ಕಾಶ್ಮೀರ: 24 ಗಂಟೆಯಲ್ಲಿ 9 ಉಗ್ರರು ಹತ

Update: 2020-04-05 07:58 GMT

ಶ್ರೀನಗರ,ಎ.5:ಜಮ್ಮು-ಕಾಶ್ಮೀರದಲ್ಲಿ ರವಿವಾರ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕಳೆದ 24 ಗಂಟೆಯಲ್ಲಿ ಐವರು ನುಸುಳುಕೋರರು ಸಹಿತ 9 ಮಂದಿ ಉಗ್ರರು ಹತರಾಗಿದ್ದು,ಭಾರತೀಯ ಸೇನಾಪಡೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಕಾಶ್ಮೀರದ ಕುಲ್ಗಾಂವ್‌ನ ಬಟಾಪುರದಲ್ಲಿ ನಾಲ್ವರು ಉಗ್ರರನ್ನು ಕೊಲ್ಲಲಾಗಿತ್ತು.ರವಿವಾರ ಕುಪ್ವಾರದ ಕೆರಾನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುತ್ತಿದ್ದ ಐವರನ್ನು ಸಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಗ್ದ ನಾಗರಿಕರನ್ನು ಹತ್ಯೆಗೈದಿದ್ದ ನಾಲ್ವರು ಉಗ್ರರನ್ನು ಎಪ್ರಿಲ್ 4ರಂದು ದಕ್ಷಿಣ ಕಾಶ್ಮೀರದ ಬಟಾಪುರ ಪ್ರದೇಶದಲ್ಲಿ ಹತ್ಯೆಗೈಯ್ಯಲಾಗಿದೆ.ಕಾರ್ಯಾಚರಣೆಯ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು,ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಭಾರೀ ಮಂಜು ಪ್ರತಿಕೂಲ ಹವಾಗುಣ ಗಾಯಾಳುಗಳನ್ನು ತೆರವುಗೊಳಿಸಲು ಅಡ್ಡಿಯಾಗುತ್ತಿದೆ ಎಂದು ಸೇನೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News