ಇರ್ಫಾನ್‌ ಫಯಾಝ್ ಡೈರಿಯ ಪುಟಗಳು...

Update: 2016-08-24 19:06 GMT

ತನ್ನ ವಯಸ್ಸನ್ನು ಮೀರಿದ ಜವಾಬ್ದಾರಿ ಹೊತ್ತಿದ್ದ 18ರ ವಯಸ್ಸಿನ ಒಬ್ಬ ಹುಡುಗ, ತನ್ನ ಡೈರಿಯಲ್ಲಿ ತಾನಿಷ್ಟ ಪಡುವ ಕ್ರೀಡಾಪಟುವಿನ ಬಗ್ಗೆಯೋ, ತಾನು ಇಷ್ಟ ಪಡುವ ಸಿನೆಮಾ ನಟ/ನಟಿಯ ಬಗ್ಗೆಯೋ, ತಾನು ಪ್ರೀತಿಸುವ ಹುಡುಗಿಯ ಕುರಿತೋ ಒಂದೇ ಒಂದು ಸಾಲೂ ಬರೆದಿರಲಿಲ್ಲ. ‘‘ಉಗ್ರಗಾಮಿಗಳೊಡನೆ ಸೇರುತ್ತೇನೆ’’ ಎಂದು ಆವೇಶದಲ್ಲಿ ಒಮ್ಮೆ ಹೇಳಿದ್ದ ಆತ ಯಾವ ಉಗ್ರಗಾಮಿಯ ಕುರಿತೂ ಬರೆದಿರಲಿಲ್ಲ ತನ್ನ ಡೈರಿಯಲ್ಲಿ.   ಅದರಲ್ಲಿ ಪೊಲೀಸರು ತನ್ನ ಮೇಲೆ ಜಡಿದ 21 ಕೇಸ್ ಕುರಿತ ವಿವರ ಮತ್ತು ತಾನು ಕೋರ್ಟ್ ಹೋಗಬೇಕಾದ ದಿನಗಳನ್ನು ಬಿಟ್ಟರೆ ಬೇರೇನೂ ಬರೆದಿರಲಿಲ್ಲ ಇರ್ಫಾನ್‌. 

ಮೊನ್ನೆ ರವಿವಾರ (21 ಆಗಸ್ಟ್) ದಂದು ಹಳೆ ಶ್ರೀನಗರದಲ್ಲಿ ಸಿಆರ್‌ಪಿಎ್ ಗುಂಡಿಗೆ 18 ವರ್ಷದ ರ್ಇಾನ್ ಯಾಝ್ ವಾನಿ ಎಂಬ ಹುಡುಗ ಬಲಿಯಾಗಿದ್ದಾನೆ.  ಇರ್ಫಾನ್‌ ವಯಸ್ಸು ಹತ್ತಾಗುವ ಮುನ್ನ ಅವನ ಮೇಲೆ ಎರಡು ಕೇಸ್ ದಾಖಲಿಸಿದ್ದರು ಕಲ್ಲೆಸೆದು ಅಶಾಂತಿ ಸೃಷ್ಟಿಸಿದ ಎಂಬ ಕಾರಣಕ್ಕೆ! ಮೊದಲ ಬಾರಿ ಅವನನ್ನು ಬಾಲಕನಾಗಿದ್ದರೂ ಜೈಲಿನಲ್ಲಿ ವಯಸ್ಕರೊಂದಿಗೆ ಇರಿಸಲಾಯಿತು. ಹೊರಬಂದ ನಂತರ ಇರ್ಫಾನ್‌ ‘ಆಝಾದಿ’ ಪ್ರತಿಭಟನೆಗಳಲ್ಲಿ ಭಾಗವಹಿಸಲು ಆರಂಭಿಸಿದ, ಕೈಗೆ ಕಲ್ಲೆತ್ತಿಕೊಂಡ! ಮತ್ತೊಮ್ಮೆ ಜೈಲ್ ಸೇರಿದ!

ತನ್ನ ತಂದೆ ಮತ್ತು ಅಣ್ಣನ ಅನಾರೋಗ್ಯದ ಕಾರಣ ಸಂಸಾರದ ಜವಾಬ್ದಾರಿ ಆತ ಹೊರಬೇಕಾಗಿ ಬಂತು. ಚಹಾ ಅಂಗಡಿಯೊಂದರಲ್ಲಿ ಕೆಲಸ ಆರಂಭಿಸಿದ ಇರ್ಫಾನ್‌ ಒಂದು ವರ್ಷದ ನಂತರ ಆಟೊ ಚಾಲಕನಾದ. ತನ್ನ ತಂಗಿಯಂದಿರನ್ನು ತನ್ನ ಮಕ್ಕಳೆಂಬಂತೆ ನೋಡಿಕೊಳ್ಳತೊಡಗಿದ ಕಿರಿ ವಯಸ್ಸಿನಲ್ಲಿ ಸಂಸಾರದ ಜವಾಬ್ದಾರಿ ಹೊತ್ತ ಇರ್ಫಾನ್‌. ಇದೆಲ್ಲ ಆಗುತ್ತಿರುವಾಗ ಸುತ್ತಮುತ್ತ ಎಲ್ಲೇ ಆಝಾದಿ ಘೋಷಣೆ ಕೂಗಲ್ಪಟ್ಟರೆ, ಕಲ್ಲು ಎಸೆಯಲ್ಪಟ್ಟರೆ ಪೊಲೀಸರು ಇರ್ಫಾನ್‌ ಅನ್ನು ಆರೋಪಿಯನ್ನಾಗಿಸುತ್ತಿದ್ದರು, ಅಪರಾ ಎಂದು ಪರಿಗಣಿಸುತ್ತಿದ್ದರು. 18ನೆ ವಯಸ್ಸಾಗುವ ಹೊತ್ತಿಗಾಗಲೇ ಆತನ ಮೇಲೆ ಒಟ್ಟು 21 ಕೇಸ್‌ಗಳು ದಾಖಲಾಗಿದ್ದವು.

