ಒಂದೇ ಆಗ್ರಹದ ಎರಡು ಅವಿನಾಭಾವ ಆಯಾಮಗಳು

Update: 2021-02-02 19:30 GMT

ಈ ವರ್ಷ ಕೋವಿಡ್ ಬಂದು ಈ ದೇಶದ ಶೇ. 90ರಷ್ಟು ಜನರು ಜೀವನ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ. ಆದರೆ ಅದರ ನಡುವೆಯೂ ಕೇಂದ್ರ ಸರಕಾರದ ಬಜೆಟ್‌ನ ಅರ್ಧದಷ್ಟು, ಎಂದರೆ ರೂ. 12 ಲಕ್ಷ ಕೋಟಿಯಷ್ಟು ಆದಾಯವನ್ನು, ಈ ದೇಶದ ಕೇವಲ ನೂರು ಕೋಟ್ಯಧಿಪತಿಗಳು ಹೆಚ್ಚಿಸಿಕೊಂಡಿದ್ದಾರೆ. ಹೀಗಿರುವಾಗ ಒಂದು ನಿಜವಾದ ದೇಶಭಕ್ತರ, ಜನಪರ ಸರಕಾರ ಬಡವರ ಆದಾಯವನ್ನು ಹೆಚ್ಚಿಸುವ, ಉದ್ಯೋಗವನ್ನು ಒದಗಿಸುವ ಬಜೆಟನ್ನು ಮಂಡಿಸಬೇಕಿತ್ತು. ಅದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಉಳ್ಳವರಿಗೆ ತೆರಿಗೆ ಹೆಚ್ಚಿಸುವ ಮೂಲಕ ಕ್ರೋಡೀಕರಿಸಬೇಕಿತ್ತು. ಆದರೆ, ಮೋದಿ ಸರಕಾರ ಈ ಬಜೆಟ್‌ನಲ್ಲಿ ಮಾಡಿರುವುದೇನು?


ಮೊದಲಿಗೆ ಭಾರತ ಕಂಡು ಕೇಳರಿಯದ ಹಾಲಿ ಬಜೆಟ್‌ನ ಬಗ್ಗೆ ಒಂದಷ್ಟು. ಬಜೆಟೆಂದರೆ ಬಡಜನರನ್ನು ಬಗೆಬಗೆಯಾಗಿ ಸುಲಿದು ಶ್ರೀಮಂತರಿಗೆ ಬಲಿಕೊಡುವ ಬಣ್ಣದ ಸರ್ಕಸ್ ಎಂಬುದನ್ನು ಈ ದೇಶದ ಪ್ರತಿ ಬಜೆಟ್ ಸಾಬೀತು ಮಾಡುತ್ತಾ ಬಂದಿದೆ. ಆದರೆ ಈ ವರ್ಷ ಕೋವಿಡ್ ಬಂದು ಈ ದೇಶದ ಶೇ. 90ರಷ್ಟು ಜನರು ಜೀವನ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ. ಆದರೆ ಅದರ ನಡುವೆಯೂ ಕೇಂದ್ರ ಸರಕಾರದ ಬಜೆಟ್‌ನ ಅರ್ಧದಷ್ಟು, ಎಂದರೆ 12 ಲಕ್ಷ ಕೋಟಿಯಷ್ಟು ಆದಾಯವನ್ನು, ಈ ದೇಶದ ಕೇವಲ ನೂರು ಕೋಟ್ಯಧಿಪತಿಗಳು ಹೆಚ್ಚಿಸಿಕೊಂಡಿದ್ದಾರೆ. ಹೀಗಿರುವಾಗ ಒಂದು ನಿಜವಾದ ದೇಶಭಕ್ತರ, ಜನಪರ ಸರಕಾರ ಬಡವರ ಆದಾಯವನ್ನು ಹೆಚ್ಚಿಸುವ, ಉದ್ಯೋಗವನ್ನು ಒದಗಿಸುವ ಬಜೆಟನ್ನು ಮಂಡಿಸಬೇಕಿತ್ತು. ಅದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಉಳ್ಳವರಿಗೆ ತೆರಿಗೆ ಹೆಚ್ಚಿಸುವ ಮೂಲಕ ಕ್ರೋಡೀಕರಿಸಬೇಕಿತ್ತು. ಆದರೆ, ಮೋದಿ ಸರಕಾರ ಈ ಬಜೆಟ್‌ನಲ್ಲಿ ಮಾಡಿರುವುದೇನು?

