ಮುಂಬೈ: ಥಾಣೆ ಮೇಯರ್ ಆಗಿ ಉಡುಪಿ ಮೂಲದ ಮಿನಾಕ್ಷಿ ಪೂಜಾರಿ ಆಯ್ಕೆ

Update: 2017-03-06 18:30 GMT

ಮುಂಬೈ, ಮಾ.6: ಮುಂಬಯಿ ಉಪನಗರದ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ)ಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಥಾಣೆ ಅಲ್ಲಿನ ಮಾನ್ಪಾಡ ಮನೋರಮಾ ನಗರದ 3ಸಿ ವಾರ್ಡ್‌ನಿಂದ ಶಿವಸೇನಾ ಪಕ್ಷದ ಅಭ್ಯರ್ಥಿಯಾಗಿದ್ದು, ಸತತ ಮೂರನೆ ಅವಧಿಗೆ ಸ್ಪರ್ಧಿಸಿ ವಿಜೇತರೆನಿಸಿದ್ದ ಉಡುಪಿ ಜಿಲ್ಲೆಯ ಕಟಪಾಡಿ ಎಣಗುಡ್ಡೆ ನಿವಾಸಿ ತುಳು ಕನ್ನಡತಿ ದಿ.ಗುರುವ ಕಾಂತಪ್ಪ ಪೂಜಾರಿ ಸುಪುತ್ರಿ ಮಿನಾಕ್ಷಿ (ರಾಜೇಂದ್ರ ಶಿಂಧೆ) ಪೂಜಾರಿ ಸೋಮವಾರ ಥಾಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಥಾಣೆ ಮಹಾನಗರ ಪಾಲಿಕೆಯ ಒಟ್ಟು 131 ಸ್ಥಾನಗಳಿಗೂ ಮತದಾನ ನಡೆದಿದ್ದು ಶಿವಸೇನೆ ಪಕ್ಷವು 67 ಸ್ಥಾನಗಳಲ್ಲಿ ಜಯಗಳಿತ್ತು. ಎನ್‌ಸಿಪಿ 34, ಬಿಜೆಪಿ 23, ಕಾಂಗ್ರೇಸ್ (ಐ) 03, ಪಕ್ಷೇತರರು 04 ಸ್ಥಾನಗಳನ್ನು ಪಡೆದಿದ್ದವು. ಈ ವಾರ್ಡ್‌ನಿಂದ ಈ ಬಾರಿ ಬಿಜೆಪಿ, ಕಾಂಗ್ರೆಸ್ (ಐ), ಎನ್‌ಸಿಪಿ, ಎಂಎನ್‌ಎಸ್ ಸೇರಿದಂತೆ ಐದು ಪಕ್ಷಗಳ ಅಭ್ಯರ್ಥಿಗಳಷ್ಟೇ ಸ್ಪರ್ಧಿಸಿ ಪಂಚಕೋನ ಸ್ಪರ್ಧೆ ಏರ್ಪಾಡಿತ್ತು.  ಆ ಪೈಕಿ ಮಿನಾಕ್ಷಿ ಪೂಜಾರಿ ದಾಖಲೆ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು.

ಮಾ.2ರಂದು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ಮಿನಾಕ್ಷಿ ಪೂಜಾರಿ ಅಂದೇ ಮೇಯರ್ ಸ್ಥಾನಕ್ಕೆ ಆಯ್ಕೆ ಆಗಿದ್ದರೂ ಚುನಾವಣಾ ಆಯೋಗದ ನಿಯಮಾನುಸಾರ ಅಧಿಕೃತವಾಗಿ ಇಂದಿಲ್ಲಿ ಮಿನಾಕ್ಷಿ ಪೂಜಾರಿ ಅವರನ್ನು ಥಾಣೆ ಮೇಯರ್ ಎಂದು ಪ್ರಕಟಿಸಿತು.

Writer - ರೋನ್ಸ್ ಬಂಟ್ವಾಳ್

contributor

Editor - ರೋನ್ಸ್ ಬಂಟ್ವಾಳ್

contributor

Similar News