ಧೋನಿ ಒಳ್ಳೆಯ ಟಿ20 ಆಟಗಾರನಲ್ಲ: ಸೌರವ್ ಗಂಗೂಲಿ

Update: 2017-04-13 06:06 GMT

ಹೊಸದಿಲ್ಲಿ, ಎ.13: ಮಹೇಂದ್ರ ಸಿಂಗ್ ಧೋನಿಯವರು ಒಳ್ಳೆಯ ಟಿ20 ಆಟಗಾರ ಎನ್ನುವುದನ್ನು ದೃಢವಾಗಿ ಹೇಳಲಾಗುವುದಿಲ್ಲ. ಆದರೆ ಏಕದಿನ ಕ್ರಿಕೆಟ್ ನಲ್ಲಿ ಅವರೊಬ್ಬ ಚಾಂಪಿಯನ್ ಆಟಗಾರ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಧೋನಿಯವರ ಪ್ರದರ್ಶನ ಉತ್ತಮವಾಗಿದ್ದರೂ, ಹಲವು ವರ್ಷಗಳಿಂದ ಟಿ20ಯಲ್ಲಿ ಧೋನಿಯ ಪರ್ಫಾಮೆನ್ಸ್ ಕಳಪೆಯಾಗಿದೆ  ಎನ್ನುವುದು ಗಂಗೂಲಿಯವರ ಅಭಿಪ್ರಾಯವಾಗಿದೆ.

ಐಟಪಿಎಲ್ ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ಆಟಗಾರನಾಗಿರುವ ಧೋನಿ ಪ್ರಥಮ ಬಾರಿಗೆ ನಾಯಕ ಸ್ಥಾನ ತೊರೆದು  ಸಾಮಾನ್ಯ ಆಟಗಾರನಾಗಿ ಲೀಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಈ ಲೀಗ್ ನಲ್ಲೂ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. 3 ಪಂದ್ಯಗಳಲ್ಲಿ 12, 5 ಹಾಗೂ 11  ರನ್ ಗಳಿಸಿರುವ ಧೋನಿ ಪ್ರದರ್ಶನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

“ಚಾಂಪಿಯನ್ಸ್ ಟ್ರೋಫಿಗೆ ಧೋನಿಯವರನ್ನು ನಾನು ಆಯ್ಕೆ ಮಾಡಲಿದ್ದೇನೆ. ಆದರೆ ಅವರು ರನ್ ಗಳಿಸಬೇಕು” ಎಂದು ಸೌರವ್ ಇದೇ ಸಂದರ್ಭ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News