ಭಾರತ ಬರ್ಬರ - ಕಾರ್ಪೊರೇಟ್ ನಿರ್ಭರ ನೀತಿಗಳು

ಒಂದು ಸರಕಾರ ತನ್ನ ವೆಚ್ಚಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಅದನ್ನು ಯಾವ್ಯಾವ ಜನಸಮುದಾಯಗಳನ್ನು ಹಾಗೂ ವಲಯಗಳನ್ನು ಗುರಿಯಾಗಿರಿಸಿಕೊಂಡು ವೆಚ್ಚ ಮಾಡುತ್ತದೆ ಎನ್ನುವುದೇ ಬಜೆಟ್‌ನ ಸಾರ. ಅದು ಆಯಾ ಸರಕಾರಗಳ ಸೈದ್ಧಾಂತಿಕ ಹಿನ್ನೆಲೆ ಮತ್ತು ರಾಜಕೀಯಗಳನ್ನು ಆಧರಿಸಿದ ಆರ್ಥಿಕ ನೀತಿಗಳ ಹಿನ್ನೆಲೆಯ ಅಭಿವ್ಯಕ್ತಿಯೂ ಆಗಿರುತ್ತದೆ. ಕೋವಿಡ್‌ಗೆ ಮುನ್ನಾ ವರ್ಷ ಮೋದಿ ಸರಕಾರ ಉಳ್ಳವರ ಮೇಲೆ ನೇರ ತೆರಿಗೆ ಹಾಕಿ ಸಂಗ್ರಹಿಸಿದ ತೆರಿಗೆ ಮೊತ್ತ 6.5 ಲಕ್ಷ ಕೋಟಿ ಮಾತ್ರ. ಈ ವರ್ಷ ಉಳ್ಳವರ್ಗ ಕೋವಿಡ್ ಕಾಲದಲ್ಲೂ ಸರಕಾರದ ನೀತಿಗಳ ಫಲಾನುಭವಿಗಳಾಗಿ ಈಗಾಗಲೇ ಹೇಳಿದಂತೆ ತಮ್ಮ ಆದಾಯವನ್ನು ಶೇ.35ರಷ್ಟು ಹೆಚ್ಚಿಸಿಕೊಂಡಿದೆ. ಆದರೆ 2021-22 ಸಾಲಿನಲ್ಲಿ ಮೋದಿ ಸರಕಾರ ಅವರಿಂದ ನಿರೀಕ್ಷಿಸುತ್ತಿರುವ ತೆರಿಗೆ ಕೋವಿಡ್ ಪೂರ್ವ ವರ್ಷಕ್ಕಿಂತ ಕಡಿಮೆ- ಕೇವಲ 5 ಲಕ್ಷ ಕೋಟಿ ರೂ. ಗಳು ಮಾತ್ರ. ಅಂದರೆ ಒಂದು ಲಕ್ಷ ಕೋಟಿ ರೂ. ನಷ್ಟು ತೆರಿಗೆ ರಿಯಾಯಿತಿಗಳು ಉಳ್ಳ ವರ್ಗಕ್ಕೆ. ಆದರೆ ಅದೇ ರಿಯಾಯಿತಿಯನ್ನು ಕೋವಿಡ್‌ನಿಂದ ಕಂಗೆಟ್ಟಿರುವ ಈ ದೇಶದ ಶೇ. 90ರಷ್ಟು ಜನಸಮುದಾಯಕ್ಕೆ ನೀಡಿದೆಯೇ? ಖಂಡಿತಾ ಇಲ್ಲ. ಬದಲಿಗೆ, ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ. 100ರಷ್ಟು ಇಳಿದಿದ್ದರೂ ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್-ಡೀಸೆಲ್ ಮೇಲೆ ಕೇಂದ್ರ ತೆರಿಗೆಯನ್ನು ಶೇ. 200ರಷ್ಟು ಹೆಚ್ಚಿಸಿದೆ ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ತಲುಪುತ್ತಿದೆ. ಇದನ್ನು ತೆರುವವರು ಬಡ-ಮಧ್ಯಮ ವರ್ಗದವರು. ಈ ಬಾಬತ್ತಿನಿಂದಲೇ ಸರಕಾರಕ್ಕೆ 3 ಲಕ್ಷ ಕೋಟಿ ರೂ. ಅಧಿಕ ತೆರಿಗೆ ಪಾವತಿಯಾಗಿದೆ. ಅಷ್ಟು ಮಾತ್ರವಲ್ಲ, ಇನ್ನು ಮುಂದೆ ಅವುಗಳ ಮೇಲಿನ ತೆರಿಗೆ ಹೆಚ್ಚಳವನ್ನು ಸೆಸ್ ರೂಪದಲ್ಲೇ ಹೆಚ್ಚಿಸಲಾಗುವುದೇ ವಿನಾ ತೆರಿಗೆ ರೂಪದಲ್ಲಲ್ಲ ಎಂದು ಸರಕಾರ ಹೇಳಿದೆ. ತೆರಿಗೆಯ ರೂಪದಲ್ಲಿ ಹೆಚ್ಚಳವಾಗಿದ್ದರೆ, ಕೇಂದ್ರ ತೆರಿಗೆಯಲ್ಲಿ ರಾಜ್ಯ ಸರಕಾರಗಳಿಗೂ ಪಾಲಿರುವು ದರಿಂದ ಒಂದಷ್ಟು ರಾಜ್ಯಗಳಿಗೆ ದಕ್ಕುತ್ತಿತ್ತು. ಆದರೆ ಸೆಸ್‌ಗಳಲ್ಲಿ ರಾಜ್ಯಗಳಿಗೆ ಪಾಲಿರುವುದಿಲ್ಲ. ಅದು ಸಂಪೂರ್ಣವಾಗಿ ಕೇಂದ್ರದ ಸ್ವತ್ತು. ಇದರ ಜೊತೆಗೆ ತೆರಿಗೆ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ಸರಕಾರ ದೇಶದ ಸಂಪತ್ತೆಲ್ಲವನ್ನೂ ಮಾರಿಕೊಳ್ಳುವ ಪ್ರಸ್ತಾಪವನ್ನು ಯಾವುದೇ ಭಿಡೆ ಇಲ್ಲದೆ ಘೋಷಿಸಿದೆ.

ಬಜೆಟ್ಟೋ-ಭಾರತದ ಸಗಟು ಮಾರಾಟವೋ? 

ಉದಾಹರಣೆಗೆ, ಬಜೆಟ್‌ನಲ್ಲಿ ಹೀಗೆ ಹೇಳಲಾಗಿದೆ:

.....ಬಿ) ವಿವಿಧ ವಲಯಗಳನ್ನು ವ್ಯೆಹಾತ್ಮಕ ಹಾಗೂ ವ್ಯೆಹಾತ್ಮಕವಲ್ಲದ ವಲಯಗಳೆಂದು ವರ್ಗೀಕರಿಸಲಾಗುವುದು ಸಿ) ವ್ಯೆಹಾತ್ಮಕ ವಲಯಗಳೆಂದರೆ

1) ಅಣುಶಕ್ತಿ , ಬಾಹ್ಯಾಕಾಶ ಮತ್ತು ರಕ್ಷಣೆ

2) ಸಾರಿಗೆ ಮತ್ತು ದೂರ ಸಂಪರ್ಕ

3) ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳು 4) ಬ್ಯಾಂಕುಗಳು, ವಿಮೆ ಮತ್ತಿತರ ಹಣಕಾಸು ಸೇವೆಗಳು. ಡಿ) ಈ ಮೇಲಿನ ವ್ಯೆಹಾತ್ಮಕ ವಲಯಗಳಲ್ಲಿ ಸಾರ್ವಜನಿಕ ವಲಯದ ಕ್ಷೇತ್ರಗಳು ಅತ್ಯಂತ ಕನಿಷ್ಠ ಮಟ್ಟದಲ್ಲಿ ಮಾತ್ರವೇ ಇರುತ್ತವೆ. (ಅಂದರೆ ಖಾಸಗೀಕರಿಸಲಾಗುತ್ತದೆ)

