ಬಾಬ್ ಡೈಲನ್ ಗಿಟಾರ್ 5 ಲಕ್ಷ ಡಾಲರ್‌ಗೆ ಹರಾಜು

Update: 2018-05-21 18:25 GMT

ಬಾಬ್ ಡೈಲನ್ ಅವರು ಜಾನಪದ ಸಂಗೀತದಿಂದ ರಾಕ್ ಸಂಗೀತದ ವರೆಗೆ ಬೆಳವಣಿಗೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ಗಿಟಾರ್ ಶನಿವಾರ 5 ಲಕ್ಷ ಡಾಲರ್‌ಗೆ ಮಾರಾಟವಾಗಿದೆ. ರೋಬ್ಬಿ ರೋಬರ್ಟ್ಸ್‌ನ್, ಡೈಲನ್ ಗಿಟಾರ್ ವಾದಕರಿಗೆ ಸೇರಿರುವ 1965 ಫೆಂಡರ್ ಟೆಲಿಕಾಸ್ಟರ್ ಗಿಟಾರ್ ಅನ್ನು ಡೈಲನ್, ಎರಿಕ್ ಕ್ಲಾಪ್ಟನ್ ಹಾಗೂ ಜಾರ್ಜ್ ಹ್ಯಾರಿಸನ್ ಬಳಸಿದ್ದರು ಎಂದು ಜೂಲಿಯನ್ಸ್ ಆಕ್ಸ್‌ನ್ಸ್ ತಿಳಿಸಿದೆ. ಈ ಗಿಟಾರ್ 4 ಲಕ್ಷ ಹಾಗೂ 6 ಲಕ್ಷದ ನಡುವೆ ಮಾರಾಟವಾಗುವುದೆಂದು ನಿರೀಕ್ಷಿಸಲಾಗಿತ್ತು. ಈ ಗಿಟಾರ್ ‘ದಿ ಟೈಮ್ಸ್ ದೇ ಆರ್ ಎ ಚೇಂಜಿನ್’ (1964) ನಂತಹ ಜಾನಪದ ಶೈಲಿಯ ಸಂಗೀತದಿಂದ ಹಿಡಿದು 1965ರ ಹಿಟ್ ‘ಲೈಕ್ ರೋಲಿಂಗ್ ಸ್ಟೋನ್’ ನಂತಹ ಇಲೆಕ್ಟ್ರಿಕ್ ರಾಕ್ ಮಾದರಿಯ ಗಾಯಕರ ಹಾದಿಯಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡಿದೆ. ಶನಿವಾರ ಹರಾಜಿಗೆ ಇರಿಸಲಾದ ಇತರ ಜನಪ್ರಿಯ ಗಿಟಾರ್‌ಗಳ ಹರಾಜು ಬೆಲೆ: ಜಾರ್ಜ್ ಹ್ಯಾರಿಸನ್ಸ್‌ನ ಮೊದಲ ಇಲೆಕ್ಟ್ರಿಕ್ ಗಿಟಾರ್ 4 ಲಕ್ಷ ಡಾಲರ್ ಬೆಲೆಯ ಹೋಫ್ನರ್ ಕ್ಲಬ್ ಹಾಗೂ 1968ರಲ್ಲಿ ಎಲ್ವಿಸ್ ಪ್ರೆಸ್ಲಿಗಾಗಿ ತಯಾರಿಸಲಾದ 115,200 ಬೆಲೆಯ ಫೆಂಡರ್ ಟೆಲಿಕಾಸ್ಟರ್ ರೋಸ್‌ವುಡ್ ಗಿಟಾರ್.

ಎಲ್ವಿಸ್ ಮೃತಪಟ್ಟು 40 ವರ್ಷಗಳ ಬಳಿಕ ಅವರ ಗಿಟಾರ್‌ಗಳಿಗೆ ಉತ್ತಮ ಬೆಲೆ ಬರುತ್ತಿದೆ. 1972ರಲ್ಲಿ ಹವಾಯಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭ ಧರಿಸಿದ ಅಲಂಕಾರಯುತ ಎಲ್ವಿಸ್‌ನ ಬೆಲ್ಟ್ 345,400 ಡಾಲರ್‌ಗೆ ಹರಾಜಾಗಿದೆ. ಕಲಾವಿದರಾದ ಎಲ್ಟನ್ ಜಾನ್‌ನಿಂದ ಬ್ರಿಟ್ನಿ ಸ್ಪಿಯರ್ ಹಾಗೂ ಮೈಕಲ್ ಜಾಕ್ಸನ್ ವರೆಗಿನ, ಪ್ರದರ್ಶನದ ವೇಳೆ ಧರಿಸಿದ ಉಡುಪುಗಳು ಈ ಹರಾಜಿನಲ್ಲಿ ಸೇರಿದೆ ಎಂದು ಜೂಲಿಯನ್ಸ್ ತಿಳಿಸಿದೆ.
 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News