ಕೊಕೇನ್ ಚೀಲ ಎಸೆದು ಪರಾರಿಯಾದ ಗಗನಸಖಿ

Update: 2016-03-25 14:21 GMT

 ನ್ಯೂಯಾರ್ಕ್, ಮಾ. 25: ಅಮೆರಿಕದ ಜೆಟ್‌ಬ್ಲೂ ವಿಮಾನದ ಗಗನಸಖಿಯೊಬ್ಬಳು ಸುಮಾರು 32 ಕೆಜಿ ಕೊಕೇನ್ ಮಾದಕ ದ್ರವ್ಯವನ್ನು ಸಾಗಿಸುತ್ತಿದ್ದಾಗ ಲಾಸ್‌ಏಂಜಲಿಸ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಘಟನೆ ಕಳೆದ ಶುಕ್ರವಾರ ನಡೆದಿದೆ.

ಮಾಜಿ ವೇಗದ ಓಟಗಾರ್ತಿ ಹಾಗೂ ರೂಪದರ್ಶಿಯಾಗಿದ್ದ ಮಾರ್ಶಾ ರಿನಾಲ್ಡ್ಸ್ (31)ಳನ್ನು ಕಳೆದ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ತನಿಖೆಗೆ ಒಳಪಡಿಸಲಾಗಿತ್ತು. ಆಕೆಯ ಬಳಿ ಎರಡು ಚೀಲಗಳು ಮತ್ತು ಒಂದು ದೊಡ್ಡ ಪರ್ಸ್ ಇತ್ತು. ಚೀಲಗಳಲ್ಲಿ ಕೊಕೇನ್ ಇತ್ತು.

ಆಕೆಯನ್ನು ತಪಾಸಣಾ ಪ್ರದೇಶಕ್ಕೆ ಕರೆದುಕೊಂಡು ಹೋದಾಗ ತನ್ನ ಚೀಲಗಳನ್ನು ಕೆಳಕ್ಕೆ ಒಗೆದು, ಶೂಗಳನ್ನು ತೆಗೆದು ಹೊರಕ್ಕೆ ಓಡಿದಳು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಬಳಿಕ ಬುಧವಾರ ಸ್ವತಃ ಆಕೆಯೇ ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಡರಲ್ ಏಜಂಟ್‌ಗಳ ಮುಂದೆ ಹಾಜರಾದಳು.

ಮಾಶಾಳನ್ನು ಗುರುವಾರ ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News