ಇ) ವ್ಯೆಹಾತ್ಮಕ ವಲಯದಲ್ಲಿರುವ ಉಳಿದ ಕೇಂದ್ರ ಸರಕಾರಿ ಉದ್ಯಮಗಳನ್ನು ಒಂದೋ ಖಾಸಗೀಕರಿಸಲಾಗುವುದು ಅಥವಾ ಅದೇ ವಲಯದ ಇತರ ಸರಕಾರಿ ಉದ್ಯಮಗಳೊಡನೆ ವಿಲೀನಗೊಳಿಸಲಾಗುವುದು ಅಥವಾ ಮುಚ್ಚಿಬಿಡಲಾಗುವುದು. ಎಫ್) ವ್ಯೆಹಾತ್ಮಕ ವಲಯದಲ್ಲಿಲ್ಲದ ಸರಕಾರಿ ಕಾರ್ಖಾನೆಗಳನ್ನು ಒಂದೋ ಖಾಸಗೀಕರಿಸಲಾಗುವುದು ಅಥವಾ ಮುಚ್ಚಿಬಿಡಲಾಗುವುದು.
(ಬಜೆಟ್ ಭಾಷಣ- ಪುಟ.-39, ಅನುಬಂಧ- 3)
(https://www.indiabudget.gov.in/doc/Budget_Speech.pdf)

ಅದರ ಅರ್ಥ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ನಷ್ಟ ಮಾಡುತ್ತಿದ್ದವು ಎಂದಲ್ಲ. ಉದಾಹರಣೆಗೆ ಮಹಾರತ್ನ ಎಂದು ಪರಿಗಣಸಲ್ಪಟ್ಟಿರುವ BPCL, HPCL, ONGCಗಳನ್ನೂ ಖಾಸಗೀಕರಿಸಲಾಗುತ್ತಿದೆ. ಮಹಾರತ್ನಗಳು ಎಂದರೆ ಕನಿಷ್ಟ ರೂ. 20,000 ಕೋಟಿ ನಗದು ಮೀಸಲು ನಿಧಿ ಇರುವ ಹಾಗೂ ಸತತ ಐದು ವರ್ಷಗಳ ಕಾಲ ರೂ. 5,000 ಕೋಟಿಗಿಂತಲೂ ಹೆಚ್ಚು ಲಾಭ ಮಾಡಿರುವ ಸಂಸ್ಥೆಗಳು ಎಂದರ್ಥ..! ಇಷ್ಟೆಲ್ಲಾ ಆದ ಮೇಲೆ ಭಾರತ ಅಂತ ಏನಾದರೂ ಉಳಿದಿರುತ್ತಾ? ಭಕ್ತರೇ ಹೇಳಬೇಕು. ಇನ್ನು ಸರಕಾರ ವೆಚ್ಚವನ್ನು ಮಾಡುತ್ತಿರುವುದು ಹೇಗೆ?

ರೈತ-ಕಾರ್ಮಿಕರಿಗೆ ಹೊರೆ ಮತ್ತು ಬರೆ!

ಬಜೆಟ್ ತಯಾರಾಗುವ ಹೊತ್ತಿನಲ್ಲಿ ದಿಲ್ಲಿ ಹೊರವಲಯದಲ್ಲಿ ಲಕ್ಷಾಂತರ ರೈತರು ಕನಿಷ್ಠ ಬೆಂಬಲ ಬೆಲೆ, ಕೃಷಿ ಕಾಯ್ದೆಗಳ ಹಿಂಪಡೆತ ಹಾಗೂ ರೈತ ಪರ ನೀತಿಗಳಿಗಾಗಿ ಆಗ್ರಹಿಸುತ್ತಾ ಮುತ್ತಿಗೆ ಹಾಕಿ ಎರಡು ತಿಂಗಳುಗಳಾಗುತ್ತಾ ಬರುತ್ತಿತ್ತು. ತಾವು ರೈತ ಪರ ಎಂದು ಘೋಷಿಸಿಕೊಳ್ಳುವ ಮೋದಿ ಸರಕಾರ ರೈತಪರ ವೆಚ್ಚವನ್ನೇನಾದರೂ ಹೆಚ್ಚಿಸಿದೆಯೇ? ವಾಸ್ತವವಾಗಿ ಹೆಚ್ಚಿಸಿರುವುದಿರಲಿ ಕೋವಿಡ್ ಪೂರ್ವ ಅವಧಿಗಿಂತ ರೈತ ಮತ್ತು ಕೃಷಿಗೆ ಮಾಡುತ್ತಿದ್ದ ವೆಚ್ಚವನ್ನು ಕಡಿತಗೊಳಿಸಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿ ವಲಯಗಳಿಗೆ ಮಾಡುತ್ತಿದ್ದ ವೆಚ್ಚವು ಕಳೆದ ಸಾಲಿನಲ್ಲಿ ಶೇ. 5.1ರಷ್ಟಿದ್ದದ್ದು ಈ ಸಾಲಿನಲ್ಲಿ 4.3ಕ್ಕೆ ಇಳಿದಿದೆ. ಅಂದರೆ ಹೋದ ವರ್ಷ ರೈತ ಬಾಬತ್ತುಗಳಿಗೆ ರೂ. 1.54 ಲಕ್ಷ ಕೋಟಿ ನೀಡಿದ್ದರೆ ಈ ವರ್ಷ ಹೆಚ್ಚಿಸುವ ಬದಲು 6,000 ಕೋಟಿ ರೂ. ಕಡಿತಗೊಳಿಸಲಾಗಿದೆ.

