ಜಬ್ಬಾರ್ ಪೊನ್ನೋಡಿ ನನ್ನ ಬೆಸ್ಟ್ ಫ್ರೆಂಡ್: ಶಿಹಾಬ್ ತಂಙಳ್

Update: 2018-08-04 20:25 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ಜಬ್ಬಾರ್ ಪೊನ್ನೋಡಿ

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? 

ವಾಟ್ಸ್ಯಾಪ್ ಗ್ರೂಪ್ ನಲ್ಲಿ ಪರಿಚಯವಾಗಿತ್ತು. ಗ್ರೂಪಿನಲ್ಲಿದ್ದ ಸ್ನೇಹಿತನ ಮದುವೆಯಲ್ಲಿ ಭೇಟಿಯಾಗಿದ್ದೆವು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ದ.ಕ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಸದಸ್ಯರಿರುವ ಡಿ.ಕೆ. ಬ್ರದರ್ಸ್ ವಾಟ್ಸಪ್ ಗ್ರೂಪಿನಲ್ಲಿ ವಿಷಯವೊಂದರ ಚರ್ಚೆ ತೀವ್ರಗೊಂಡಾಗ, ಇತರರಿಗೆ ತೊಂದರೆಯಾಗದಂತೆ ಸೌಹಾರ್ದಯುತ ಚರ್ಚೆಗೆ ಫೈಟ್ ಕ್ಲಬ್ ಗ್ರೂಪ್ ರಚಿಸಿ, ಗ್ರೂಪ್ ನಲ್ಲಿ ಪರಿಚಯವಾದವರು.

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ? 

ಧೈರ್ಯ, ನಗು ಮುಖ, ಸಾಂತ್ವನ

► ನಿಮ್ಮ ನಡುವಿನ ವಿರೋಧಾಭಾಸಗಳು ? 

ನಮ್ಮ ನಡುವೆ ವಿರೋಧಾಭಾಸಗಳು ಎಂಬುದಿಲ್ಲ

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ಕೆಲವು ವಿಷಯದ ಬಗ್ಗೆ ಮಧ್ಯರಾತ್ರಿವರೆಗೆ ತೀವ್ರ ಚರ್ಚೆ ನಡೆದಿವೆ. ಜಗಳಗಳೇನೂ ನಡೆದಿಲ್ಲ.

► ಮೊದಲು ರಾಜಿ ಆದದ್ಯಾರು ? 

ಚರ್ಚೆಗೆಂದು ಹುಟ್ಟಿಕೊಂಡ ಗ್ರೂಪ್ ಅದು. ನಂತರ ಎಲ್ಲರೂ ಪರಸ್ಪರ ಸ್ನೇಹಿತರಾದರು, ತಮ್ಮ ತಮ್ಮ ಸುಖ-ದುಃಖಗಳನ್ನು ಹಂಚುವ, ಸಲಹೆಗಳನ್ನು ಪಡೆಯುವ, ಕಷ್ಟಗಳಿಗೆ ಸ್ಪಂದಿಸುವ ಗ್ರೂಪ್ ಆಗಿ ಬದಲಾಯಿತು. ಬಿನ್ನಾಭಿಪ್ರಾಯಗಳು ಬಂದಾಗ, ರಾಜಿಗೆ ಬರುವರು ಜಬ್ಬಾರ್ ಭಾಯ್.

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?

ನನ್ನ ಪ್ರಕಾರ ಫ್ರೆಂಡ್ ಶಿಪ್ ಎಂದರೆ ಜೀವನದಲ್ಲಿ ಸುಖ ದುಖ್ಹಗಳನ್ನು ಪರಸ್ಪರ ಹಂಚಿಕೊಳ್ಳುವುದು.

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ? 

ಬೆಸ್ಟ್ ಫ್ರೆಂಡ್ ಎಂದರೆ ಕಷ್ಟಗಳಿಗೆ, ನೋವಿಗೆ ಪರಸ್ಪರ ಸಾಂತ್ವನ ನೀಡುವವನಾಗಿರಬೇಕು.

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?

ನನ್ನ ಬೆಸ್ಟ್ ಫ್ರೆಂಡ್ ಮೇಲೆ ಈವರೆಗೆ ಹೊಟ್ಟೆಕಿಚ್ಚಾಗಿಲ್ಲ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ ?

ಹಲವು ಸ್ನೇಹಿರತರಿದ್ದಾರೆ. ಹುಸೈನ್ ಶಾಫಿ, ಜಾಪು ಸವಣೂರ್, ಬ್ಯಾರಿ ಝುಲ್ಫಿ, ಅನ್ವರ್ ಮಠ, ಇಮ್ತಿಯಾಝ್, ಮಾಬಿ ಕಡಬ, ಮುಸ್ತಫ ಇರುವೈಲು, ರಾಝ್ ಬಾಲಯ, ಸಲಾಮ್ ಸಮ್ಮಿ, ಸರ್ಫ್ ವಲಾಲ್, ಶೌಕತ್

- ಶಿಹಾಬ್ ತಂಙಳ್, ಉಳ್ಳಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News