ದಂಪತಿ ಜಗಳದಲ್ಲಿ ಬಯಲಾಯ್ತು ಕಿಡ್ನಿ ಮಾರಾಟ ಜಾಲ
Update: 2016-06-03 09:24 GMT
ಹೊಸದಿಲ್ಲಿ, ಜೂ.3: ರಾಷ್ಟ್ರ ರಾಜಧಾನಿಯಲ್ಲಿ ಅನಧಿಕೃತವಾಗಿ ಕಿಡ್ನಿ ಮಾರಾಟ ದಂಧೆಯಲ್ಲಿ ನಿರತವಾಗಿದ್ದ ಅಪೋಲೊ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ ಮೂವರು ಕಿಡ್ನಿ ಮಾರಾಟ ಜಾಲದಲ್ಲಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಗಳು ಈತನಕ ದಿಲ್ಲಿಯಲ್ಲಿ ಕನಿಷ್ಠ ನಾಲ್ಕು ಕಿಡ್ನಿಯನ್ನು ಮಾರಾಟ ಮಾಡಿರುವ ಬಗ್ಗೆ ಸಂಶಯಪಡಲಾಗಿದೆ.
ಆಸ್ಪತ್ರೆಯೊಂದರಲ್ಲಿ ದಂಪತಿ ಜಗಳವಾಡುತ್ತಿದ್ದಾಗ ಕಿಡ್ನಿ ಮಾರಾಟ ಜಾಲ ಪೊಲೀಸರ ಗಮನಕ್ಕೆ ಬಂದಿದೆ. ಪತಿ ತನ್ನ ಪತ್ನಿಯ ಗಮನಕ್ಕೆ ತಾರದೇ ಆಕೆಯ ಕಿಡ್ನಿಯನ್ನು ಮಾರಾಟ ಮಾಡಿದ್ದ. ಈ ವಿಷಯಕ್ಕೆ ಸಂಬಂಧಿಸಿ ದಂಪತಿ ಮಧ್ಯೆ ಜಗಳವಾಗಿದೆ.