ಇನ್ನು ರೈತರಿಗೆ ಕನಿಷ್ಠ ಬೆಲೆಯನ್ನು ಖಾತರಿ ಪಡಿಸುವ ಯೋಜನೆಗಳಾಗಿದ್ದ PM-AASHA (ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣಾ ಅಭಿಯಾನ್)ಗೆ ನೀಡುತ್ತಿದ್ದ ಮೊತ್ತವನ್ನು ರೂ. 1,500 ಕೋಟಿಯಿಂದ 500 ಕೋಟಿಗೆ ಇಳಿಸಲಾಗಿದೆ. ಹಾಗೆಯೇ MIS-PSS (ಮಾರುಕಟ್ಟೆ ಮಧ್ಯಪ್ರವೇಶ ಮತ್ತು ಬೆಲೆ ಬೆಂಬಲ ಯೋಜನೆ)ಗಾಗಿ ನೀಡಲಾಗುತ್ತಿದ್ದ ಮೊತ್ತವನ್ನು ರೂ. 3,000 ಕೋಟಿಯಿಂದ 1,500 ಕೋಟಿಗೆ ಅಂದರೆ ಅರ್ಧಕ್ಕರ್ಧ ಕಡಿತಗೊಳಿಸಲಾಗಿದೆ. ಇದರ ಜೊತೆಗೆ ಗ್ರಾಮೀಣ ಅಭಿವೃದ್ಧಿ, ಗ್ರಾಮೀಣ ವೈದ್ಯಕೀಯ, ಕೃಷಿ ಮತ್ತು ಶಿಕ್ಷಣಕ್ಕೆ ನೀಡಿದ್ದ ಬಜೆಟ್‌ನಲ್ಲಿ ಅರ್ಧಕ್ಕರ್ದ ವೆಚ್ಚ ಮಾಡಿಲ್ಲ. ಹಾಗೂ ಈ ಸಾಲಿನಲ್ಲಿ ಬಜೆಟ್ ಅನುದಾನವನ್ನೂ ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. ಇದು ಮೋದಿಯವರ ಆತ್ಮನಿರ್ಭರತೆಯ ಸ್ವರೂಪ. ಮೋದಿ ಸರಕಾರ ಅದಾನಿ-ಅಂಬಾನಿಕೆ ಸಾಥ್, ಅದಾನಿ-ಅಂಬಾನಿಕೇ ವಿಕಾಸ್ ಮಾತ್ರ. ಇದರ ಜೊತೆಗೆ ಈ ದೇಶದ ರೈತಾಪಿಗೆ ಸಿಗುತ್ತಿದ್ದ ಅಲ್ಪಸ್ವಲ್ಪಎಂಎಸ್‌ಪಿ ಬೆಂಬಲ ಹಾಗೂ ಬಡವರಿಗೆ ರಿಯಾಯತಿ ಆಹಾರ ಧಾನ್ಯಗಳ ಪೂರೈಕೆಯನ್ನೂ ಕಿತ್ತುಹಾಕುವ ಬೃಹತ್ ಯೋಜನೆಯನ್ನು ಮೋದಿ ಸರಕಾರ ಸದ್ದಿಲ್ಲದೆ ಜಾರಿ ಮಾಡುತ್ತಿದೆ.

ಎಫ್‌ಸಿಐ, ಎಂಎಸ್‌ಪಿ, ಪಡಿತರ ವ್ಯವಸ್ಥೆ -ಒಂದೇ ಬಾಣ, ಮೂರು ಪ್ರಾಣ 
ಕೇಂದ್ರದ ಕಾರ್ಪೊರೇಟ್ ಪರ ಕೃಷಿ ಕಾಯ್ದೆ ವಿರೋಧಿ ಚಾರಿತ್ರಿಕ ಜನಾಂದೋಲನದಲ್ಲಿ ಮೂರೂ ಹೊಸ ಕಾಯ್ದೆಗಳ ರದ್ದತಿ ಹಾಗೂ ಎಂಎಸ್‌ಪಿಯ ಕಾಯ್ದೀಕರಣ ನಮ್ಮ ಪ್ರಮುಖ ಆಗ್ರಹಗಳಾಗಿವೆಯಷ್ಟೇ..

ಎಂಎಸ್‌ಪಿ ಲೆಕ್ಕಾಚಾರದಲ್ಲಿ 2006ರ ಸ್ವಾಮಿನಾಥನ್ ಸಮಿತಿ ಶಿಫಾರಸ್‌ನಂತೆ ಇ2+50ಶೇ. ದರ ನಿಗದಿಯಾಗಬೇಕೆಂಬ ಬಗ್ಗೆ ರೈತ ಚಳವಳಿಗಳಲ್ಲಿ ಸಹಮತ ಏರ್ಪಟ್ಟಿದೆ.

2013ರ ರೊಮೇಶ್ ಚಂದ್ರ ಸಮಿತಿಯು, 2006ರ ಸ್ವಾಮಿನಾಥನ್ ಸಮಿತಿಯು ಎಂಎಸ್‌ಪಿ ಲೆಕ್ಕ ಮಾಡುವಾಗ ಗಣನೆಗೆ ತೆಗೆದುಕೊಳ್ಳದ ಕಟಾವಿನ ನಂತರದ ವೆಚ್ಚ ಹಾಗೂ ರೈತರ Managerial and skilled labour ಶ್ರಮ ಹಾಗೂ ಇನ್ನಿತರ ಬಂಡವಾಳ ವೆಚ್ಚವನ್ನು ಪರಿಗಣಿಸಬೇಕೆಂದು ಸಲಹೆ ಮಾಡಿದೆ. ಡಾ. ಪ್ರಕಾಶ್ ಕಮ್ಮರಡಿಯವರ ವರದಿಯೂ ಇಂತಹ ವೆಚ್ಚಗಳನ್ನು ಒಳಗೊಂಡು ಎಂಎಸ್‌ಪಿಯನ್ನು ಲೆಕ್ಕ ಹಾಕಬೇಕೆಂದು ಸಲಹೆ ಮಾಡಿದೆ. ಇವೆಲ್ಲವೂ ಸೂಕ್ತವಾದ ಸಲಹೆಗಳಾಗಿದ್ದು ರೈತ ಚಳವಳಿಗಳ ನಡುವೆ ಸ್ವಾಮಿನಾಥನ್ ವರದಿಯಾಚೆಗಿನ ಚರ್ಚೆಗಳು ನಡೆಯಬೇಕಿದೆ...

