ಚೀನಾದಲ್ಲಿ 60,000 ನೌಕರರ ಉದ್ಯೋಗಗಳನ್ನು ಕಿತ್ತು ಕೊಂಡ ರೊಬೊಟ್!

Update: 2016-05-26 13:17 GMT

ಚೀನಾ, ಮೇ 26: ರೊಬೊಟ್‌ಗಳು ಉದ್ಯೋಗವನ್ನು ಕಿತ್ತುಕೊಳ್ಳುತ್ತದೆ ಎಂಬುದು ನಿಜವಾಗುತ್ತಿದೆ. ಚೀನಾದಲ್ಲಿ ಆ್ಯಪಲ್ ಮತ್ತು ಸ್ಯಾಮ್ಸಂಗ್ ಉತ್ಪಾದಿಸುವ ಪಾರ್ಕ್ಸ್‌ಕಾನ್ 60,000 ನೌಕರರ ಬದಲು ರೊಬೊಟ್‌ನಿಂದ ಕೆಲಸ ಮಾಡಲು ಆರಂಭಿಸಿದೆ. ಚೀನಾದಲ್ಲಿ ಪಾರ್ಕ್ಸ್‌ಕಾನ್‌ಗೆ ಸುಮಾರು 12 ಕಾರ್ಖಾನೆಗಳಿವೆ. ಸರಕಾರಿ ಅಧಿಕಾರಿಯೊಬ್ಬರ ಪ್ರಕಾರ ಪಾರ್ಕ್ಸ್‌ಕಾನ್ ತನ್ನ ಒಂದು ಲಕ್ಷ ಹತ್ತು ಸಾವಿರ ಉದ್ಯೋಗಿಗಳ ಸಂಖ್ಯೆಯನ್ನು ಐವತ್ತು ಸಾವಿರಕ್ಕೆ ಇಳಿಸಿದೆ.

ಕಂಪೆನಿ ನೌಕರರ ಖರ್ಚು ಉಳಿಸುವ ಉದ್ದೇಶದಿಂದ ಹೀಗೆ ಮಾಡಿದೆ. ವರದಿಯಾಗಿರುವ ಪ್ರಕಾರ ಪಾರ್ಕ್ಸ್‌ಕಾನ್‌ನಿಂದ ಪ್ರಭಾವಿತವಾಗಿ ಹಲವು ಇತರ ಕಂಪೆನಿಗಳು ಈ ರೀತಿ ಪ್ರಯತ್ನವನ್ನು ಮಾಡಲಿವೆ. ಕುನ್ಶಾನ್ ಪ್ರಾಂತದಲ್ಲಿ ಚೀನ ಸರಕಾರ ರೊಬೊಟ್‌ನ ಮೇಲೆ ಭಾರೀ ಹೂಡಿಕೆ ಮಾಡಿದ್ದು ಇಲ್ಲಿ ಸುಮಾರು 25 ಲಕ್ಷ ಜನರು ವಾಸಿಸುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಇಲೆಕ್ಟ್ರಾನಿಕ್ ವಸ್ತು ನಿರ್ಮಾಣದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾರ್ಕ್ಸ್‌ಕಾನ್ ಕಂಪೆನಿ ವಕ್ತಾರ ಫ್ಯಾಕ್ಟರಿಯನ್ನು ಅಟೊಮ್ಯಾಟಿಕ್ ಮಾಡುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ ಎಂದು ಬಿಬಿಸಿಗೆ ತಿಳಿಸಿದ್ದಾರೆ. ಕಂಪೆನಿ ನೌಕರರ ಕೆಲಸ ಹೋಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಪುನಃಪುನಃ ಮಾಡುವ ಕೆಲಸಗಳನ್ನು ಮಾತ್ರ ರೊಬೊಟ್‌ಗಳಿಗೆ ವಹಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ನೌಕರರನ್ನು ಉಳಿದ ಇತರ ಕೆಲಸಗಳಿಗೆ ಬಳಸಲಾಗುವುದು. ಮಾನವ ಶಕ್ತಿಯನ್ನು ನಿರ್ಮಾಣ ಕಾರ್ಯದ ಸಂಶೋದನೆ, ಅಭಿವೃದ್ಧಿ ಮತ್ತು ಗುಣಮಟ್ಟದ ನಿಯಂತ್ರಣದಂತಹ ಕೆಲಸಗಳಿಗೆ ಬಳಸಲಾಗುವುದು ಎಂದು ಪಾರ್ಕ್ಸ್‌ಕಾನ್ ವಿವರಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News