ಬಂಸಿದ ಪೊಲೀಸರು ಅವನನ್ನು ಹೇಗೆಲ್ಲಾ ಹಿಂಸಿಸಿದರು ಎಂದರೆ ಹಿಂಸೆ ಸಹಜವಾಗಿ ಪೊಲೀಸ್ ಕುರಿತಾಗಿ ಆತಂಕ, ಇದ್ದ ಭಯ ಅವನಲ್ಲಿ ಇಲ್ಲವಾಯಿತು. ಬಂಸಿದಾಗ ಅಷ್ಟೇ ಅಲ್ಲ ಪೊಲೀಸರು ಆತನಿಗೆ ಹಿಂಸೆ ನೀಡುತ್ತಿದ್ದದ್ದು. ಯಾವುದೇ ಪ್ರಕ್ಷುಬ್ಧತೆ ಇಲ್ಲದ ಸಮಯದಲ್ಲೂ ಆತನಿಂದ ಹ್ತಾ ವಸೂಲಿ ಮಾಡಿ ಇನ್ನೊಂದು ಬಗೆಯ ಹಿಂಸೆ ಆತನಿಗೆ ನೀಡುತ್ತಿದ್ದರು.

ಎಲ್ಲಾ ಹಿಂಸೆಯಿಂದ ಪಾರಾಗಲು 2015ರಲ್ಲಿ ಆತ ಜೀವನೋಪಾಯಕ್ಕಾಗಿ ಮನಾಲಿಗೆ ಹೋದ. ಆದರೆ ಕೆಲವೇ ತಿಂಗಳಲ್ಲಿ ಆತನ ತಂದೆಯ ನಿಧನದ ಸುದ್ದಿ ಬಂತು. ತಂದೆಯ ಸಾವಿನ ಸಂದರ್ಭದಲ್ಲಿ ಮನೆಗೆ ಮರಳಿದರೆ, ಮನೆಯ ಬಾಗಿಲು ಪ್ರವೇಶಿಸುವ ಹೊತ್ತಿಗೆ ಪೊಲೀಸರು ಮತ್ತೆ ಆತನನ್ನು ಬಂಸಿದರು. ಬಂಸಿದ ಪೊಲೀಸರು ಈಗ ಹೇಳಲು ಕೇಳಲು ಯಾರಿಲ್ಲ, ಹೋಗಿ ಉಗ್ರಗಾಮಿಗಳೊಂದಿಗೆ ಸೇರಲು ಸುಲಭವಾಯಿತು, ಎಂದೆಲ್ಲಾ ಹೇಳುತ್ತಾ ಹಿಂಸಿಸಿದರು. ಪೊಲೀಸರ ಹಿಂಸೆಯಿಂದಲೇ ತಂದೆಯ ಆರೋಗ್ಯ ತತ್ತರಿಸಿ ಕೊನೆಗೆ ಹೃದಯಾಘಾತವಾಗಿ ತೀರಿಕೊಂಡರು ಎಂದು ಗೊತ್ತಾಗುತ್ತಿದ್ದಂತೆ ಇರ್ಫಾನ್‌ ಕುಸಿದು ಹೋದ, ತಾನು ಉಗ್ರಗಾಮಿಗಳೊಡನೆ ಸೇರುತ್ತೇನೆ ಎಂದು ಹೇಳಲಾರಂಭಿಸಿದ್ದ. ಒಂದು ವರ್ಷದ ಹಿಂದೆ ನೋವಿನಲ್ಲೇ ಆ ಮಾತನ್ನು ಆಡಿದ್ದ ಹೊರತು ರ್ಇಾನ್ ನಂತರವೂ ಉಗ್ರಗಾಮಿ ಗಳನ್ನು ಸೇರಿರಲಿಲ್ಲ.
ಬುರ್ಹಾನ್ ವಾನಿ ಹತ್ಯೆಯಾಗಿ ಹಿಂಸೆ ಭುಗಿಲೆದ್ದಾಗ ಪೊಲೀಸರು ಇರ್ಫಾನ್‌ ಮನೆಗೆ ಮತ್ತೆ ಮತ್ತೆ ಭೇಟಿ ನೀಡಿ ವಿಚಾರಿಸತೊಡಗಿದರು ಮತ್ತು ಧಮಕಿ ಹಾಕಲಾರಂಭಿಸಿದರು. ಇದರಿಂದ ಭಯಭೀತಳಾದ ತಾಯಿ ಒಂದಿಷ್ಟು ದಿನ ಸಂಬಂಕರ ಮನೆಯಲ್ಲಿ ಹೋಗಿ ಇರು, ಎಂದು ಒತ್ತಾಯ ಮಾಡಿ ಹತ್ತಿರದ ಊರಿನ ಸಂಬಂಕರ ಮನೆಗೆ ಕಳುಹಿಸಿದರು.
ಒಂದು ವಾರದ ಬಳಿಕ ಮನೆಯವರನ್ನು ನೋಡುವ ಹಂಬಲದಿಂದ ಇರ್ಫಾನ್‌  ಮನೆ ಕಡೆ ಹೊರಟ. ತನ್ನ ಮನೆಯಿಂದ ಎರಡು ಕಿ.ಮೀ. ದೂರದಲ್ಲಿ ನೆರೆದಿದ್ದ ಪ್ರತಿಭಟನಾಕಾರರ ಬಳಿಯಿಂದ ಹಾದು ಬರುತ್ತಿರುವಾಗ ಇರ್ಫಾನ್‌, ಸಿ.ಆರ್.ಪಿ.ಎ್. ಗುಂಡಿಗೆ ಬಲಿಯಾದ.