ಸ್ವಾಮಿನಾಥನ್ ವರದಿಯನ್ನೇ ಜಾರಿಗೆ ತರದವರು ಅದಕ್ಕೂ ಹೆಚ್ಚಿನದನ್ನು ಒಪ್ಪುವರೇ..ಎಂಬ ಪ್ರಶ್ನೆ ನಂತರದ್ದು...ಮೊದಲು ನಮ್ಮ ಹಕ್ಕಿನ ಪಾಲೆಷ್ಟು ಎಂಬ ಬಗ್ಗೆ ಸರಿಯಾದ ಗ್ರಹಿಕೆ ಪಡೆದುಕೊಳ್ಳಬೇಕಿದೆ...ಆದು ಸಾಧನೆಯೆಡೆಗೆ ಮೊದಲ ಹೆಜ್ಜೆ. ಆದರೆ, ಇದರಲ್ಲಿ ಒಂದು ಸೂಕ್ಷ್ಮವೂ ಇದೆ. ರೈತ ಸರಕನ್ನು ಯಾರು ಕೊಂಡರೂ ಮೇಲಿನ ಲೆಕ್ಕಾಚಾರದಂತೆ ದರ ನೀಡಬೇಕೆಂಬುದು ಕಾಯ್ದೆಯಾದಾಗ, ಸರಕಾರ ಮತ್ತು ಖಾಸಗಿ ವರ್ತಕರು ಅದರ ಹೆಚ್ಚುವರಿ ಹೊರೆಯನ್ನು ಅಂತಿಮ ಬಳಕೆದಾರರ ಮೇಲೆಯೇ ವರ್ಗಾಯಿಸುತ್ತಾರೆ..

ಆಗ ಈಗಿರುವ ಆಹಾರ ಧಾನ್ಯದ ಬೆಲೆ ಮಾರುಕಟ್ಟೆಯಲ್ಲಿ ದುಪ್ಪಟ್ಟು ಹೆಚ್ಚಾಗುತ್ತದೆ... ಈ ದೇಶದ ಶೇ.80ರಷ್ಟು ರೈತಾಪಿ ಅಂತಿಮವಾಗಿ ಆಹಾರ ಕೊಳ್ಳುವವರೇ ಆಗಿರುವುದರಿಂದ ಮಾರುಕಟ್ಟೆಯಲ್ಲಿ ದರ ಹೆಚ್ಚಾದರೆ ಒಂದು ಕೈಯಲ್ಲಿ ಹೆಚ್ಚಾಗಿ ಕೊಟ್ಟ ಎಂಎಸ್‌ಪಿ ದರವನ್ನು ಮತ್ತೊಂದು ಕೈಯಲ್ಲಿ ರೈತರಿಂದಲೇ ಕಿತ್ತುಕೊಂಡಂತಾಗುತ್ತದೆ.
ಅದರಲ್ಲೂ ಇಂತಹ ಬೆಲೆ ಏರಿಕೆಯು ದಲಿತ ಸಮುದಾಯವೇ ಹೆಚ್ಚಾಗಿರುವ ರೈತ ಕೂಲಿಗಳ ಬದುಕಿನ ಮೇಲೆ ಇನ್ನೂ ತೀವ್ರವಾದ ಪರಿಣಾಮ ಬೀರಲಿದೆ.

ಈಗಾಗಲೇ ಬಜೆಟ್ ಪೂರ್ವ ಆರ್ಥಿಕ ಸರ್ವೇಯಲ್ಲಿ, ಎಂಎಸ್‌ಪಿಯನ್ನು ನಯಾಪೈಸೆ ಹೆಚ್ಚಿಸದಿದ್ದರೂ, ಪಡಿತರದಲ್ಲಿ ಕೊಡುವ ಧಾನ್ಯಗಳ ದರವನ್ನು ಹೆಚ್ಚಿಸಬೇಕೆಂಬ ಪ್ರಸ್ತಾಪ ಮಾಡಲಾಗಿದೆ...ಹಾಗೂ ಬಜೆಟ್‌ನಲ್ಲಿ ಮೇಲೆ ನೋಡಿದಂತೆ ರೈತರಿಗೆ ಬೆಂಬಲ ಬೆಲೆ ಒದಗಿಸಲು ಪೂರಕವಾಗಿದ್ದ ಯೋಜನೆಗಳಿಗೆ ಸಂಪನ್ಮೂಲಗಳನ್ನೇ ಕಡಿತಗೊಳಿಸಲಾಗಿದೆ. ಮತ್ತೊಂದು ಕ್ರೂರ ವ್ಯಂಗ್ಯವೇನೆಂದರೆ, ಬಳಕೆದಾರರ ಹಿತಾಸಕ್ತಿ ಹಾಗೂ ಆಹಾರ ಧಾನ್ಯಗಳ ಹಣದುಬ್ಬರದ ಅಪಾಯದ ಗುಮ್ಮವನ್ನು ತೋರಿಸುತ್ತಲೇ ರೈತರ ಸರಕುಗಳಿಗೆ ಲಾಭದಾಯಕ ದರವನ್ನು ನಿರಾಕರಿಸುತ್ತಾ ಬರಲಾಗಿದೆ...
ಆದರೆ ಇದು ಬಗೆಹರಿಸಲಾಗದ ವೈರುಧ್ಯವೇನಲ್ಲ...
ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಉಚಿತ, ವೈವಿಧ್ಯ ಹಾಗೂ ಸಾರ್ವತ್ರೀಕರಣ ಮಾಡಿದಲ್ಲಿ ಬಡ ಗ್ರಾಹಕರ-ಅದರಲ್ಲೂ ರೈತಕೂಲಿಗಳು, ಸಣ್ಣ-ಅತಿ ಸಣ್ಣ ಮತ್ತು ನಗರದ ಬಡವರ ಹೆಚ್ಚು-ಹಿತಾಸಕ್ತಿಗಳನ್ನು ರಕ್ಷಿಸಬಹುದು.
ಪರಿಣಿತರು ಮಾಡಿರುವ ಲೆಕ್ಕಾಚಾರಗಳನ್ನು ಕ್ರೋಡೀಕರಿಸಿ ಹೇಳುವುದಾದರೆ, ಹೆಚ್ಚುವರಿ ಎಂಎಸ್‌ಪಿ ಪಾವತಿಗೆ ಹೆಚ್ಚೆಂದರೆ 2 ಲಕ್ಷ ಕೋಟಿ ರೂ., ಉಚಿತ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆಗೆ ಹೆಚ್ಚೆಂದರೆ ಒಂದು ಲಕ್ಷ ಕೋಟಿ ರೂ.ಗಳು ಹೆಚ್ಚುವರಿಯಾಗಿ ಸರಕಾರಕ್ಕೆ ವೆಚ್ಚವಾಗುತ್ತದೆ.
ಅದರಲ್ಲಿ ರೈತರಿಗೆ ದಕ್ಕುವ ಹೆಚ್ಚುವರಿ ರೂ. 2 ಲಕ್ಷ ಕೋಟಿಯನ್ನು ಅವರು ಕೃಷಿ ಹಾಗೂ ಕೌಟುಂಬಿಕ ಅಗತ್ಯಗಳಿಗೇ ವೆಚ್ಚ ಮಾಡುತ್ತಾರೆ. ಆ ವೆಚ್ಚಗಳ ಮೇಲಿನ ಸರಾಸರಿ ಜಿಎಸ್‌ಟಿ ದರ ಶೇ.18 ಎಂದು ಹಿಡಿದರೂ, ಸರಕಾರ ರೈತರಿಗೆ ಕೊಡಬಹುದಾದ 2 ಲಕ್ಷ ಕೋಟಿಗಳಲ್ಲಿ 36,000 ಕೋಟಿ ಸರಕಾರಕ್ಕೆ ತೆರಿಗೆ ರೂಪದಲ್ಲಿ ವಾಪಸ್ ಸಂದಾಯವಾಗುತ್ತದೆ.

