ಗಾಂಧಿ ಅಂಚೆ ಚೀಟಿಗಳು ದಾಖಲೆ ಬೆಲೆಗೆ ಹರಾಜು

Update: 2017-04-20 15:06 GMT

ಲಂಡನ್, ಎ. 20: ಬ್ರಿಟನ್‌ನಲ್ಲಿ ನಡೆದ ಹರಾಜಿನಲ್ಲಿ ಮಹಾತ್ಮಾ ಗಾಂಧಿಯ ಚಿತ್ರವನ್ನು ಹೊಂದಿದ ನಾಲ್ಕು ಅಪರೂಪದ ಅಂಚೆಚೀಟಿಗಳು ದಾಖಲೆಯ 5 ಲಕ್ಷ ಪೌಂಡ್ (4.14 ಕೋಟಿ ರೂಪಾಯಿ)ಗೆ ಮಾರಾಟವಾಗಿವೆ. ಇದು ಭಾರತೀಯ ಅಂಚೆ ಚೀಟಿಗಳಿಗೆ ಈವರೆಗೆ ಸಿಕ್ಕಿದ ಅತ್ಯಂತ ಹೆಚ್ಚಿನ ಬೆಲೆಯಾಗಿದೆ ಎಂದು ಹೇಳಲಾಗಿದೆ.

1948ರ ಗಾಂಧಿ 10 ರೂಪಾಯಿಯ ನೇರಳ ಕಂದು ಮತ್ತು ಲೇಕ್ ‘ಸರ್ವಿಸ್’ ಅಂಚೆ ಚೀಟಿಗಳ ಪೈಕಿ ಈಗ ಕೇವಲ 13 ಲಭ್ಯವಿವೆ. ಈ ಪೈಕಿ ನಾಲ್ಕು ಅಂಚೆ ಚೀಟಿಗಳನ್ನು ಆಸ್ಟ್ರೇಲಿಯದ ಖಾಸಗಿ ಅಂಚೆ ಚೀಟಿ ಸಂಗ್ರಹಕಾರರೊಬ್ಬರಿಗೆ ಮಾರಾಟ ಮಾಡಲಾಯಿತು ಎಂದು ಬ್ರಿಟನ್‌ನ ಮಾರಾಟಗಾರ ಸ್ಟಾನ್ಲಿ ಗಿಬನ್ಸ್ ತಿಳಿಸಿದರು.

ಈ ಅಂಚೆ ಚೀಟಿಗಳು ನಾಲ್ಕರ ಸಮೂಹದಲ್ಲಿ ಇದ್ದುದರಿಂದ ‘ಅತ್ಯಂತ ಅಪರೂಪದ್ದು’ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News