ಸಿರಿಯದಲ್ಲಿ ಅಮೆರಿಕ ಸೇನೆ ಇರಿಸಲು ಟ್ರಂಪ್ ಒಪ್ಪಿಗೆ

Update: 2019-03-06 16:01 GMT

ವಾಶಿಂಗ್ಟನ್, ಮಾ. 6: ಸಿರಿಯದಲ್ಲಿ ಅಮೆರಿಕದ ಸೈನಿಕರನ್ನು ಇರಿಸುವ ವಿಷಯದಲ್ಲಿ ಅಮೆರಿಕದ ಸಂಸದರೊಂದಿಗೆ ನಾನು ಪೂರ್ಣ ಸಹಮತ ಹೊಂದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿರಿಯದಲ್ಲಿ ಸ್ಥಿರತೆಗಾಗಿ ಅಮೆರಿಕದ ಸೈನಿಕರ ಸಣ್ಣ ಗುಂಪೊಂದನ್ನು ಇರಿಸುವ ಟ್ರಂಪ್‌ರ ನಿರ್ಧಾರವನ್ನು ಪ್ರಶಂಸಿಸಿ ಫೆಬ್ರವರಿ 22ರಂದು ಎರಡೂ ಪಕ್ಷಗಳಿಗೆ ಸೇರಿದ ಸೆನೆಟರ್‌ಗಳು ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಟ್ರಂಪ್‌ಗೆ ಪತ್ರವೊಂದನ್ನು ಬರೆದಿರುವುದನ್ನು ಸ್ಮರಿಸಬಹುದಾಗಿದೆ.

‘‘ನಾನು 100 ಶೇಕಡ ಒಪ್ಪುತ್ತೇನೆ. ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’’ ಎಂಬುದಾಗಿ ಆ ಪತ್ರದ ಮೇಲೆ ತನ್ನ ಸಹಿಯೊಂದಿಗೆ ಟ್ರಂಪ್ ಬರೆದಿದ್ದಾರೆ’’ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿರಿಯದ ಎರಡು ಸ್ಥಳಗಳಲ್ಲಿ ಅಮೆರಿಕದ ಸುಮಾರು 400 ಸೈನಿಕರು ಉಳಿಯಲಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News