ಹೀಗಾಗಿ ಎಂಎಸ್‌ಪಿ ಹೆಚ್ಚಳ ಹಾಗೂ ಉಚಿತ ಮತ್ತು ಸಾರ್ವತ್ರಿಕ ಪಡಿತರಕ್ಕೆ ಸರಕಾರಕ್ಕೆ ಹೆಚ್ಚೆಂದರೆ 2.5 ಲಕ್ಷ ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗುತ್ತದೆ...
 

ಹೆಚ್ಚುವರಿ ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸಬಹುದು?
ಇತ್ತೀಚೆಗೆ OXFAM ಸಂಸ್ಥೆ ಮಾಡಿರುವ ವರದಿಯ ಪ್ರಕಾರ ಕೋವಿಡ್ ಅವಧಿಯಲ್ಲಿ ಸರಕಾರದ ಕಾರ್ಪೊರೇಟ್ ಪರ ನೀತಿಗಳಿಂದಾಗಿ ಈ ದೇಶದ ಕೇವಲ 100 ಶತಕೋಟ್ಯಧಿಪತಿಗಳ ಸಂಪತ್ತು 12 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.
ಹಾಗೂ ಮೋದಿ ಅವಧಿಯಲ್ಲಿ ಒಟ್ಟಾರೆಯಾಗಿ ಈ ದೇಶದ ಸಾವಿರ ಶತಕೋಟ್ಯಧಿಪತಿಗಳ ಸಂಪತ್ತು ಸರಾಸರಿ ಎರಡು ಪಟ್ಟು ಹೆಚ್ಚಾಗಿದೆ...
ಸಾವಿರ ಜನರ ಮೇಲೆ ಶೇ.2ರಷ್ಟು ಸಂಪತ್ತು ತೆರಿಗೆ-wealth tax- ಹಾಕಿದರೂ ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 4 ಲಕ್ಷ ಕೋಟಿ ಹರಿದು ಬರುತ್ತದೆ. ಈವರೆಗೆ ಪೆಟ್ರೋಲ್-ಡೀಸೆಲ್ ಬೆಲೆಗಳ ಅನಗತ್ಯ ಏರಿಕೆಯ ಮೂಲಕ ಬಡ-ಮಧ್ಯಮ ವರ್ಗವನ್ನು ಲೂಟಿ ಮಾಡಿ ಸಂಗ್ರಹಿಸಿರುವ ಮೊತ್ತವೇ 4 ಲಕ್ಷ ಕೋಟಿಯನ್ನು ಮೀರುತ್ತದೆ. ಹೀಗಾಗಿ ದಾರಿಯೂ ಇದೆ ಖಜಾನೆಯೂ ಇದೆ.

ಆದರೆ, ಈಗಾಗಲೇ, ಆರ್ಥಿಕ ಸರ್ವೇಯಲ್ಲಿ ಇಂದಿನ ಸಂದರ್ಭದಲ್ಲಿ ಭಾರತವು ಅಭಿವೃದ್ಧಿಯ ನೀತಿಗಳನ್ನು ಅರ್ಥಾತ್ ಸಂಪತ್ತು ಹೆಚ್ಚಿಸುವ ನೀತಿಗಳನ್ನು ಅನುಸರಿಸಬೇಕೇ ವಿನಾ ಅಸಮಾನತೆಯನ್ನು ಕಡಿಮೆ ಮಾಡುವ ನೀತಿಗಳನ್ನಲ್ಲ ಎಂದು ಸ್ಪಷ್ಟವಾಗಿ ಘೋಷಿಸಲಾಗಿದೆ.

ಇನ್ನ್ನು ಹಾಲಿ ಬಜೆಟ್‌ನಲ್ಲಿ ಮೋದಿ ಸರಕಾರ ಎಫ್‌ಸಿಐ ಮೇಲೆ ದಾಳಿ ಮಾಡುತ್ತಾ ಏಕಕಾಲದಲ್ಲಿ ಎಫ್‌ಸಿಐ, ಎಂಎಸ್‌ಪಿ ಹಾಗೂ ಪಡಿತರ ವ್ಯವಸ್ಥೆಯನ್ನು ರದ್ದುಗೊಳಿಸುವ ಬಾಣವನ್ನು ಹೂಡಿದೆ.

