್ವ ಮುಗ್ಧ ಮಹಿಳೆ ಎಂಬಂತೆ ಬಿಂಬಿಸಿತು ಮತ್ತು ಆಕೆ ಮತ್ತು ಲಷ್ಕರೆ ತಯ್ಯಿಬಾ ಮಧ್ಯೆಯಿದೆ ಎನ್ನಲಾದ ಗುಪ್ತಚರ ಮಾಹಿತಿಯನ್ನು ಅಳಿಸಿ ಹಾಕುವ ಹಂತಕ್ಕೆ ಹೋಯಿತು.
2009ರಲ್ಲಿ ಎರಡು ತಿಂಗಳಲ್ಲಿ ಸಚಿವಾಲಯ ಎರಡು ಪ್ರತ್ಯೇಕ ಅಫಿದಾವಿತ್ ಗಳನ್ನು ಹಾಕಿತು, ಅದರಲ್ಲಿ ಎರಡನೆ ಅಫಿದಾವಿತ್‌ನಲ್ಲಿ ಜಹಾನ್ ಗೆ ಲಷ್ಕರ್ ಜೊತೆ ಇದ್ದ ಸಂಪರ್ಕವನ್ನು ಕೈಬಿಡಲಾಗಿತ್ತು. ಸಚಿವಾಲಯವು, ಪೊಲೀಸರ ಕ್ರಮವನ್ನು ಸಮರ್ಥಿಸುವ ಅಥವಾ ಬೆಂಬಲಿಸುವ ಯಾವುದೇ ಅಂಶಗಳು ಮೊದಲನೆ ಅಫಿದಾವಿತ್‌ನಲ್ಲಿ ಇಲ್ಲ ಎಂದು ತಿಳಿಸಿತ್ತು. ಒಂದು ಟಿವಿ ಸಂದರ್ಶನದಲ್ಲಿ ಪಿಳ್ಳೆಯವರು, ಈ ಬದಲಾವಣೆಯನ್ನು ಸಚಿವಾಲಯವು ಪ್ರಜ್ಞಾಪೂರ್ವಕವಾಗಿ ಮಾಡಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಂದು ಅಫಿದಾವಿತ್ ನಲ್ಲಿ ಈ ವ್ಯಕ್ತಿಗಳು ಲಷ್ಕರೆ ತಯ್ಯಿಬಾದ ಸದಸ್ಯರೆಂದು ತಿಳಿಸಿದ್ದರೆ ಇನ್ನೊಂದು ಅಫಿದಾವಿತ್‌ನಲ್ಲಿ ಆ ಅಂಶವನ್ನು ಅಳಿಸಿ ಹಾಕಲಾಗಿತ್ತು. ಅದನ್ನು ಯಾಕೆ ಅಳಿಸಿ ಹಾಕಿದರು ಎಂಬುದು ನನಗೆ ತಿಳಿದಿಲ್ಲ. ಅದನ್ನು ರಾಜಕೀಯ ಮಟ್ಟದಲ್ಲಿ ಮಾಡಲಾಗಿತ್ತು, ಎಂದು ಟೈಮ್ಸ್ ನೌ ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳುತ್ತಾರೆ. ಅಫ್ಝಲ್ ಗುರುವಿನ ಬಗ್ಗೆ ನೀಡಿರುವ ಹೇಳಿಕೆಯು, ಸತ್ಯಾಂಶಗಳನ್ನು ತಿರುಚುವ ಮತ್ತು ಓರ್ವ ವ್ಯಕ್ತಿಯ ಸಾವಿನಲ್ಲೂ ಕಾನೂನು ಪ್ರಕ್ರಿಯೆಯ ಜೊತೆ ಆಟವಾಡುವ ಕಾಂಗ್ರೆಸ್‌ನ ಇರಾದೆಯನ್ನು ತೋರಿಸುತ್ತದೆ. ಆ ಸಮಯದಲ್ಲಿ ಇಂತಹ ಹೇಳಿಕೆ ನೀಡಿದ ಪಿ. ಚಿದಂಬರಂ ಅವರು ಪಿಳ್ಳೈಯವರ ಮೇಲಧಿಕಾರಿ ಮತ್ತು ದೇಶದ ಗೃಹಮಂತ್ರಿಯಾಗಿದ್ದ ಕಾರಣ ಪಿಳ್ಳೈಯವರ ಹೇಳಿಕೆ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತದೆ.
