ಮುಂದಿನ ವಾರದಿಂದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಮತ್ತಷ್ಟು ಏರುವ ಸಾಧ್ಯತೆ: ವರದಿ

Update: 2021-10-27 12:52 GMT

ಹೊಸದಿಲ್ಲಿ : ಪ್ರತಿ ಎಲ್‍ಪಿಜಿ ಸಿಲಿಂಡರ್ ಮಾರಾಟದ ವೇಳೆ ತೈಲ ಕಂಪೆನಿಗಳಿಗೆ ಉಂಟಾಗುತ್ತಿರುವ ನಷ್ಟದ ಮೊತ್ತ ರೂ 100ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್‍ಪಿಜಿ ದರಗಳು ಮುಂದಿನ ವಾರ ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ. ಆದರೆ ಎಷ್ಟು ಏರಿಕೆಯಾಗಬಹುದೆಂಬುದು ಸರಕಾರ ನೀಡುವ ಅನುಮತಿಯ ಮೇಲೆ ಅವಲಂಬಿತವಾಗಿದೆ ಎಂದು newindianexpress.com ವರದಿ ಮಾಡಿದೆ.

ಸರಕಾರ ಅಡುಗೆ ಅನಿಲ ಬೆಲೆ ಏರಿಕೆಗೆ ಅನುಮತಿಸಿದರೆ ಇದು  ಇತ್ತೀಚಿನ ಐದನೇ ಬಾರಿಯ ಏರಿಕೆಯಾಗಲಿದೆ. ಅಕ್ಟೋಬರ್ 6ರಂದು ತಲಾ ಸಿಲಿಂಡರ್ ಬೆಲೆ ರೂ 15ರಷ್ಟು ಏರಿಕೆ ಮಾಡಲಾಗಿದೆ. ಈ ಮೂಲಕ ಜುಲೈ ತಿಂಗಳಿನಿಂದ 14.2 ಕೆಜಿ ಸಿಲಿಂಡರ್ ಬೆಲೆ ರೂ 90ರಷ್ಟು ಏರಿಕೆಯಾಗಿದೆ.

ಪ್ರಸ್ತುತ ಅಡುಗೆ ಅನಿಲ ಬೆಲೆ ಸಿಲಿಂಡರ್‍ಗೆ ದಿಲ್ಲಿ ಹಾಗೂ ಮುಂಬೈನಲ್ಲಿ ತಲಾ ರೂ 899.50 ಹಾಗೂ ಕೊಲ್ಕತ್ತಾದಲ್ಲಿ ರೂ 926 ಆಗಿದೆ.

ಇನ್ನೊಂದೆಡೆ, ಎರಡು ದಿನಗಳ ವಿರಾಮದ ನಂತರ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಲಾ ಲೀಟರ್‍ಗೆ 35 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆ ಈಗ ದಿಲ್ಲಿಯಲ್ಲಿ ಲೀಟರ್‍ಗೆ ರೂ 107.94  ಹಾಗೂ ಮುಂಬೈನಲ್ಲಿ ರೂ 113.80 ಆಗಿದೆ. ಡೀಸೆಲ್ ಬೆಲೆ ದಿಲ್ಲಿಯಲ್ಲಿ ರೂ 96.67 ಹಾಗೂ ಮುಂಬೈನಲ್ಲಿ ರೂ 104.75 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News