ಎಫ್‌ಸಿಐಗೆ ಬಜೆಟ್ ಕಡಿತ- ರೈತರಿಗೆ ಎಂಎಸ್‌ಪಿ ಹಾಗೂ ಬಡವರಿಗೆ ಪಡಿತರವೂ ಕಡಿತ!  

 ಎಫ್‌ಸಿಐ ಮೂಲಕ ಸರಕಾರ ರೈತರ ಸರಕನ್ನು ಖರೀದಿ ಮಾಡಿದರೆ ರೈತರಿಗೆ ಎಂಎಸ್‌ಪಿ ದರವೂ, ಬಡವರಿಗೆ ಪಡಿತರವೂ ದೊರೆಯುತ್ತದೆ. ಆದರೆ ರೈತರಿಗೆ ಹಾಗೂ ಬಡವರಿಗೆ ನೇರವಾಗಿ ದರ ಕಡಿತ ಮಾಡುವುದು ಕಷ್ಟ. ಆದ್ದರಿಂದಲೇ ಕುತಂತ್ರಿ ಸರಕಾರ ಕೃಷಿ ಮಸೂದೆಗಳಲ್ಲೂ ನೇರವಾಗಿ ಎಂಎಸ್‌ಪಿಯನ್ನಾಗಲಿ ಅಥವಾ ಪಡಿತರವನ್ನಾಗಲಿ ರದ್ದು ಮಾಡುತ್ತೇನೆಂದು ಹೇಳುತ್ತಿಲ್ಲ. ಬದಲಿಗೆ ಮೂಲ ಎಫ್‌ಸಿಐ ಅನ್ನು ರದ್ದು ಮಾಡುವ ಅಥವಾ ಖಾಸಗೀಕರಿಸುವ ಯೋಜನೆಗಳನ್ನು ಸದ್ದಿಲ್ಲದಂತೆ ಜಾರಿ ಮಾಡುತ್ತಾ ಬಂದಿದೆ. ಆ ಕುತಂತ್ರವನ್ನು ಮೋದಿ ಸರಕಾರ 2021-22ರ ಬಜೆಟ್‌ನಲ್ಲೂ ಮುಂದುವರಿಸಿದೆ. ವಾಸ್ತವವಾಗಿ ಈ ವರ್ಷ ಎಫ್‌ಸಿಐ ನಿರ್ನಾಮದ ಕುತಂತ್ರ ಇನ್ನೂ ವೇಗವಾಗಿ ನಡೆಯಲಿದೆ ಎಂಬುದನ್ನು ಈ ಬಜೆಟ್ ಸಾರಿ ಹೇಳುತ್ತಿದೆ.

ರೈತರಿಂದ ಎಂಎಸ್‌ಪಿ ದರದಲ್ಲಿ ಧಾನ್ಯಗಳನ್ನು ಖರೀದಿಸಿ ಅವನ್ನು ರಿಯಾಯಿತಿ ದರದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಈ ದೇಶದ 5 ಲಕ್ಷ ರೇಷನ್ ಅಂಗಡಿಗಳ ಮೂಲಕ 80 ಕೋಟಿ ಬಡವರಿಗೆ ತಿಂಗಳಿಗೆ ಸರಾಸರಿ 7 ಕೆಜಿ ಧಾನ್ಯಗಳನ್ನು ತಲುಪಿಸಲು ಎಫ್‌ಸಿಐಗೆ 2019-20ರ ಸಾಲಿನಲ್ಲಿ 2. 27 ಲಕ್ಷ ಕೋಟಿ ರೂ. ಖರ್ಚಾಗಿತ್ತು. ಆದರೆ ಅದಕ್ಕೆ ಬಜೆಟ್‌ನಿಂದ ಒದಗಿಸಿದ್ದು ಕೇವಲ 75,000 ಕೋಟಿ ರೂ. ಮಾತ್ರ. ಉಳಿದದ್ದನ್ನು ಸಾರ್ವಜನಿಕರ ಸಣ್ಣ ಉಳಿತಾಯ ಸಂಗ್ರಹಿಸುವ ಸಾರ್ವಜನಿಕ ಸಂಸ್ಥೆಯಾದ NSSF- ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ಸಾಲ ಪಡೆದುಕೊಳ್ಳಲು ಆದೇಶಿಸಿತು. ಇದು 2016ರಲ್ಲಿ ಮೋದಿ ಸರಕಾರ ಎಫ್‌ಸಿಐಯನ್ನು ಖಾಸಗೀಕರಿಸಲು ನಿರ್ಧಾರ ಮಾಡಿದಾಗಿನಿಂದಲೂ ನಡೆದುಕೊಂಡು ಬರುತ್ತಿದೆ.

ಆ ಮೂಲಕ ಸರಕಾರ ತನ್ನ ಧಣಿಗಳಾದ ಅಂತರ್‌ರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳಿಗೆ ತನ್ನ ಸರಕಾರ ಬಜೆಟ್‌ನಿಂದ ಸಬ್ಸಿಡಿಗಳಿಗಾಗಿ ಹೆಚ್ಚು ವ್ಯಯ ಮಾಡದೆ ವಿತ್ತೀಯ ಶಿಸ್ತನ್ನು ಪಾಲಿಸುತ್ತಿದ್ದೇನೆಂದು ತೋರಿಸಿಕೊಳ್ಳಲು ಬಳಸಿಕೊಳ್ಳುತ್ತದೆ. ಆದರೆ ಈ ಬಜೆಟ್‌ಗೆ ಮುಂಚೆ ಸರಕಾರವು ತನ್ನ ನೈಜ ಸಬ್ಸಿಡಿ ವೆಚ್ಚಗಳನ್ನು ಕದ್ದು-ಮುಚ್ಚಿ ಮಾಡುತ್ತಿರುವ ಬಗ್ಗೆ ಹಾಗೂ ಅದರಿಂದ ಸರಕಾರ ಬಜೆಟ್‌ನಲ್ಲಿ ಪಾರದರ್ಶಕತೆ ತೋರದಿರುವ ಬಗ್ಗೆ ಅಂತರ್‌ರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಇದರ ಜೊತೆಗೆ ಭಾರತ ದೇಶದ ಬಡವರ ಆಹಾರ ಭದ್ರತೆಗೆಂದು ಸಬ್ಸಿಡಿ ಕೊಡಲು WTO ಕೊಟ್ಟಿದ ಗಡುವು 2017ಕ್ಕೆ ಮುಕ್ತಾಯವಾಗಿದೆ. ಅಲ್ಲದೆ, ಎಫ್‌ಸಿಐಯನ್ನು ಮುಚ್ಚಿ ಹಾಕಿ ಧಾನ್ಯ ಮಾರಾಟದಲ್ಲಿ ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ಅವಕಾಶ ಕೊಡಬೇಕೆಂಬ ಒತ್ತಡವು ಅದಾನಿ-ಅಂಬಾನಿ ಹಾಗೂ ಅವರ ವಿದೇಶಿ ಪಾಲುದಾರರ ದೈತ್ಯ ಧಾನ್ಯ ಸಗಟುದಾರರಿಂದ ಹೆಚ್ಚಾಗಿದೆ.