ಆಟೊರಿಕ್ಷಾ ಚಾಲಕನಾಗಿದ್ದ ಇರ್ಫಾನ್‌ನ ಆಟೊರಿಕ್ಷಾದಲ್ಲಿ ಅವನ ಸ್ನೇಹಿತರಿಗೆ ಒಂದು ಡೈರಿ ಸಿಕ್ಕಿತು. ತನ್ನ ವಯಸ್ಸನ್ನು ಮೀರಿದ ಜವಾಬ್ದಾರಿ ಹೊತ್ತಿದ್ದ 18ರ ವಯಸ್ಸಿನ ಒಬ್ಬ ಹುಡುಗ, ತನ್ನ ಡೈರಿಯಲ್ಲಿ ತಾನಿಷ್ಟ ಪಡುವ ಕ್ರೀಡಾಪಟುವಿನ ಬಗ್ಗೆಯೋ, ತಾನು ಇಷ್ಟ ಪಡುವ ಸಿನೆಮಾ ನಟ/ನಟಿಯ ಬಗ್ಗೆಯೋ, ತಾನು ಪ್ರೀತಿಸುವ ಹುಡುಗಿಯ ಕುರಿತೋ ಒಂದೇ ಒಂದು ಸಾಲೂ ಬರೆದಿರಲಿಲ್ಲ. ‘‘ಉಗ್ರಗಾಮಿಗಳೊಡನೆ ಸೇರುತ್ತೇನೆ’’ ಎಂದು ಆವೇಶದಲ್ಲಿ ಒಮ್ಮೆ ಹೇಳಿದ್ದ ಆತ ಯಾವ ಉಗ್ರಗಾಮಿಯ ಕುರಿತೂ ಬರೆದಿರಲಿಲ್ಲ ತನ್ನ ಡೈರಿಯಲ್ಲಿ.

ಅದರಲ್ಲಿ ಪೊಲೀಸರು ತನ್ನ ಮೇಲೆ ಜಡಿದ 21 ಕೇಸ್ ಕುರಿತ ವಿವರ ಮತ್ತು ತಾನು ಕೋರ್ಟ್‌ಗೆ ಹೋಗಬೇಕಾದ ದಿನಗಳನ್ನು ಬಿಟ್ಟರೆ ಬೇರೇನೂ ಬರೆದಿರಲಿಲ್ಲ ರ್ಇಾನ್. ಬರೆಯಲು ಬೇರೇನೂ ಇರಲೂ ಇಲ್ಲ. ಕಾಶ್ಮೀರದ ಪ್ರಕ್ಷುಬ್ಧತೆ ಯುವಕನೊಬ್ಬನ ಬದುಕಿಗೆ 21 ಕೇಸ್ ಬಿಟ್ಟು ಬೇರೇನನ್ನೂ ಬರೆದುಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ.
ಅಸಂಖ್ಯ ಕತೆಗಳಲ್ಲಿ ಇದೂ ಒಂದು ಅಷ್ಟೇ...

(ಇರ್ಫಾನ್‌ ಕುರಿತ ವಿವರಗಳು ಸಿಕ್ಕಿದ್ದು ಉಮರ್ ಮುಶ್ತಾಕ್ ಎಂಬ ವರದಿಗಾರನ ವರದಿ ಮುಖಾಂತರ.)

Writer - ಸಂವರ್ತ ಸಾಹಿಲ್

contributor

Editor - ಸಂವರ್ತ ಸಾಹಿಲ್

contributor

Similar News