2018ರಲ್ಲಿ ಭಾರತದಲ್ಲಿ ನಡೆದ ಧಾರ್ಮಿಕ ಅಪರಾಧಗಳು ದಶಕದಲ್ಲೇ ಅತಿಹೆಚ್ಚು: ವರದಿ

Update: 2018-12-27 17:18 GMT

ಹೊಸದಿಲ್ಲಿ,ಡಿ.27: 2018ರಲ್ಲಿ ಭಾರತದಲ್ಲಿ ನಡೆದ ಧಾರ್ಮಿಕ ಅಪರಾಧಗಳ ಸಂಖ್ಯೆ ದಶಕದಲ್ಲೇ ಅತ್ಯಂತ ಹೆಚ್ಚಾಗಿದೆ ಎಂದು ಫ್ಯಾಕ್ಟ್‌ಚೆಕರ್.ಇನ್ ಎಂಬ ಜಾಲತಾಣ ನಡೆಸಿದ ಅಧ್ಯಯನ ವರದಿ ತಿಳಿಸಿದೆ. 2018ರಲ್ಲಿ ಭಾರತದಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ಮೂವತ್ತು ಮಂದಿ ಬಲಿಯಾಗಿದ್ದಾರೆ ಮತ್ತು 305 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 18 ಮಂದಿ ಮುಸ್ಲಿಮರಾಗಿದ್ದರೆ ಹತ್ತು ಮಂದಿ ಹಿಂದುಗಳು ಮತ್ತು ಇಬ್ಬರು ಕ್ರೈಸ್ತರಾಗಿದ್ದಾರೆ ಎಂದು ವರದಿ ತಿಳಿಸಿದೆ.

2009ರಿಂದೀಚೆಗೆ 65 ಮುಸ್ಲಿಮರು, 27 ಹಿಂದುಗಳು ಮತ್ತು ನಾಲ್ಕು ಕ್ರೈಸ್ತರು ಸೇರಿ ಒಟ್ಟಾರೆ ನೂರು ಮಂದಿ ಧಾರ್ಮಿಕ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. 2018ರಲ್ಲಿ ಅತ್ಯಂತ ಹೆಚ್ಚಿನ 17 ದಾಳಿಗಳು ಉತ್ತರ ಪ್ರದೇಶದಲ್ಲಿ ನಡೆದಿದ್ದರೆ ಬಿಹಾರದಲ್ಲಿ ಹತ್ತು ಧಾರ್ಮಿಕ ಅಪರಾಧ ಘಟನೆಗಳು ನಡೆದಿವೆ ಎಂದು ವರದಿ ತಿಳಿಸಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಮೈತ್ರಿ ಸರಕಾರವಿದೆ. ಇದರೊಂದಿಗೆ ಬಿಜೆಪಿ ಸರಕಾರವಿದ್ದ ರಾಜಸ್ಥಾನ ಮತ್ತು ಗುಜರಾತ್ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿರುವ ಕರ್ನಾಟಕದಲ್ಲಿ ತಲಾ ಏಳು ಧಾರ್ಮಿಕ ಹಿಂಸಾಚಾರ ಘಟನೆಗಳು ನಡೆದಿವೆ ಎಂದು ವರದಿ ತಿಳಿಸಿದೆ.

ಈ ದಾಳಿಗಳಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಮಂದಿ ಸಾವನ್ನಪ್ಪಿದ್ದರೆ ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ತಲಾ ಮೂವರು ಬಲಿಯಾಗಿದ್ದಾರೆ ಎಂದು ವರದಿ ಮಾಡಲಾಗಿದೆ. 2018ರಲ್ಲಿ ಅತೀ ಹೆಚ್ಚು ಅಂದರೆ ಶೇ.75 ಸಂತ್ರಸ್ತರು ಅಲ್ಪಸಂಖ್ಯಾತರಾಗಿದ್ದಾರೆ. ಈ ಪೈಕಿ ಮುಸ್ಲಿಮರು ಶೇ.60 ಆಗಿದ್ದರೆ ಶೇ.14 ಕ್ರೈಸ್ತರಾಗಿದ್ದಾರೆ. ಶೇ.17 ಪ್ರಕರಣಗಳು ಅಂತಧರ್ಮೀಯ ಸಂಬಂಧಗಳಿಂದಾಗಿ ನಡೆದಿದ್ದಾರೆ ಶೇ.15 ಗೋರಕ್ಷಣೆಯ ಹೆಸರಲ್ಲಿ ನಡೆದಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News