ಈ ಎಲ್ಲಾ ಒತ್ತಡಗಳಿಗೆ ಮಣಿದು ಸರಕಾರ ಈ ಸಾಲಿನಿಂದ ಎಫ್‌ಸಿಐಗೆ NSSFನಿಂದ ಸಾಲ ಪಡೆದುಕೊಳ್ಳುವ ಪರಿಪಾಠವನ್ನು ನಿಲ್ಲಿಸಿದೆ ಮತ್ತು ಆಹಾರ ಸರಬರಾಜು ಬಾಬತ್ತಿನಿಂದಲೇ NSSFಗೆ ರೂ. 1.5 ಲಕ್ಷ ಕೋಟಿಯನ್ನೂ ವಾಪಸ್ ಮಾಡಿದೆ. 2021-22ರ ಬಜೆಟ್‌ನಲ್ಲಿ ಎಫ್‌ಸಿಐನ ಸಬ್ಸಿಡಿಗೆ ಅಗತ್ಯವಾಗಿರುವ ಮೊತ್ತವನ್ನು ಬಜೆಟ್‌ನಿಂದಲೇ ಪೂರೈಸಿರುವುದಾಗಿ ಮೋದಿ ಸರಕಾರ ಹೇಳಿಕೊಂಡಿದೆ.

ಆದರೆ ಎಷ್ಟು? 2019-20ರ ಸಾಲಿನಲ್ಲಿ ದೇಶದ ಆರ್ಥಿಕತೆ ಮಂದಗತಿಗೆ ತಲುಪಿ ಉದ್ಯೋಗ ಮತ್ತು ಆದಾಯಗಳು ಕಡಿಮೆಯಾಗುತ್ತಿದ್ದಾಗಲೇ ಎಫ್‌ಸಿಐಗೆ ಬಜೆಟ್ ಮತ್ತು ಬಜೆಟೇತರ ಮೂಲದಿಂದ ಒದಗಿಸಿದ ಮೊತ್ತ 2.27 ಲಕ್ಷ ಕೋಟಿ ರೂಪಾಯಿ... 2020-21ರ ಸಾಲಿನಲ್ಲಿ ಕೋವಿಡ್ ಅಪ್ಪಳಿಸಿತು. ಈ ದೇಶದ 14 ಕೋಟಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡರು. ವಾಪಸ್ ಹಳ್ಳಿಗಳಿಗೆ ಮರಳಿದರು. ಲಾಕ್‌ಔಟ್ ಕಾರಣಕ್ಕೆ ಬೆಳೆದದ್ದನ್ನು ಮಾರಲು ಆಗದೆ ರೈತಾಪಿ ಅದರಲ್ಲೂ ಈ ದೇಶದ ಶೇ. 86ರಷ್ಟು ಸಣ್ಣ ರೈತಾಪಿ ಆದಾಯವನ್ನು ಕಳೆದುಕೊಂಡರು. ಸರಕಾರವು ರೈತರ ಆದಾಯ ಮತ್ತು ಉದ್ಯೋಗಗಳನ್ನು ಖಾತರಿ ಮಾಡುವ ಉದ್ದೇಶವನ್ನೇ ಹೊಂದಿರಲಿಲ್ಲ. ಆದರೆ ದೇಶಾದ್ಯಂತ ಸರಕಾರದ ಈ ನಿಷ್ಕರುಣಿ ಧೋರಣೆಯ ಬಗ್ಗೆ ಪ್ರತಿರೋಧ ಬಂದ ಮೇಲೆ ಆರು ತಿಂಗಳ ಕಾಲ ಹೆಚ್ಚುವರಿ ಆಹಾರವನ್ನು ಪಡಿತರದ ಮೂಲಕ ಒದಗಿಸಲು ಒಪ್ಪಿಕೊಂಡಿತ್ತು. ಈ ಬಾಬತ್ತಿಗಾಗಿ 2020-21ರ ಸಾಲಿನಲ್ಲಿ ಎಫ್‌ಸಿಐ-ಪಡಿತರ ವೆಚ್ಚವು ರೂ. 2.27 ಲಕ್ಷ ಕೋಟಿಯಿಂದ 3.44 ಲಕ್ಷ ಕೋಟಿಗಳಿಗೇರಿತ್ತು. 2021-22ರ ಈ ಸಾಲಿನಲ್ಲಿ ವ್ಯಾಕ್ಸಿನ್ ಬಂದರೂ, ವರ್ಷ ಕಳೆದರೂ ಈ ಪರಿಸ್ಥಿತಿಗಳಲ್ಲಿ ಯಾವುದೇ ಬಗೆಯ ಗಮನಾರ್ಹ ಸುಧಾರಣೆಯಾಗಿಲ್ಲ. ಹೀಗಾಗಿ ಏನಿಲ್ಲವೆಂದರೂ ಕಳೆದ ವರ್ಷ ಪಡಿತರ ವ್ಯವಸ್ಥ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News