11 ವರ್ಷದ ಈ ಬಾಲಕ ಅದ್ಭುತ ಪ್ರೇರಕ ಭಾಷಣಕಾರ
ಹಮ್ಮದ್ ಶಫಿ ಉಪನ್ಯಾಸ ನೀಡುತ್ತಾನೆ ಎಂದರೆ ಪಾಕಿಸ್ತಾನ ವಿಶ್ವವಿದ್ಯಾನಿಲಯದ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಸೇರುತ್ತಾರೆ. ಸುಂದರ ಉಡುಪು ಧರಿಸಿದ ಈ ಭಾಷಣಕಾರ ಪಾಕಿಸ್ಥಾನದ ಇಂಟರ್‌ನೆಟ್‌ನಲ್ಲಿ ಕುತೂಹಲ ಮೂಡಿಸಿದ್ದಾನೆ. ಇದಕ್ಕೆ ಆತನ ಅತ್ಯುತ್ಸಾಹ ಹಾಗೂ ನಗು ಮಾತ್ರ ಕಾರಣವಲ್ಲ. ಆತ ಕೇವಲ 11 ವರ್ಷದ ಬಾಲಕನಾಗಿರುವುದೂ ಕೂಡ ಕಾರಣ.
ಶಫಿ ವಯರ್‌ಲೆಸ್ ಮೈಕ್ರೋಫೋನ್‌ಲ್ಲಿ ಮಾತನಾಡುವಾಗ ಆತನ ಕೈಸನ್ನೆ, ಆತ್ಮಸ್ಥೈರ್ಯ ಪೇಶಾವರದ ಈಶಾನ್ಯ ನಗರದ ಸ್ಪೋಕನ್ ಇಂಗ್ಲೀಷ್ ವಿಶ್ವವಿದ್ಯಾನಿಲಯ (ಯುಎಸ್‌ಇಸಿಎಸ್)ದ ಹಿರಿಯ ವಿದ್ಯಾರ್ಥಿಗಳ ಗಮನ ಸೆಳೆಯಿತು. ಆನಂತರ ಅವರ ಪ್ರೇರಣೆಯಿಂದ ಆತ ಪ್ರೇರಕ ಭಾಷಣಕಾರನಾದ.
ಈಗ ಹಮ್ಮದ್ ಶಫಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಆನ್‌ಲೈನ್ ಸ್ಟಾರ್. ಈತನ ಚಾನೆಲ್‌ಗೆ 1,45,000 ಚಂದಾದಾ ರರಿದ್ದಾರೆ. ಈತನ ಕೆಲವು ವೀಡಿಯೊಗಳನ್ನು 10 ಲಕ್ಷದಷ್ಟು ಬಾರಿ ವೀಕ್ಷಿಸಲಾಗಿದೆ. ಈತನ ಕೆಲವು ಸಲಹೆಗಳು ಚರ್ವಿತಚರ್ವಣ. ಪ್ರತಿ ಸೆಕೆಂಡ್ ಕೂಡ ಸವಾಲಿನದ್ದು ಎಂದು ಆತ ಒಂದು ವೀಡಿಯೊದಲ್ಲಿ ಹೇಳುತ್ತಾನೆ. ಇನ್ನೊಂದು ವೀಡಿಯೊದಲ್ಲಿ ವಿಫಲತೆಯೇ ಯಶಸ್ಸಿಗೆ ಆಧಾರ ಎಂದು ಹೇಳುತ್ತಾನೆ. ಆದರೆ, ವೀಕ್ಷಕರು ಇನ್ನೆಲ್ಲ ತಲೆಗೆ ಹಾಕಿಕೊಳ್ಳುವುದಿಲ್ಲ.
ಶಫಿಯ ಪ್ರೇರಕ ಭಾಷಣ ಕೇಳಲು ಆಗಮಿಸಿದ ಶಫಿಯ ಎರಡರಷ್ಟು ಪ್ರಾಯದ ರಾಜ್ಯ ಶಾಸ್ತ್ರದ ವಿದ್ಯಾರ್ಥಿ ಬಿಲಾಲ್ ಖಾನ್, ‘‘ಈ ಬಾಲಕ ಅದ್ಭುತ. ಆತ ನನ್ನಲ್ಲಿ ತೀವ್ರ ಪರಿಣಾು ಉಂಟು ಮಾಡಿದ್ದಾನೆ’’ ಎನ್ನುತ್ತಾರೆ.
‘‘ಕೆಲವು ತಿಂಗಳ ಹಿಂದೆ ನಾನು ಬದುಕಿನ ಬಗ್ಗೆ ನಿರಾಶೆಗೊಂಡಿದ್ದೆ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೆ. ಯಾಕೆಂದರೆ, ನನಗೆ ಉದ್ಯೋಗ ಇರಲಿಲ್ಲ ಹಾಗೂ ಬದುಕಿನಲ್ಲಿ ಯಶಸ್ಸು ಇರಲಿಲ್ಲ. ಆನಂತರ ನಾನು ಹಮ್ಮದ್ ಶಫಿಯ ವೀಡಿಯೊ ನೋಡಿದೆ. 11 ವರ್ಷದ ಬಾಲಕ ಏನು ಬೇಕಾದರೂ ಮಾಡಬಹುದಾದರೆ, ನಾನು ಯಾಕೆ ಮಾಡಬಾರದು ಎಂಬ ಚಿಂತನೆ ನನ್ನಲ್ಲಿ ಮೂಡಿತು’’ ಎಂದು ಅವರು ಹೇಳಿದ್ದಾರೆ.
‘‘ಜನರು ಆತನನ್ನು ಪ್ರೀತಿಸುತ್ತಾರೆ. ಯಾಕೆಂದರೆ, ಅವರು ಮಾತನಾಡುತ್ತಾರೆ. ಪ್ರತಿಭಾರಿಯೂ ಅವರು ಮಾತು ಹೃದಯವನ್ನು ತಟ್ಟುತ್ತದೆ ಎಂದು ನಿವೃತ್ತ ಇಂಗ್ಲೀಷ್ ಅಧ್ಯಾಪಕ ಸಮೀವುಲ್ಲಾ ವಖಿಲ್ ಹೇಳುತ್ತಾರೆ.
ಪಾಕಿಸ್ಥಾನ ಸ್ವಾತಂತ್ರ ಹೋರಾಟಕ್ಕೆ ಉತ್ತೇಜನ ನೀಡಿದ ಜನಪ್ರಿಯ ಕವಿ ಅಲ್ಲಾಮಾ ಇಕ್ಬಾಲ್ ಬಗ್ಗೆ ಚರ್ಚಿಸುತ್ತಾ ಶಫಿ, ‘‘ಒಂದು ವೇಳೆ ಅವರು ಇಲ್ಲಿ ಇರದೇ ಇರುತ್ತಿದ್ದರೆ, ನಾನು ಅಥವಾ ಯಾರೇ ಆದರೂ ಖಚಿತವಾಗಿ ಇಂಗ್ಲಿಷರ ಮನೆಯ ಪಾಯಿಖಾನೆ ಶುಚಿಗೊಳಿಸಬೇಕಾಗಿತ್ತು’’ ಎಂದಿದ್ದಾನೆ.