ದೆಹಲಿಯಲ್ಲಿ 14465 ಮಂದಿ ಕೊರೋನಾ ಸೋಂಕಿತರು, ಸಾವಿನ ಸಂಖ್ಯೆ 288ಕ್ಕೆ
Update: 2020-05-26 18:15 GMT
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 288ಕ್ಕೇರಿದ್ದು, ಹೊಸದಾಗಿ ಮಂಗಳವಾರ 412 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೊಂಕಿತರ ಸಂಖ್ಯೆ 14465ಕ್ಕೇರಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.
ನಗರದಲ್ಲಿ ಗರಿಷ್ಠ ಅಂದರೆ 660 ಪ್ರಕರಣಗಳು ಮೇ 22ರಂದುದಾಖಲಾಗಿದ್ದವು. ಸೋಮವಾರ 635 ಪ್ರಕರಣಗಳು ದೃಢಪಟ್ಟಿದ್ದವು.
ಮಂಗಳವಾರ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ ಬುಲೆಟಿನ್‍ನಲ್ಲಿ ಕೊರೋನಾ ಸಾವಿನ ಸಂಖ್ಯೆ 288 ಎಂದು ಹೇಳಲಾಗಿದ್ದು, ಸೋಂಕಿತರ ಸಂಖ್ಯೆ 14465 ಎಂದು ಹೇಳಲಾಗಿದೆ.
ಆದಾಗ್ಯೂ ಕ್ರೋಢೀಕೃತ ಸಾವಿನ ಸಂಖ್ಯೆಯಲ್ಲಿ ಕೋವಿಡ್-19 ಸೋಂಕು ಸಾವಿಗೆ ಪ್ರಾಥಮಿಕ ಕಾರಣ ಎನ್ನಲಾದ ರೋಗಿಗಳು ಮಾತ್ರ ಸೇರಿದ್ದಾರೆ ಎಂದು ವಿವಿಧ ಆಸ್ಪತ್ರೆಗಳಿಂದ ಪಡೆದ ಕೇಸ್‍ಶೀಟ್‍ಗಳನ್ನು ಆಧರಿಸಿ ಮರಣ ಪರಿಶೋಧನಾ ಸಮಿತಿಯ ವರದಿ ಹೇಳಿದೆ.