ವಿಶ್ವಸಂಸ್ಥೆ ಮುಖ್ಯಸ್ಥರಾಗಿ ಗುಟರಸ್ ಆಯ್ಕೆ

Update: 2016-10-14 18:34 GMT

ವಿಶ್ವಸಂಸ್ಥೆ, ಅ. 14: ವಿಶ್ವಸಂಸ್ಥೆಯ ಮಹಾಧಿವೇಶನವು ಗುರುವಾರ ಆಂಟೋನಿಯೊ ಗುಟರಸ್‌ರನ್ನು ವಿಶ್ವಸಂಸ್ಥೆಯ ನೂತನ ಮಹಾ ಕಾರ್ಯದರ್ಶಿಯನ್ನಾಗಿ ಔಪಚಾರಿಕವಾಗಿ ನೇಮಿಸಿತು. ಅವರು ಬಾನ್ ಕಿ ಮೂನ್‌ರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
ಪೋರ್ಚುಗಲ್‌ನ ಮಾಜಿ ಪ್ರಧಾನಿಯನ್ನು ಜನವರಿ 1ರಿಂದ ಐದು ವರ್ಷಗಳ ಅವಧಿಗೆ ಮಹಾಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ನಿರ್ಣಯವೊಂದನ್ನು 193 ಸದಸ್ಯ ದೇಶಗಳು ಧ್ವನಿ ಮತದಿಂದ ಅಂಗೀಕರಿಸಿದವು.
ಒಂದು ದಶಕದ ಅವಧಿಗೆ ವಿಶ್ವಸಂಸ್ಥೆಯ ನಿರಾಶ್ರಿತ ಘಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಸಮಾಜವಾದಿ ರಾಜಕಾರಣಿ, ಕಳೆದ ವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಐದು ವರ್ಷಗಳ ಎರಡು ಅವಧಿಗೆ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ದಕ್ಷಿಣ ಕೊರಿಯದ ಮಾಜಿ ವಿದೇಶ ಸಚಿವ ಬಾನ್ ಕಿ ಮೂನ್ ಡಿಸೆಂಬರ್ 31ರಂದು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News