ಉಲ್ಬಣಿಸಿದ ಡೆಲ್ಟಾ ಸೋಂಕು ಪ್ರಕರಣ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮತ್ತೆ ಲಾಕ್ಡೌನ್ ಜಾರಿ

Update: 2021-06-25 16:32 GMT
ಸಾಂದರ್ಭಿಕ ಚಿತ್ರ

 ಸಿಡ್ನಿ, ಜೂ.25: ಕೊರೋನ ವೈರಸ್ ನ ಹೊಸ ರೂಪಾಂತರಿ ವೈರಸ್ ಡೆಲ್ಟಾ ಸೋಂಕು ಪ್ರಕರಣ ಉಲ್ಬಣಗೊಂಡಿರುವುದರಿಂದ ಕೇಂದ್ರ ಸಿಡ್ನಿ ಮತ್ತು ಬಾಂಡಿ ಬಳಿಯ ಆಕರ್ಷಕ ಬೀಚ್ ಪ್ರದೇಶಗಳಲ್ಲಿ ಶುಕ್ರವಾರದಿಂದ ಲಾಕ್ಡೌನ್ ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ. 

ಎರಡು ವಾರದ ಹಿಂದೆ ಸಿಡ್ನಿ ಅಂತರಾಷ್ಟ್ರೀಯ ವಿಮಾನದ ಸಿಬ್ಬಂದಿಗಳನ್ನು ಹೋಟೆಲ್ ನ ಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದ ಕಾರು ಚಾಲಕನೊಬ್ಬನಲ್ಲಿ ಡೆಲ್ಟಾ ಸೋಂಕು ಪ್ರಕರಣ ಕಂಡುಬಂದ 15 ದಿನದೊಳಗೇ ಮತ್ತೆ 65 ಪ್ರಕರಣ ದಾಖಲಾಗಿದೆ. ಈ ಮಧ್ಯೆ ಸಿಡ್ನಿಯ ಬಳಿಯಿರುವ ಪ್ರಸಿದ್ಧ ಬೀಚ್ ಗೆ ಸಾವಿರಾರು ಮಂದಿ ದಿನಾ ಭೇಟಿ ನೀಡುತ್ತಿದ್ದು ಇದೇ ಕಾರಿನಲ್ಲಿ ಹಲವರು ತೆರಳಿದ್ದಾರೆ. 

ಈಗ ಕಾರು ಡ್ರೈವರ್ ನ ಸಂಪರ್ಕದಲ್ಲಿದ್ದ ಹಲವರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ವೈರಸ್ ಸಿಡ್ನಿ ನಗರದಲ್ಲಿ ಅತ್ಯಂತ ಕ್ಷಿಪ್ರವಾಗಿ ಹರಡುತ್ತಿದೆ. ಇಲ್ಲಿರುವ ಅಂಗಡಿಗಳು, ಮಾರುಕಟ್ಟೆಗಳಿಗೆ ಭೇಟಿ ನೀಡುವ ಜನರ ಮೂಲಕ ಕುಟುಂಬದವರಿಗೂ ಸೋಂಕು ಹರಡುತ್ತಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News