ಅಫ್ಝಲ್ ಗುರುವಿನ ಮರಣ ದಂಡನೆ
ಚಿದಂಬರಂ ಅವರ ಪಕ್ಷ ಆಡಳಿತದಲ್ಲಿದ್ದ ದಶಕಗಳ ಕಾಲ ಅವರು ಈ ಬಗ್ಗೆ ಪ್ರಶ್ನೆಯನ್ನೆತ್ತುವ ಕಾಳಜಿ ಪ್ರದರ್ಶಿಸಲಿಲ್ಲ ಎಂಬ ಬಗ್ಗೆ ಯೋಚಿಸಬೇಡಿ. ಅವರದ್ದೇ ಸರಕಾರ ಗುರುವಿನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ ಆತನನ್ನು ಗಲ್ಲಿಗೇರಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿತ್ತು. ಆದರೂ ಚಿದಂಬರಂ ಅವರ ಹೇಳಿಕೆಯಲ್ಲಿ ಗುರುವನ್ನು ನಿಭಾಯಿಸಲು ಇತರ ಪರ್ಯಾಯ ಹಾದಿಗಳು ಇದ್ದವು ಎಂಬ ಧೈರ್ಯದ ಸಲಹೆಯೂ ಸೇರಿದೆ. ಅಫ್ಝಲ್ ಗುರುವನ್ನು ಪೆರೋಲ್ ರಹಿತ ಬಂಧನಕ್ಕೊಳಪಡಿಸಿ ಆತ ಜೀವನಪೂರ್ತಿ ಜೈಲಲ್ಲಿ ಕಳೆಯುವಂತೆ ಮಾಡಬಹುದಿತ್ತು.
-ಪಿ. ಚಿದಂಬರಂ
ಚಿದಂಬರಂ ಅವರ ಪಕ್ಷ ಕಾಂಗ್ರೆಸ್ ಗುರುವನ್ನು ಮರಣ ದಂಡನೆಗೆ ಒಳಪಡಿಸಿತು ಮತ್ತು ಅದಕ್ಕಿಂತಲೂ ಕೆಟ್ಟದ್ದೇನೆಂದರೆ 2014ರ ಚುನಾವಣೆಗೆ ಕೇವಲ ಒಂದು ವರ್ಷವಷ್ಟೇ ಇರುವಾಗ ರಹಸ್ಯವಾಗಿ ಅದು ಗುರುವನ್ನು ನೇಣುಗಂಬಕ್ಕೇರಿಸಿತ್ತು. ಆ ವರ್ಷಪೂರ್ತಿ ಕಾಂಗ್ರೆಸ್ ತಾನು ಮುಂಬೈ ದಾಳಿಯ ಅಪರಾಧಿಗಳಾದ ಅಜ್ಮಲ್ ಕಸಬ್ ಮತ್ತು ಗುರುವನ್ನು ಹತ್ಯೆ ಮಾಡಿದ ಪಕ್ಷವೆಂದು ಪ್ರಚಾರ ಪಡೆಯಲು ಪ್ರಯತ್ನಿಸಿತು. ಈ ಮರಣದಂಡನೆಗಳು ಕಾಂಗ್ರೆಸನ್ನು ರಾಷ್ಟ್ರದ ಸುರಕ್ಷತೆಯನ್ನು ಬಯಸುವ ದೃಢ ಇಚ್ಛಾಶಕ್ತಿಯುಳ್ಳ ಪಕ್ಷವೆಂಬ ಜನರಲ್ಲಿನ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಇರಾದೆಯಿಂದ ನಡೆಸಲ್ಪಟ್ಟಿದ್ದವು. ಆದರೆ ಈ ತಂತ್ರ ಶೋಚನೀಯವಾಗಿ ವಿಫಲವಾದ ಕಾರಣ, 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದ ಪರಿಣಾಮವಾಗಿ ಪಕ್ಷವು ಮತ್ತೆ ಹಿಂದಕ್ಕೆ ತಿರುಗಿ ಗಲ್ಲಿಗೇರಿಸಲ್ಪಟ್ಟ ವ್ಯಕ್ತಿಯ ತಪ್ಪಿನ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸುವುದು ತುಂಬಾ ಉಪಯುಕ್ತ ಎಂದು ಯೋಚಿಸಿತು.