93 ವರ್ಷದ ಅಜ್ಜಿಯನ್ನು ಬಂಧಿಸಿದ ಮ್ಯಾಂಚೆಸ್ಟರ್ ಪೊಲೀಸರು !

Update: 2019-06-26 15:19 GMT

ಯುನೈಟೆಡ್ ಕಿಂಗ್ ಡಮ್ ನ ಮ್ಯಾಂಚೆಸ್ಟರ್ ಪೊಲೀಸರು ಇತ್ತೀಚಿಗೆ 93 ವರ್ಷದ ಅಜ್ಜಿಯೊಬ್ಬರನ್ನು ಬಂಧಿಸಿದರು. ಅವರು ಎಸಗಿದ
ಅಪರಾಧ ? ಏನೂ ಇಲ್ಲ ! ಆ ಅಜ್ಜಿಗೆ ಪೊಲೀಸರಿಂದ ಬಂಧನಕ್ಕೊಳಗಾಗಬೇಕು ಎಂಬ ಜೀವನದ ಕೊನೆಯ ಆಸೆಯಿತ್ತು. ಅದನ್ನು ಈಡೇರಿಸಲು ಪೊಲೀಸರು ಅವರನ್ನು ಬಂಧಿಸಿದರು , ಅಷ್ಟೇ !

ಹೀಗೆ ತಾನೇ ಕೋಲು ಕೊಟ್ಟು ಪೊಲೀಸರಿಂದ 'ಪೆಟ್ಟು' ತಿಂದ ಅಜ್ಜಿಯ ಹೆಸರು ಜೋಸಿ ಬರ್ಡ್ಸ್.

ತನ್ನ ಅರೋಗ್ಯ ಕ್ಷೀಣಿಸುತ್ತಿರುವಾಗಲೇ ತನ್ನ ಜೀವನದ ಕೊನೆಯ ಆಸೆಯನ್ನು ಜೋಸಿ ಹೇಳಿಕೊಂಡಿದ್ದರು. ಅದನ್ನು ಆಕೆಯ ಮೊಮ್ಮಗಳು ಮ್ಯಾಂಚೆಸ್ಟರ್ ಪೋಲೀಸರ ಗಮನಕ್ಕೆ ತಂದು ತನ್ನ ಅಜ್ಜಿಯ ಕೊನೆ ಆಸೆ ಈಡೇರಿಸಲು ಸಹಕರಿಸಬೇಕೆಂದು ಕೇಳಿಕೊಂಡರು. ಈ ವಿಶೇಷ ವಿನಂತಿ ನೋಡಿ ತಲೆಕೆಡಿಸಿಕೊಂಡ ಪೊಲೀಸರು ಕೊನೆಗೂ ಅಜ್ಜಿಯ ಆಸೆ ನೆರವೇರಿಸಲು ಒಪ್ಪಿಕೊಂಡರು. 

ಆಕೆಯ ಮನೆಗೆ ಹೋಗಿ ಆಕೆಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ಒಟ್ಟಾರೆ ಅಪರಾಧ ಎಸಗಿ ಪೊಲೀಸರ ಅತಿಥಿಯಾಗುವ ಅನುಭವವನ್ನು ಆ ಅಜ್ಜಿಗೆ ಒದಗಿಸಿಕೊಟ್ಟರು. 

ನಾವು ಅಜ್ಜಿಯ ಆಸೆ ಈಡೇರಿಸಲು ಹೋದಾಗಲೂ ನಮ್ಮ ಎಲ್ಲ ಇತರ ಅಧಿಕಾರಿಗಳೂ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಇದರಿಂದ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಮ್ಯಾಂಚೆಸ್ಟರ್ ಪೊಲೀಸರು ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News